'ಬಾಯಿ ಮುಚ್ಚಿಕೊಂಡು ಇರಿ..', ಪಾಪರಾಜಿಗಳ ಜೊತೆ ಜಯಾ ಬಚ್ಚನ್ ಜಗಳ.. ಕಂಟ್ರೋಲ್‌ ಕಳೆದುಕೊಂಡು ಅಂಥಾ ಮಾತು ಅನ್ನೋದಾ!

Jaya Bachchan angry on paparazzi : ಜಯಾ ಬಚ್ಚನ್ ಮತ್ತೊಮ್ಮೆ ಪಾಪರಾಜಿಗಳ ಮೇಲೆ ಕೋಪಗೊಂಡಿದ್ದಾರೆ. ಶ್ವೇತಾ ಬಚ್ಚನ್ ಜೊತೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಪ್ರಸ್ತುತ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Nov 14, 2025, 11:42 AM IST
    • ಜಯಾ ಬಚ್ಚನ್ ಮತ್ತೊಮ್ಮೆ ಪಾಪರಾಜಿಗಳ ಮೇಲೆ ಕೋಪಗೊಂಡಿದ್ದಾರೆ.
    • ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗುವಾಗ ಈ ಘಟನೆ ನಡೆದಿದೆ.
    • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..
'ಬಾಯಿ ಮುಚ್ಚಿಕೊಂಡು ಇರಿ..', ಪಾಪರಾಜಿಗಳ ಜೊತೆ ಜಯಾ ಬಚ್ಚನ್ ಜಗಳ.. ಕಂಟ್ರೋಲ್‌ ಕಳೆದುಕೊಂಡು ಅಂಥಾ ಮಾತು ಅನ್ನೋದಾ!

Jaya Bachchan news : ಇತ್ತೀಚಿಗೆ ಹಿರಿಯ ನಟಿ ಜಯಾ ಬಚ್ಚನ್ ಮುಕ್ತ ಮಾತು ಹಾಗೂ ಹಲವಾರು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಜಯಾ ಮತ್ತು ಪಾಪರಾಜಿಗಳು ಎಂದಿಗೂ ಒಳ್ಳೆಯ ಸಂಬಂಧ ಹೊಂದಿಲ್ಲ. ಇದಕ್ಕೆ ಉದಾರಹಣೆ ಅಂದ್ರೆ, ಹಲವಾರು ಬಾರಿ ಫೋಟೋಗ್ರಾಫರ್‌ಗಳಿಗೆ ಕಪಾಳಮೋಕ್ಷ ಮಾಡಿದ ಘಟನೆಗಳನ್ನು ನೆನಪಿಸಿಕೊಳ್ಳಬಹುದು.. ಇದೀಗ ಮತ್ತೊಮ್ಮೆ ಪಾಪರಾಜಿಗಳ ಜೊತೆ ಜಗಳವಾಡಿಕೊಂಡಿದ್ದಾರೆ ಬಿಗ್‌ ಬಿ ಪತ್ನಿ.. 

Add Zee News as a Preferred Source

ಹೌದು.. ಜಯಾ ಬಚ್ಚನ್‌ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ಅವರೊಂದಿಗೆ ಕಾರ್ಯಕ್ರಮಕ್ಕಾಗಿ ಮುಂಬೈ ತಲುಪಿದ್ದರು. ಅವರು ಸ್ಥಳವನ್ನು ತಲುಪಿದ ತಕ್ಷಣ, ಪಾಪರಾಜಿಗಳು ಫೋಟೋ ತೆಗೆಯಲು ಮುಗಿಬಿದ್ದರು. ಇದನ್ನು ನೋಡಿ ಜಯಾ ಬಚ್ಚನ್ ಅವರ ಕೋಪ ಭುಗಿಲೆದ್ದಿತು. ಈ ಕುರಿತ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ರಘು 2ನೇ ಬಾರಿಗೆ ಕ್ಯಾಪ್ಟನ್‌ ಆಗಿದ್ದೆ ರಕ್ಷಿತಾ ಶೆಟ್ಟಿಯಿಂದ..! ಕೊನೆಗೂ ವರ್ಕೌಟ್‌ ಆಯ್ತು ಪುಟ್ಟಿ ಪ್ಲಾನ್‌.. ಹೇಗೆ ಗೊತಾ?

ಫೋಟೋಗಳನ್ನು ತೆಗೆಯಲು ಮುಗಿಬಿದ್ದ ಪಾಪರಾಜಿಗಳನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡುತ್ತಾ.. 'ಕೆಟ್ಟ ಕೆಲಸಗಳನ್ನು ಮಾಡಬೇಡಿ, ಬಾಯಿ ಮುಚ್ಚಿಕೊಳ್ಳಿ' ಎಂದು ಜಯಾ ಗುಡುಗಿದರು. ಈ ವೇಳೆ ಅವರು ಬಿಳಿ ಉಡುಗೆ ಮತ್ತು ಮಾಸ್ಕ್‌ ಧರಿಸಿದ್ದನ್ನು ಕಾಣಬಹುದು. ಈ ದೃಶ್ಯ ಪ್ರಸ್ತುತ ವೈರಲ್‌ ಆಗುತ್ತಿದೆ..

ವೈರಲ್ ಆಗಿರುವ ವಿಡಿಯೋದಲ್ಲಿ, ಜಯಾ ಬಚ್ಚನ್ ತುಂಬಾ ಕೋಪಗೊಂಡಿರುವುದು ಕಂಡುಬರುತ್ತದೆ. ಅವರು ಪಾಪರಾಜಿಗಳ ಕಡೆಗೆ ನೋಡುತ್ತಾ.. ಬೆರಳು ತೋರಿಸಿ, "ನೀವು ಫೋಟೋ ತೆಗೆಯಿರಿ, ಅಸಭ್ಯವಾಗಿ ವರ್ತಿಸಬೇಡಿ. ಬಾಯಿ ಮುಚ್ಚಿಕೊಳ್ಳಿ, ಬಾಯಿ ಮುಚ್ಚಿಕೊಂಡು ಫೋಟೋ ತೆಗೆಯಿರಿ.. ಅಷ್ಟೇ.. ಎಂದು ಹೇಳುವುದನ್ನು ಕಾಣಬಹುದು.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News