)
Niharika Konidela video : ನಿರ್ದೇಶಕ ಕೆ ರಾಘವೇಂದ್ರ ರಾವ್ ತೆಲುಗು ಚಲನಚಿತ್ರೋದ್ಯಮದಲ್ಲಿ ಅದ್ಭುತ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸೂಪರ್ ಹಿಟ್ ಯಶಸ್ಸನ್ನು ಗಳಿಸಿದ್ದಾರೆ. ಮಾಸ್.. ಕ್ಲಾಸ್ ಸೇರಿದಂತೆ ಎಲ್ಲಾ ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ತಮ್ಮ ವಿಭಿನ್ನ ಜಾನರ್ ಮೂಲಕ ವಿಶಿಷ್ಠ ಗುರುತನ್ನು ಹೊಂದಿರುವ ಡೈರೆಕ್ಟರ್ ಪ್ರಸ್ತುತ ವಿವಾದದಲ್ಲಿ ಸಿಲುಕಿದ್ದಾರೆ.
ನಿರ್ದೇಶಕ ಕೆ. ರಾಘವೇಂದ್ರ ರಾವ್, ನಟ ಚಿರಂಜೀವಿ ತಮ್ಮ ನಾಗಬಾಬು ಅವರ ಪುತ್ರಿ ಮತ್ತು ನಾಯಕಿ ಕೊನಿದೇಲಾ ನಿಹಾರಿಕಾ ಚಲನಚಿತ್ರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ, ರಾಘವೇಂದ್ರ ರಾವ್ ಕುರ್ಚಿಯಲ್ಲಿ ಕುಳಿತಿದ್ದಾಗ ಅಲ್ಲಿಗೆ ನಿಹಾರಿಕಾ ಅವರನ್ನು ಸ್ವಾಗತಿಸಲು ಬರುತ್ತಾರೆ.. ರಾಘವೇಂದ್ರ ರಾವ್ ಅವರಿಗೆ ಮೆಗಾ ಕುಟುಂಬದೊಂದಿಗೆ ಉತ್ತಮ ಸಂಪರ್ಕವಿದೆ. ಆ ಆತ್ಮೀಯತೆಯಿಂದ ನಿಹಾರಿಕಾ ನಿರ್ದೇಶಕರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ರಾಘವೇಂದ್ರ ರಾವ್ ನಿಹಾರಿಕಾ ಅವರ ಸೊಂಟದ ಮೇಲೆ ಕೈ ಹಾಕಿದರು. ನಿಹಾರಿಕಾ ಸ್ವತಃ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ರಾಘವೇಂದ್ರ ರಾವ್ ನಗುತ್ತಾ ತಮ್ಮ ಸೊಂಟದ ಮೇಲೆ ಕೈ ಹಾಕುವುದನ್ನು ನಿಹಾರಿಕಾ ಗಮನಿಸಿದಳು. ಹಿರಿಯರಾದ್ದರಿಂದ ಏನೂ ಹೇಳದೆ ಸುಮ್ಮನಿದ್ದರು. ಅಲ್ಲದೆ, ಇದರಿಂದ ಮುಜುಗರಕ್ಕೊಳಗಾದ ಮೆಗಾ ಪುತ್ರಿ, ರಾಘವೇಂದ್ರ ರಾವ್ ಅವರ ಕೈಯಿಂದ ನಿಧಾನವಾಗಿ ತಪ್ಪಿಸಿಕೊಳ್ಳಲು ಮುಂದಾಗುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಇನ್ನು ವಿಡಿಯೋ ವೈರಲ್ ಬೆನ್ನಲ್ಲೇ ಹಲವಾರು ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೆಗಾ ಕುಟುಂಬದ ಜೊತೆ ರಾಘವೇಂದ್ರ ರಾವ್ ಅವರಿಗೆ ಉತ್ತಮ ಸಂಬಂಧವಿದೆ. ಮೇಲಾಗಿ ಮೊಮ್ಮಗಳ ವಯಸ್ಸಿನ ನಿಹಾರಿಕಾ ಜೊತೆ ಸಲುಗೆಯಿಂದ ಇದ್ದಾರೆ ಅಷ್ಟೇ ಅಲ್ಲಿ, ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಹೇಳುತ್ತಿದ್ದಾರೆ..
ಆದರೆ ಕೆಲವರು, ಸಿನಿಮಾಗಳಲ್ಲಿ ನಟಿಯರನ್ನು ಅಸಭ್ಯವಾಗಿ ತೋರಿಸುವ ಇವರು ನಟಿಯರ ಜೊತೆ ಹೀಗೆ ಮಾಡದೆ ಇನ್ನೇನು ಮಾಡ್ತಾರೆ. ರಾಘವೇಂದ್ರ ರಾವ್ ಕೆಟ್ಟ ಸ್ಪರ್ಶಗಳನ್ನು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ತೆಲುಗು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ..
ಒಟ್ಟಿನಲ್ಲಿ ಯಾವ ಉದ್ದೇಶದಿಂದ ಕೆ ರಾಘವೇಂದ್ರ ರಾವ್ ಅವರು ಈ ರೀತಿ ವರ್ತನೆ ತೋರಿದರು ಎನ್ನುವ ಕುರಿತು ಸ್ವತಃ ತಾವೇ ಸ್ಪಷ್ಟತೆ ನೀಡಿದರೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ಈ ಪ್ರಕರಣ ಮುಂದಿನ ಹಂತಕ್ಕೆ ಹೋಗಬಹುದು.. ಅಲ್ಲದೆ, ನಿಹಾರಿಕಾ ಪ್ರತಿಕ್ರಿಯೆ ಸಹ ಅವಶ್ಯಕ..