Jitendra Shinde Viral Posts: ಬಿಗ್ ಬಿ ಪೊಲೀಸ್ ಅಂಗರಕ್ಷಕ ಜಿತೇಂದ್ರ ಸಿಂಧೆ ವರ್ಗಾವಣೆ, ವಾರ್ಷಿಕ 1.5ಕೋಟಿ ವೇತನ ಸುದ್ದಿಗಳ ಹಿನ್ನೆಲೆ ತನಿಖೆ ಆರಂಭ
Amitabh Bachchan Security: ಇತ್ತೀಚೆಗೆ, ಬಾಲಿವುಡ್ ನ ಮಹಾನಾಯಕ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪೊಲೀಸ್ ಅಂಗರಕ್ಷಕ ಜಿತೇಂದ್ರ ಶಿಂಧೆ ಅವರ ಗಳಿಕೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (Social Meida) ಹಲವು ಪೋಸ್ಟ್‌ಗಳು ವೈರಲ್ (Jitendra Shindhe Viral Posts) ಆಗುತ್ತಿದ್ದು, ಅವರ ವಾರ್ಷಿಕ ವೇತನ 1.5 ಕೋಟಿ ರೂ. ಎನ್ನಲಾಗಿದೆ. ಈ ಪ್ರಕರಣದಲ್ಲಿ, ಜಿತೇಂದ್ರ ವಿರುದ್ಧ ಇದೀಗ ತನಿಖೆ ಆರಂಭವಾಗಿದ್ದು, ಅವರ ವರ್ಗಾವಣೆ ಕೂಡ ಮಾಡಲಾಗಿದೆ.
Amitabh Bachchan Security: ಇತ್ತೀಚೆಗೆ, ಬಾಲಿವುಡ್ ನ ಮಹಾನಾಯಕ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪೊಲೀಸ್ ಅಂಗರಕ್ಷಕ ಜಿತೇಂದ್ರ ಶಿಂಧೆ ಅವರ ಗಳಿಕೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (Social Meida) ಹಲವು ಪೋಸ್ಟ್‌ಗಳು ವೈರಲ್ (Jitendra Shindhe Viral Posts) ಆಗುತ್ತಿದ್ದು, ಅವರ ವಾರ್ಷಿಕ ವೇತನ 1.5 ಕೋಟಿ ರೂ. ಎನ್ನಲಾಗಿದೆ. ಈ ಪ್ರಕರಣದಲ್ಲಿ, ಜಿತೇಂದ್ರ ವಿರುದ್ಧ ಇದೀಗ ತನಿಖೆ ಆರಂಭವಾಗಿದ್ದು, ಅವರ ವರ್ಗಾವಣೆ ಕೂಡ ಮಾಡಲಾಗಿದೆ.
ಕಾನ್ ಸ್ಟೇಬಲ್ ಜಿತೇಂದ್ರ ಶಿಂಧೆ ಅವರನ್ನು ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ. . ಶಿಂಧೆ ಇದುವರೆಗೂ ಅಮಿತಾಬ್ ಬಚ್ಚನ್ (Amitabh Bachchan) ಅವರ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ಮಾಧ್ಯಮ ವರದಿಗಳಲ್ಲಿ ಅವರ ವಾರ್ಷಿಕ ಗಳಿಕೆ 1.5 ಕೋಟಿ ರೂ. ಇದೆ (Jitendra Shinde Salary) ಎಂದು ಬಿತ್ತರಗೊಂಡಿತ್ತು. ಅದರ ನಂತರ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಅವರಿಗೆ ಅಷ್ಟೊಂದು ಆದಾಯ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆಹಚ್ಚಲಾಗುವುದು ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಶಿಂಧೆ ತಮ್ಮ ಪತ್ನಿ ಭದ್ರತಾ ಏಜೆನ್ಸಿಯನ್ನು ನಡೆಸುತ್ತಿದ್ದಾಳೆ ಎಂದು ಪೊಲೀಸರಿಗೆ ಹೇಳಿದ್ದಾರೆ ಎನ್ನಲಾಗಿದೆ ತನ್ಮೂಲಕ ಅವರು, ಅನೇಕ ಖ್ಯಾತನಾಮರಿಗೆ ಭದ್ರತೆ ಒದಗಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅಮಿತಾಬ್ ಬಚ್ಚನ್ ತಮಗೆ 1.5 ಕೋಟಿ ರೂಪಾಯಿ ನೀಡುತ್ತಾರೆ ಎಂಬ ವರದಿಯನ್ನು ಶಿಂಧೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಶಿಂಧೆ ಅವರು ತಮ್ಮ ಈ ಹಣಕಾಸಿನ ಮೂಲದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆಯೇ ಅಥವಾ ಇನ್ನಾವುದಾದರೊಂದು ಮೂಲದಿಂದ ಅವರಿಗೆ ಹಣ ಬರುತ್ತಿದೆ ಎಂಬುದರ ತನಿಖೆ ರಾಜ್ಯ ಸರ್ಕಾರ ಅನ್ದೆಸುತ್ತಿದೆ. ಮಹಾರಾಷ್ಟ್ರ ಸರ್ಕಾರದ ನಿಯಮಗಳ ಪ್ರಕಾರ ಓರ್ವ ಸರ್ಕಾರಿ ನೌಕರ ಎರಡು ಸಂಸ್ಥೆಗಳಿಂದ ವೇತನ ಪಡೆಯುತ್ತಿರಬಾರದು ಎನ್ನಲಾಗಿರುವುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-ಅಮಿತಾಭ್ ಬಚ್ಚನ್ ಪರ್ಸನಲ್ ಬಾಡಿಗಾರ್ಡ್ ಸಂಬಳ ಕೇಳಿದರೆ ನಿಮಗೆ ಶಾಕ್ ಆಗುತ್ತೆ..!
ಜಿತೇಂದ್ರ ಸಿಂಧೆ ಯಾವಾಗಲು ಒಂದು ನೆರಳಿನಂತೆ ಅಮಿತಾಬ್ ಬಚ್ಚನ್ ಜೋತೆಗಿರುತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಿಂದ ಹಿಡಿದು ಚಲನಚಿತ್ರಗಳ ಸೆಟ್ ವರೆಗೆ ಜಿತೇಂದ್ರ ಸಿಂಧೆ ಅವರನ್ನು ಅಮಿತಾಬ್ ಜೊತೆಗೆ ನೋಡಲಾಗಿದೆ. ಆದರೆ, ಇದೀಗ ವರದಿಗಳ ಪ್ರಕಾರ ಜಿತೇಂದ್ರ ಸಿಂಗ್ ಅವರನ್ನು ದಕ್ಷಿಣ ಮುಂಬೈ ನ ಒಂದು ಪೊಲೀಸ್ ಸ್ಟೇಷನ್ ಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ-ಗಂಡು ಮಗುವಿಗೆ ಜನ್ಮ ನೀಡಿದ ನಟಿ ಹಾಗೂ ಸಂಸದೆ ನುಸ್ರತ್ ಜಹಾನ್
ಮುಂಬೈ ಪೊಲೀಸ್ ಪ್ರಕಾರ ಓರ್ವ ಪೊಲೀಸ್ ಪೇದೆಯನ್ನು ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಜಾಗದಲ್ಲಿ ನಿಯೋಜನೆಗೊಳಿಸಲಾಗುವುದಿಲ್ಲ ಎನ್ನಲಾಗಿದೆ. ಬಾಲಿವುಡ್ ಮಹಾನಾಯಕನಿಗೆ 'X' ದರ್ಜೆಯ (Amitabh Bachchan Security) ಭದ್ರತೆಯನ್ನು ಒದಗಿಸಲಾಗಿದೆ. ಹೀಗಾಗಿ ಅವರೊಂದಿಗೆ ಯಾವಾಗಲು ಇಬ್ಬರು ಪೊಲೀಸ್ ಪೇದೆಗಳಿರುತ್ತಾರೆ. ಅವರಲ್ಲಿ ಜೋತೆಂದ್ರ ಕೂಡ ಒಬ್ಬರಾಗಿದ್ದರು.
ಇದನ್ನೂ ಓದಿ-ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡಿದ ಟಾಲಿವುಡ್ ಖ್ಯಾತ ಹಾಸ್ಯನಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.