ಬೆಂಗಳೂರು : ಕೈವ.. ಜಯತೀರ್ಥ ನಿರ್ದೇಶನದ ಸಿನಿಮಾ. ಧನ್ವೀರ್ ನಾಯಕ ನಟನಾಗಿ ಅಭಿನಯಿಸ್ತಿರೋ ಚಿತ್ರ. ಅಭುವನಸ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರೋ  ಗೆಸ್ ಲುಕ್, ಚಿತ್ರದ‌ ಮೇಲೆ‌ ವಿಶೇಷ ಕುತೂಹಲ‌ ಹುಟ್ಟಿಸ್ತಿದೆ.


COMMERCIAL BREAK
SCROLL TO CONTINUE READING

ಹಲವು ಪ್ರಶ್ನೆಗಳನ್ನ ಹುಟ್ಟಿಸಿದ ಕೈವ ಗೆಸ್ ಲುಕ್ :
ಕೈವ 1983 ಅನ್ನೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿ ಕಾಣ್ತಿರೋ ಈ ಪೋಸ್ಟರ್ ನಾನಾ ಕಥೆಗಳನ್ನ ಹೇಳ್ತಿದೆ. ಈ ಚಿತ್ರ ನೈಜ ಘಟನೆಗಳನ್ನಾಧಿರಿಸಿದ ಸಿನಿಮಾ ಎಂದು ಕೈವ ಟೀಮ್‌ ಹೇಳ್ತಿದೆ. ಫಸ್ಟ್ ಲುಕ್ ಪೋಸ್ಟರ್ ಗಿದು  ಗೆಸ್‌ಲುಕ್ ಅಂತ ಬಿಟ್ಟು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. 


ಇದನ್ನೂ ಓದಿ : ಶಶಿಕುಮಾರ್ ಪುತ್ರ ಅಕ್ಷಿತ್ ಸಿನಿಮಾಗೆ ಡಾಲಿ ಧನಂಜಯ್ ಸಾಥ್...!


ಸೆ.8 ಧನ್ವೀರ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್  :
ಸೆಪ್ಟೆಂಬರ್ 8ನೇ ತಾರೀಕು  ನಾಯಕ ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಕೈವನ ಅಸಲಿ ಲುಕ್ ರಿವೀಲ್ ಆಗಲಿದೆ. ಅಂದ್ರೆ ಕೈವ ಚಿತ್ರದ ಅಫೀಶಿಯಲ್ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಲಾಗ್ತಿದೆ. ಅವತ್ತೇ ಈ ಗೆಸ್ ಪೋಸ್ಟರ್ ಹುಟ್ಟಿಸಿರೋ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ.


ಇದನ್ನೂ ಓದಿ ಪ್ರೇಮ ಪುರಾಣದಲ್ಲಿ ಬಿದ್ದ ರಕ್ಕಮ್ಮ...! ಗಳಿಸಿದ್ದೆನೇನು ಗೊತ್ತೇ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.