ಕನ್ನಡದ ನಟಿ ಲಾಸ್ಯ ನಾಗರಾಜ್ ತಾಯಿಯ ಮೇಲೆ ಸ್ವಂತ ತಂಗಿಯಿಂದಲೇ ದೈಹಿಕ ಹಲ್ಲೆ! ವಿಡಿಯೋ ಸೆರೆ..

Lasya Nagaraj: ಕನ್ನಡದ ಜನಪ್ರಿಯ ನಟಿ ಲಾಸ್ಯ ನಾಗರಾಜ್‌ ಅವರು ಕೌಟುಂಬಿಕ ವಿಚಾರದಿಂದ ಸುದ್ದಿಯಾಗಿದ್ದಾರೆ.. ನಟಿಯ ತಾಯಿಯ ಮೇಲೆ ತಂಗಿಯೇ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. 

Written by - Savita M B | Last Updated : May 1, 2025, 10:06 AM IST
  • ಕಲರ್‌ಫುಲ್‌ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಲಾಸ್ಯ ನಾಗರಾಜ್‌
  • ನಟಿ ಲಾಸ್ಯ ನಾಗರಾಜ್‌ ಅವರ ತಾಯಿಯ ಮೇಲೆ ಸ್ವಂತ ತಂಗಿಯೊಂದಲೇ ದೈಹಿಕ ಹಲ್ಲೆ
ಕನ್ನಡದ ನಟಿ ಲಾಸ್ಯ ನಾಗರಾಜ್ ತಾಯಿಯ ಮೇಲೆ ಸ್ವಂತ ತಂಗಿಯಿಂದಲೇ ದೈಹಿಕ ಹಲ್ಲೆ! ವಿಡಿಯೋ ಸೆರೆ..

Lasya Nagaraj Family Dispute: ಕನ್ನಡದ ಸಿನಿಮಾಗಳಾದ ʼವೇದʼ, ʼಲೈಫ್‌ ಈಸ್‌ ಬ್ಯೂಟಿಫುಲ್‌ʼ ಸೇರಿದಂತೆ ಮುಂತಾದ ಕಲರ್‌ಫುಲ್‌ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಲಾಸ್ಯ ನಾಗರಾಜ್‌ ಅವರ ತಾಯಿಯ ಮೇಲೆ ಸ್ವಂತ ತಂಗಿಯೊಂದಲೇ ದೈಹಿಕ ಹಲ್ಲೆ ನಡೆದಿದೆ.. ಈ ಸಂಬಂಧ ವಿಡಿಯೋ ಸಹ ವೈರಲ್‌ ಆಗಿದೆ.. 

Add Zee News as a Preferred Source

ಈ ವಿಚಾರದ ಕುರಿತು ನಟಿ ಲಾಸ್ಯ ಮಾಡಿರುವ ಆರೋಪದ ಪ್ರಕಾರ, ಬೆಂಗಳೂರಿನ ಬಸಬವೇಶ್ವರ ನಗರದ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಒಂದೇ ಬಿಲ್ಡಿಂಗ್‌ನ ಎರಡು ಮಹಡಿಯಲ್ಲಿ ಅಕ್ಕ-ತಂಗಿ ಕುಟುಂಬದವರು ವಾಸವಾಗಿದ್ದಾರೆ.. ಮೊದಲ ಮನೆಯಲ್ಲಿ ಲಾಸ್ಯ ಹಾಗೂ ತಾಯಿ ವಾಸವಿದ್ದಾರೆ.. ಸುಧಾ ನಾಗರಾಜ್‌ ಕ್ಲಾಸಿಕಲ್‌ ಡಾನ್ಸರ್‌ ಆಗಿದ್ದು, ಗ್ರೌಂಡ್ ಫ್ಲೋರ್​ನ ಪಾರ್ಕಿಂಗ್‌ನ ಜಾಗಲ್ಲಿ ಹಲವು ವರ್ಷಗಳಿಂದ ಡಾನ್ಸ್‌ ಕ್ಲಾಸ್‌ವೊಂದನ್ನು ನಡೆಸುತ್ತಿದ್ದಾರೆ.. ಈ ವಿಚಾರಕ್ಕೆ ಪದೇ ಪದೇ ಕಿತ್ತಾಡುತ್ತಿದ್ದ ಲಾಸ್ಯ ತಂಗಿ ಮಂಗಳ ನಿನ್ನೆ ತನ್ನ ಪತಿಯೊಂದಿಗೆ ಸೇರಿ ಸುಧಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.. 

ಇದನ್ನೂ ಓದಿ: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್! ಈ ತಿಂಗಳಲ್ಲಿ 3 ಕಂತುಗಳ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೆ!!

 ಆದರೆ ನಿನ್ನೆ ರಾತ್ರಿ ಮನೆಯ ಮುಂದಿನ ಜಾಗದ ವಿಚಾರವಾಗಿ ತನ್ನ ತಂಗಿ ಹಾಗೂ ಆಕೆಯ ಪತಿ ಸೇರಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.. ಈ ಘಟನೆಯ ಬಳಿಕ ಸುಧಾ ನಾಗರಾಜ್‌ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಚೇತರಿಕೆಯ ನಂತರ ಹಲ್ಲೆ ನಡೆದಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.. 

ಮತ್ತೊಂದೆಡೆ ನಟಿ ಲಾಸ್ಯ ನಾಗರಾಜ್‌ ಕೆನಡಾದಲ್ಲಿದ್ದು, ತನ್ನ ತಾಯಿಯ ಮೇಲಾಗಿರುವ ಹಲ್ಲೆಯ ವಿಚಾರವನ್ನು ತಾವೇ ಸ್ವತಃ ಬಿಚ್ಚಿಟ್ಟಿದ್ದಾರೆ.. ಇದಕ್ಕೆ ಸಂಬಂಧಪಟ್ಟ CCTV ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.. ಆದರೆ ಈ ಕುರಿತು ಇಲ್ಲಿವರೆಗೂ ಯಾವುದೇ ದೂರು ದಾಖಲಾಗಿಲ್ಲ.. ಒಟ್ಟಾರೆಯಾಗಿ ಜಾಗದ ವಿಚಾರಕ್ಕೆ ಸ್ವಂತಹ ಅಕ್ಕ-ತಂಗಿಯರೇ ಜಗಳವಾಡಿಕೊಂಡಿದ್ದಾರೆ.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News