)
Kajal Aggarwal accident : ನಟಿ ಕಾಜಲ್ ಅಗರ್ವಾಲ್ ಅಪಘಾತಕ್ಕೀಡಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವರದಿಗಳು ಪ್ರಸಾರವಾಗುತ್ತಿವೆ.. ಅಲ್ಲದೆ, ಸತ್ತಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾಜಲ್ ಅಪಘಾತದ ಸುದ್ದಿ ಸೋಮವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತಂಕಕ್ಕೊಳಗಾದ ಅಭಿಮಾನಿಗಳು ನಟಿಯನ್ನು ಟ್ಯಾಗ್ ಮಾಡಿ ಪ್ರತಿಕ್ರಿಯೆ ನೀಡುವಂತೆ ಕೇಳಿಕೊಂಡಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿ ಕಾಜಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ನಟಿ, ನನಗೆ ಅಪಘಾತವಾಗಿದೆ ಎನ್ನುವ ಸುದ್ದಿ ಸುಳ್ಳು, ಈ ಸುದ್ದಿಯನ್ನು ನೋಡಿ ನಕ್ಕಿದ್ದೇನೆ. ದೇವರ ದಯೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಅದನ್ನು ಹರಡಬೇಡಿ ಎಂದು ಕಾಜಲ್ ಮನವಿ ಮಾಡಿದ್ದಾರೆ.
ಸಿನಿಮಾಗಳ ವಿಷಯದಲ್ಲಿ, ಕಾಜಲ್ ಕೊನೆಯದಾಗಿ 'ಕಣ್ಣಪ್ಪ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಂಚು ವಿಷ್ಣು ನಟಿಸಿದ ಈ ಚಿತ್ರದಲ್ಲಿ, ಕಾಜಲ್ ಪಾರ್ವತಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಪ್ರಸ್ತುತ 'ಇಂಡಿಯನ್ 3' ನಲ್ಲಿ ನಟಿಸುತ್ತಿದ್ದಾರೆ. 'ರಾಮಾಯಣ'ದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.