Actress Chaitra Hallikeri Real Life: ನಟಿ ಚೈತ್ರಾ ಹಳ್ಳಿಕೇರಿ ಶಿಷ್ಯ, ಖುಷಿ ಚಿತ್ರಗಳ ಮೂಲಕ ಕನ್ನಡ ಸಿನಿ ಪ್ರಿಯರ ಹೃದಯ ಗೆದ್ದರು.

Actress Chaitra Hallikeri Real Life: ಸಿನಿಮಾ ರಂಗ ಎಂಬುದು ಒಂದು ಬಣ್ಣದ ಪ್ರಪಂಚ. ಇಲ್ಲಿ ಬದುಕು ರೂಪಿಸಿಕೊಂಡು ತೆರೆ ಮೇಲೆ ಮಿಂಚಿದ ಅನೇಕರ ವ್ಯೆಯಕ್ತಿಕ ಜೀವನದಲ್ಲಿ ಹಲವು ಏಳು ಬೀಳುಗಳಿವೆ. ಸಿನಿರಂಗದ ಸೆಲಿಬ್ರಿಟಿಗಳು ಮದುವೆಯಾದ ಆರಂಭದಲ್ಲಿ ಬದುಕು ತುಂಬಾ ಸಂತೋಷಮಯ ಎಂಬಂತೆ ತೋರುತ್ತದೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಕೆಲವರು ಕೊನೆಯ ವರೆಗೆ ಒಂದಾಗಿ ಬಾಳುತ್ತಾರೆ. ಆದರೆ ಕೆಲವರು ಅರ್ಧದಲ್ಲೇ ಕೈ ಬಿಟ್ಟು ದೂರ ಸರಿಯುತ್ತಾರೆ. ಸಿನಿ ಜಗತ್ತಿನ ಕೆಲವು ನಟಿಯರು ಮದುವೆ ಬಳಿಕ ನರಕ ಅನುಭವಿಸಿದ್ದಾರೆ. ಮದುವೆ ಮತ್ತು ವಿಚ್ಛೇದನದ ಕುರಿತು ಕೂಡ ಮಾತನಾಡಲು ಸಹ ಈ ನಟಿಯರು ಹಿಂಜರಿಯುವಷ್ಟು ನೋವುಂಡಿದ್ದಾರೆ. ಈ ಪೈಕಿ ನಟಿ ಚೈತ್ರಾ ಹಳ್ಳಿಕೇರಿ ಸಹ ಒಬ್ಬರು.
ನಟಿ ಚೈತ್ರಾ ಹಳ್ಳಿಕೇರಿ ಶಿಷ್ಯ, ಖುಷಿ ಚಿತ್ರಗಳ ಮೂಲಕ ಕನ್ನಡ ಸಿನಿ ಪ್ರಿಯರ ಹೃದಯ ಗೆದ್ದರು. ಅವಕಾಶಗಳು ಅವರನ್ನು ಹುಡುಕಿ ಬರುತ್ತಿದ್ದ ವೇಳೆ ಬಾಲಾಜಿ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು. ಮದುವೆಯ ನಂತರ ಚಿತ್ರರಂಗದಿಂದ ದೂರವಾದರು. ಬಳಿಕ ಇಬ್ಬರು ಮಕ್ಕಳ ತಾಯಿ ಕೂಡ ಆದರು.
ದುರಾದೃಷ್ಟ ಎಂಬಂತೆ ಚೈತ್ರಾಗೆ ಸಂಸಾರ ಸುಖವಾಗಿ ಸಾಗಲಿಲ್ಲ. 2018ರಲ್ಲಿ ಚೈತ್ರಾ ದಾಂಪತ್ಯದಲ್ಲಿ ಬಿರುಕು ಮೂಡಿತು. 2021ರಲ್ಲಿ ಚೈತ್ರಾ ಹಳ್ಳಿಕೇರಿ ಗಂಡನಿಂದ ವಿಚ್ಛೇದನ ಪಡೆದರು. ಚೈತ್ರಾ ತಮ್ಮ ಮದುವೆ ಮತ್ತು ವಿಚ್ಛೇದನದ ಕುರಿತು ಅನೇಕ ಸಲ ಮಾತನಾಡಿದ್ದಾರೆ.
ಚೈತ್ರಾ ಹಳ್ಳಿಕೇರಿ ಖಾಸಗಿ ಸುದ್ದಿ ವಾಹಿನಿಯ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಬದುಕಿನ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಮದುವೆ ಮತ್ತು ಡಿವೋರ್ಸ್ ಕುರಿತು ಚೈತ್ರಾ ಮಾತನಾಡಿದ್ದಾರೆ.
"ಆ ಹಳೆಯ ಅಧ್ಯಾಯವನ್ನು ಮೆಲುಕು ಹಾಕಲು ನನಗೆ ಇಷ್ಟ ಇಲ್ಲ. ಅದೆಲ್ಲ ನನಗೆ ಬೇಡವೇ ಬೇಡ. ಆ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಬೇಡ. ನಾನು 15 ರಿಂದ 17 ವರ್ಷ ಕೋಮಾದಲ್ಲಿದ್ದೆ ಎಂದುಕೊಳ್ಳಿ. ಯಾಕೆಂದರೆ ನಾನು ಹಾಗೇ ಅಂದುಕೊಂಡಿದ್ದೇನೆ. ಆ 15-17 ವರ್ಷವನ್ನು ನಾನು ನನ್ನ ಜೀವನದಿಂದ ಕಿತ್ತೆಸೆದಿದ್ದೇನೆ" ಎಂದು ನಟಿ ಚೈತ್ರಾ ಹಳ್ಳಿಕೇರಿ ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.