Pushpa 3 update: ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸರಣಿಯ ಎರಡು ಚಿತ್ರಗಳು ಭಾರೀ ಯಶಸ್ಸು ಕಂಡಿವೆ. ಪುಷ್ಪ: ದಿ ರೈಸ್ (2021) ದೇಶಾದ್ಯಂತ ಸಂಚಲನ ಮೂಡಿಸಿದರೆ, ಪುಷ್ಪ 2: ದಿ ರೂಲ್ (2024) ದಾಖಲೆಮಾಡುವ ಮಟ್ಟದ ಕಲೆಕ್ಷನ್ ಗಳಿಸಿತು. ಈ ನಡುವೆ, ಪುಷ್ಪ 3 ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಈ ವಿಷಯದ ಕುರಿತು ಈ ಸಿನಿಮಾದ ಮುಂದುವರೆದ ಭಾಗವನ್ನು ಮಾಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದರ ಕುರಿತು ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ. ಇವೆಲ್ಲ ಸುದ್ದೀಗಳ ನಡುವೆ SIIMA 2025 ಪ್ರಶಸ್ತಿ ಸಮಾರಂಭದಲ್ಲಿ ಪುಷ್ಪ 2 ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
SIIMA 2025 ನಲ್ಲಿ ಪುಷ್ಪ 2 ದ ಬೀಗ್ ವಿನ್
ದುಬೈನಲ್ಲಿ ಅದ್ದೂರಿಯಾಗಿ ನಡೆದ SIIMA 2025 ಪ್ರಶಸ್ತಿ ಸಮಾರಂಭದಲ್ಲಿ ಪುಷ್ಪ 2 ಚಿತ್ರ ಭರ್ಜರಿ ಪ್ರದರ್ಶನ ನೀಡಿತು. ಈ ಸಿನಿಮಾ ಐದು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿತು:
ಅತ್ಯುತ್ತಮ ನಟ – ಅಲ್ಲು ಅರ್ಜುನ್
ಅತ್ಯುತ್ತಮ ನಟಿ – ರಶ್ಮಿಕಾ ಮಂದಣ್ಣ
ಅತ್ಯುತ್ತಮ ನಿರ್ದೇಶಕ – ಸುಕುಮಾರ್
ಅತ್ಯುತ್ತಮ ಸಂಗೀತ ನಿರ್ದೇಶಕ – ದೇವಿ ಶ್ರೀ ಪ್ರಸಾದ್
ಅತ್ಯುತ್ತಮ ಗಾಯಕ – ಶಂಕರ್ ಮಹದೇವನ್
ಇದನ್ನೂ ಓದಿ: ಮದುವೆಗಾಗಿ ಧರ್ಮ ಬದಲಿಸಿದ ನಟಿ.. ಏಕಾಏಕಿ ಗುಂಡಿಕ್ಕಿ ಕೊಂದ ಪತಿ! ಸ್ಟಾರ್ ನಾಯಕಿಯ ಭೀಕರ ಅಂತ್ಯ..
ಪುಷ್ಪ 3 ಬಗ್ಗೆ ಸುಕುಮಾರ್ ಕ್ಲಾರಿಟಿ
ಪ್ರಶಸ್ತಿ ಸ್ವೀಕರಿಸಿದ ನಂತರ ನಿರ್ದೇಶಕ ಸುಕುಮಾರ್ ವೇದಿಕೆಯಲ್ಲಿ ದೊಡ್ಡ ಘೋಷಣೆ ಮಾಡಿದರು. ಅವರು ಸ್ಪಷ್ಟವಾಗಿ ಹೇಳಿದರು. “ಪುಷ್ಪ 3 ಖಂಡಿತವಾಗಿಯೂ ಬರಲಿದೆ.” ಈ ಹೇಳಿಕೆಯಿಂದ ಇಷ್ಟು ದಿನ ಅಭಿಮಾನಿಗಳಲ್ಲಿ ಇದ್ದ ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ. ಹಿಂದೆ “ಪುಷ್ಪ 3: ದಿ ರಾಂಪೇಜ್” ಶೀರ್ಷಿಕೆಯ ಪೋಸ್ಟರ್ ಹೊರಬಿದ್ದರೂ, ಪ್ರಾಜೆಕ್ಟ್ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಈಗ ಎಲ್ಲರ ಪ್ರಶ್ನೆ ಒಂದೇ – ಪುಷ್ಪ 3 ಯಾವಾಗ ಸೆಟ್ಟೇರಲಿದೆ? ಕಥೆ ಹೇಗಿರಲಿದೆ? ಬಿಡುಗಡೆಯಾಗುವ ಶೀರ್ಷಿಕೆ ಏನು? ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಇದಕ್ಕೂ ನಡುವೆ, ನಿರ್ದೇಶಕ ಸುಕುಮಾರ್ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಕೂಡ ಅಟ್ಲೀ ನಿರ್ದೇಶನದ ದೊಡ್ಡ ಬಜೆಟ್ ಸಿನಿಮಾಗೆ ಸೈನ್ ಮಾಡಿದ್ದಾರೆ. ಇದರಿಂದಾಗಿ ಪುಷ್ಪ 3 ಶೂಟಿಂಗ್ ಯಾವಾಗ ಪ್ರಾರಂಭವಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಆದರೂ, ನಿರ್ದೇಶಕರೇ ಖಚಿತಪಡಿಸಿದ ಕಾರಣ, ಅಭಿಮಾನಿಗಳು ಈಗ ಭರವಸೆಯಿಂದಿದ್ದಾರೆ. ಪುಷ್ಪ 3 ಖಂಡಿತವಾಗಿಯೂ ತೆರೆಗೆ ಬರುತ್ತದೆ. ಆದರೆ ಅದು “ದಿ ರಾಂಪೇಜ್” ಶೀರ್ಷಿಕೆಯೊಂದಿಗೆ ಬರುತ್ತಾ ಅಥವಾ ಹೊಸ ಶೀರ್ಷಿಕೆ ಇರುತ್ತದೆಯಾ ಎಂಬ ಸಸ್ಪೆನ್ಸ್ ಇನ್ನೂ ಮುಂದುವರಿದಿದೆ.









