ರಾಜಾಜಿನಗರದಲ್ಲಿ ಜೂನಿಯರ್ ಟೋಸ್ ಶುಭಾರಂಭ..ಅಶ್ವಿನಿ ಅವರ ಕನಸಿಗೆ ಶಾಸಕ ಗೋಪಾಲಯ್ಯ, ಅನುಶ್ರೀ ಸಾಥ್

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಈ ಶಿಕ್ಷಣದ ಕನಸಿಗೆ ಆಂಕರ್ ಅನುಶ್ರೀ ಹಾಗೂ ಶಾಸಕ ಗೋಪಾಲಯ್ಯ ಸಾಥ್ ಕೊಟ್ಟರು. 

Written by - YASHODHA POOJARI | Last Updated : May 24, 2025, 03:29 PM IST
  • ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್
  • ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕನಸಿನ ಕೂಸು
  • ಆಂಕರ್ ಅನುಶ್ರೀ ಹಾಗೂ ಶಾಸಕ ಗೋಪಾಲಯ್ಯ ಸಾಥ್
ರಾಜಾಜಿನಗರದಲ್ಲಿ ಜೂನಿಯರ್ ಟೋಸ್ ಶುಭಾರಂಭ..ಅಶ್ವಿನಿ ಅವರ ಕನಸಿಗೆ ಶಾಸಕ ಗೋಪಾಲಯ್ಯ, ಅನುಶ್ರೀ ಸಾಥ್

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಬೆಂಗಳೂರಿನ ರಾಜಾಜಿನಗರನಲ್ಲಿಂದು ಶುಭಾರಂಭಗೊಂಡಿದೆ. ಜೂನಿಯರ್ ಟೋಸ್ ರಾಜಾಜಿನಗರ ಬ್ರ್ಯಾಂಚ್ ಉದ್ಘಾಟನಾ ಕಾರ್ಯಕ್ರಮಕ್ಕೆ ಗೋಪಾಲಯ್ಯ ಹಾಗೂ ಅನುಶ್ರೀ ವಿಶೇಷ ಅತಿಥಿಯಾಗಿ ಆಗಮಿಸಿ ಅಶ್ವಿನಿಯವರ ಶಿಕ್ಷಣದ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. 

Add Zee News as a Preferred Source

ಜೂನಿಯರ್ ಟೋಸ್ ಬ್ರ್ಯಾಂಚ್ ಉದ್ಘಾಟನೆ ಬಳಿಕ ಮಾತನಾಡಿ, ಆಂಕರ್ ಅನುಶ್ರೀ, ಜೂನಿಯರ್ ಟೋಸ್ ಅಪ್ಪು ಸರ್ ಹಾಗೂ ಅಶ್ವಿನಿ ಮೇಡಂ ಅವರ ಅತಿ ದೊಡ್ಡ ಕನಸು. ಅಪ್ಪು ಸರ್ ಗೆ ಕ್ವಾಲಿಟಿ ಎಜುಕೇಶನ್ ಕೊಡಬೇಕು ಬಹಳ ಇಷ್ಟವಿತ್ತು. ಅಪ್ಪು ಸರ್  ಸಣ್ಣ ವಯಸ್ಸಿನಲ್ಲಿಯೇ ಅತಿ ದೊಡ್ಡ ಯಶಸ್ಸು ಕಂಡ ಪ್ರತಿಭೆ.  ಆ ಪ್ರತಿಭೆ ಅನ್ನೋದು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲಿಯೂ ಇರುತ್ತದೆ. 

ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್​ಗೆ ಅಂಬಾಸಿಡರ್ ಅಗತ್ಯವಿಲ್ಲ : ಮೋಹಕತಾರೆ ರಮ್ಯಾ

ಅದನ್ನು ಸರಿಯಾದ ರೀತಿಯಲ್ಲಿ ಕಂಡು ಹಿಡಿದು, ಅದಕ್ಕೊಂದು ಮಾರ್ಗ ಕಂಡುಹಿಡಿದು, ವೇದಿಕೆ ಕಲ್ಪಿಸಿಕೊಡಲು ಜೂನಿಯರ್ ಟೋಸ್ ಎಂಬ ಹೊಸದೊಂದು ಸಂಸ್ಥೆ ಶುರುವಾಗಿದೆ. ಇದು ನಮ್ಮ ರಾಜಾಜಿ ನಗರನಲ್ಲಿ 12ನೇ ಬ್ರ್ಯಾಂಚ್. ಕಿರಣ್ ಹಾಗೂ ದೀಪ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದೆ. ನನ್ನ‌ ಕಡೆಯಿಂದ ಅವರಿಗೆ ಬೆಸ್ಟ್ ವಿಷಸ್. ಪೋಸ್ಟರ್‌ನಲ್ಲಿ ನಮ್ಮ ಬಾಸ್ ಅಪ್ಪು ಸರ್ ಇದ್ದಾರೆ. ಅವರು ಎಲ್ಲಿ ಇರ್ತಾರೋ ಅಲ್ಲಿ ಪವರ್ ಇರುತ್ತದೆ. ಇಲ್ಲಿ ಬಂದು ಕಲಿಯುವ ಮಗು ಅಪ್ಪು ಸರ್ ಅವರಂತಹ ಗುಣಗಳನ್ನು, ಒಳ್ಳೆ ವಿದ್ಯೆ ಕಲಿತು. ದೊಡ್ಡ ಹೆಸರು ಮಾಡಲಿ ಎಂದು ಹಾರೈಸಿದರು.‌

ಶಿಕ್ಷಣ ಕ್ಷೇತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಪಾರ ಕನಸು ಹೊಂದಿದ್ದರು. ಈಗ ಅಪ್ಪು ಕನಸು ನನಸು ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, 'Junior Toes International Preschool' ನ್ನು ಆರಂಭಿಸಿದ್ದಾರೆ.

ಅಶ್ವಿನಿ ಅವರ ಜೊತೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್, ಸುನಿತಾ ಗೌಡ ಮತ್ತು ಶೃತಿ ಕಿರಣ್‌ ಕೈಜೋಡಿಸಿ ಶುರು ಮಾಡಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ ಒಂದು ಕೇಂದ್ರವಿದೆ.‌

ಇದನ್ನೂ ಓದಿ: 'ನನಗೆ ನಾನು ಹೇಗೆ ಗರ್ಭಿಣಿಯಾದೆ ಅಂತ ಗೊತ್ತಾಗ್ಲಿಲ್ಲ'..! ಕನ್ನಡದ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ

ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಹಾಗೂ ಶೃತಿ ಕಿರಣ್‌ ಸಂಸ್ಥಾಪಿಸಿರುವ ಈ ಶಾಲೆಯೂ ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತಿದೆ.

ಜೂನಿಯರ್ ಟೋಸ್ ಕಲಿಕಾ ಕೇಂದ್ರ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ಪಠ್ಯಕ್ರಮ ಇರಲಿವೆ. ಈ ಕೇಂದ್ರಗಳು ಕೇವಲ ಶಾಲೆಗಳಷ್ಟೇ ಅಲ್ಲ, ಅವು ಮಕ್ಕಳಿಗೆ ಸೃಜನಶೀಲವಾಗಿ ಚಿಂತಿಸಲು, ಆತ್ಮವಿಶ್ವಾಸದಿಂದ ನಡೆದುಕೊಳ್ಳಲು ಮತ್ತು ನಾಯಕತ್ವಕ್ಕೆ ಪ್ರೇರಣೆ ನೀಡುವ ಸ್ಥಳಗಳಾಗಿ ರೂಪುಗೊಳ್ಳುತ್ತಿವೆ.

ಇದನ್ನೂ ಓದಿ: 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Trending News