ನೋಡೋಕೆ ಸಾಮನ್ಯಾವಾಗಿ ಕಂಡ್ರೂ "Jr NTR" ಧರಿಸಿರುವ "ಶರ್ಟ್‌ ಬೆಲೆ" ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ.!

Junior NTR : ನಟ ಜೂನಿಯರ್ ಎನ್.ಟಿ.ಆರ್. ಧರಿಸಿರುವ ಶರ್ಟ್ ನ ಬೆಲೆ ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದೆ. ಒಂದು ಶರ್ಟ್ ಬೆಲೆ ಇಷ್ಟೊಂದು ದುಬಾರಿಯೇ..? ಅಂತ ನೆಟಿಜನ್‌ಗಳು ಆಶ್ಚರ್ಯದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಆ ವಿಶೇಷ ಅಂಗಿಯ ದರ ಎಷ್ಟು..? ಬನ್ನಿ ನೋಡೋಣ..

Written by - Krishna N K | Last Updated : Apr 18, 2025, 10:11 PM IST
    • ಜೂನಿಯರ್ ಎನ್ಟಿಆರ್ ತೆಲುಗು ಚಿತ್ರರಂಗದ ಸ್ಟಾರ್‌ ನಟರಲ್ಲಿ ಪ್ರಮುಖರು.
    • ಜೂ.ಎನ್‌ಟಿಆರ್‌ ಧರಿಸಿರುವ ಒಂದು ಶರ್ಟ್ ಫೋಟೋ ವೈರಲ್‌ ಆಗಿದೆ.
    • ನಟ ಜೂನಿಯರ್ ಎನ್.ಟಿ.ಆರ್. ಧರಿಸಿರುವ ಶರ್ಟ್ ನ ಬೆಲೆ ವೈರಲ್‌
ನೋಡೋಕೆ ಸಾಮನ್ಯಾವಾಗಿ ಕಂಡ್ರೂ "Jr NTR" ಧರಿಸಿರುವ "ಶರ್ಟ್‌ ಬೆಲೆ" ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ.!

Jr NTR Shirt price : ಜೂನಿಯರ್ ಎನ್‌ಟಿಆರ್‌ ತೆಲುಗು ಚಿತ್ರರಂಗದ ಸ್ಟಾರ್‌ ನಟರಲ್ಲಿ ಪ್ರಮುಖರು. ಅವರ ಹಿನ್ನೆಲೆ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಕನ್ನಡಿಗರಿಗೂ ಇವರು ಚಿರಪರಿಚಿತರು. ಎನ್‌ಟಿಆರ್‌ ತಾಯಿ ಮೂಲತಃ ಕನ್ನಡನಾಡಿನವರು ಎನ್ನವ ವಿಚಾರ ಬಹುತೇಕರಿಗೆ ತಿಳಿದಿದೆ. 

Add Zee News as a Preferred Source

ಇನ್ನು ಕೊನೆಯದಾಗಿ ಯಂಗ್‌ ಟೈಗರ್‌ "ದೇವರ" ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ಚಿತ್ರವು ಸುಮಾರು 400 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಗಳಿವೆ. ಈ ಚಿತ್ರದ ನಂತರ ಜೂನಿಯರ್ ಎನ್.ಟಿ.ಆರ್. ಅವರು ಹಿಂದಿ ಚಿತ್ರ "ವಾರ್-2" ರಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ:ಡ್ರಗ್ ಟೆಸ್ಟ್‌ ವೇಳೆ ಹೋಟೆಲ್ ರೂಂನಿಂದ ಹಾರಿ ನಟ ಶೈನ್‌ ಪರಾರಿ..! ಸಿಸಿಟಿವಿ ದೃಶ್ಯಾವಳಿ ವೈರಲ್

ಇತ್ತೀಚೆಗೆ, ಹೃತಿಕ್ ರೋಷನ್ ಗಾಯಗೊಂಡ ಕಾರಣ ವಾರ್ 2 ಚಿತ್ರೀಕರಣವನ್ನು ಮುಂದೂಡಲಾಗಿದೆ. ಅದಕ್ಕಾಗಿ ಜೂನಿಯರ್ ಎನ್ಟಿಆರ್ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.. ಪ್ರಸ್ತುರ ನಟ ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಜೂ.ಎನ್‌ಟಿಆರ್‌ ಧರಿಸಿರುವ ಒಂದು ಶರ್ಟ್ ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದೆ. ETRO ಬ್ರ್ಯಾಂಡ್‌ಗೆ ಸೇರಿದ ಆ ಶರ್ಟ್‌ನ ಬೆಲೆ ಎಷ್ಟು ಅಂತ ನೆಟ್ಟಿಗರು ತಿಳಿಯಲು ಕುತೂಹಲರಾಗಿದ್ದಾರೆ. ಅಂದಹಾಗೆ ಈ ಅಂಗಿಯ ಆನ್‌ಲೈನ್‌ ಬೆಲೆ 85 ಸಾವಿರಕ್ಕೆ ರೂ. ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮದ್ಯದ ನಿಶೆ, ಕೈಯಲ್ಲಿ ರೈಫಲ್ ಹಿಡಿದು ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪ..! ವಿಡಿಯೋ ವೈರಲ್‌

ಸಿನಿಮಾ ವಿಚಾರವಾಗಿ ಹೇಳುವುದಾದರೆ, ಜೂನಿಯರ್ ಎನ್‌ಟಿಆರ್‌ ಮುಂದಿನ ದಿನಗಳಲ್ಲಿ ದೇವರ ಚಿತ್ರದ 2 ನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ನಂತರ, ತಮಿಳು ಸಿನಿಮಾ ನಿರ್ದೇಶಕ ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News