ಮಧ್ಯರಾತ್ರಿ ಸಲ್ಮಾನ್ ಖಾನ್ ಮನೆಗೆ ನುಗ್ಗಲು ಪ್ರಯತ್ನಿಸಿದ ಯುವತಿ..! ಕಾರಣ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತೆ

Salman Khan house : ಜೀವ ಬೆದರಿಕೆ ಹಿನ್ನೆಲೆ ಸದ್ಯ ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಅನುಮತಿ ಇಲ್ಲದೆ ಸಲ್ಲು ಮನೆಯ ಒಳಗೆ ಹೋಗಲು ಯಾರಿಗೂ ಸಾಧ್ಯವಿಲ್ಲ. ಆದರೆ ಒರ್ವ ಯುವತಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಅನಧಿಕೃತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : May 22, 2025, 07:19 PM IST
    • ಜೀವ ಬೆದರಿಕೆ ಹಿನ್ನೆಲೆ ಸದ್ಯ ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.
    • ಅನುಮತಿ ಇಲ್ಲದೆ ಸಲ್ಲು ಮನೆಯ ಒಳಗೆ ಹೋಗಲು ಯಾರಿಗೂ ಸಾಧ್ಯವಿಲ್ಲ.
    • ಒರ್ವ ಯುವತಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಅನಧಿಕೃತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ.
ಮಧ್ಯರಾತ್ರಿ ಸಲ್ಮಾನ್ ಖಾನ್ ಮನೆಗೆ ನುಗ್ಗಲು ಪ್ರಯತ್ನಿಸಿದ ಯುವತಿ..! ಕಾರಣ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತೆ

Salman Khan : ಬಿಟೌನ್‌ ನಟ ಸಲ್ಮಾನ್ ಖಾನ್ ಅವರ ಬಿಗಿ ಭದ್ರತೆಯನ್ನು ದಾಟಿ ಮೇ 19 ರ ಮಧ್ಯರಾತ್ರಿ, ಮಹಿಳೆಯೊಬ್ಬರು ಸಲ್ಲು ಭಾಯ್‌ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿಯ ಜಾಗರೂಕತೆಯಿಂದಾಗಿ ಲಿಫ್ಟ್ ದಾಟಿ ಆಕೆಗೆ ಒಳ ಹೋಗಲು ಸಾಧ್ಯವಾಗಲಿಲ್ಲ. ಇದೀಗ ಈ ಘಟನೆ ಸಂಚಲನ ಮೂಡಿಸಿದೆ.

Add Zee News as a Preferred Source

ಮಾಹಿತಿ ಪ್ರಕಾರ, ಮಹಿಳೆಗೆ 32 ವರ್ಷ ವಯಸ್ಸಾಗಿದ್ದು, ಆಕೆಯ ಹೆಸರು ಇಶಾ ಛಾಬ್ರಾ ಎಂದು ಹೇಳಲಾಗಿದೆ. ಮೇ 19 ರಂದು ಬೆಳಗಿನ ಜಾವ 3.30 ಕ್ಕೆ ಇಶಾ ಅನಧಿಕೃತವಾಗಿ ಸಲ್ಮಾನ್ ಮನೆ ಪ್ರವೇಶಿಸಲು ಪ್ರಯತ್ನಿಸಿದಳು. ಘಟನೆ ನಡೆದ ತಕ್ಷಣ ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಪೊಲೀಸ್ ತಂಡ ಇಶಾ ಛಾಬ್ರಾ ಅವರನ್ನು ಬಂಧಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ..

ಇದನ್ನೂ ಓದಿ:ವೇಶ್ಯವಾಟಿಕೆ, 5 ಸ್ಟಾರ್‌ ಹೊಟೇಲ್‌ನಲ್ಲಿ ಸ್ಟಾರ್‌ ನಟಿ ಬಂಧನ..! ಕನ್ನಡದ ಖ್ಯಾತ ಹೀರೋಯಿನ್‌ಗೆ ಸಂಕಷ್ಟ

ಇಶಾ ಛಬ್ರಾ ಮಧ್ಯರಾತ್ರಿ ಸಲ್ಮಾನ್ ಖಾನ್ ಮನೆಗೆ ಪ್ರವೇಶಿಸಲು ಏಕೆ ಪ್ರಯತ್ನಿಸಿದಳು ಎಂಬುದನ್ನು ಪೊಲೀಸರು ಈಗ ಬಹಿರಂಗ ಪಡಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಖಾರ್ ಪ್ರದೇಶದಲ್ಲಿ ವಾಸಿಸುವ ಈ ಹುಡುಗಿ ತಾನು ತಪ್ಪಾಗಿ ಸಲ್ಮಾನ್ ಇರುವ ಕಟ್ಟಡಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಮೂಲದ ಪ್ರಕಾರ, ಮಹಿಳೆ ಖಾರ್ ವೆಸ್ಟ್ ಪ್ರದೇಶದ ನಿವಾಸಿ, ಅಂದರೆ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಬಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಸಲ್ಲು ಮನೆ ಪ್ರವೇಶಕ್ಕೆ ಯುವಕನಿಂದ ಯತ್ನ : ಇಶಾ ಘಟನೆ ನಡೆದ ಮರುದಿನ, ಅಂದರೆ ಮೇ 20 ರಂದು ಸಂಜೆ 7:15 ಕ್ಕೆ, ಒಬ್ಬ ವ್ಯಕ್ತಿ ಸಲ್ಮಾನ್ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಈ ವ್ಯಕ್ತಿಯ ಹೆಸರು ಜಿತೇಂದ್ರ ಕುಮಾರ್ ಸಿಂಗ್ ಮತ್ತು ಅವರಿಗೆ 23 ವರ್ಷ. ಜಿತೇಂದ್ರ ಕುಮಾರ್ ಸಿಂಗ್ ಛತ್ತೀಸ್‌ಗಢದ ನಿವಾಸಿ ಎಂದು ಹೇಳಲಾಗುತ್ತಿದೆ. ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News