ರನ್ಯಾ ರಾವ್ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ನಲ್ಲಿ ಟ್ವಿಸ್ಟ್..! ಸುಂದರಿಯ ಬೆನ್ನಹಿಂದಿದ್ದಾರೆ, ಸಚಿವರು ಸೇರಿ ಈ ವ್ಯಕ್ತಿ..

Actress ranya rao case : ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ರನ್ಯಾಳ ಅಧಿಕಾರಿಗಳು ಹೇಗ್ ಲಾಕ್ ಮಾಡಿದ್ರು ಎಂಬುದು ಗೊತ್ತಾಗಿದೆ. ಅಧಿಕಾರಿಗಳ ತನಿಖೆ ವೇಳೆ ಸ್ಪೋಟಕ ವಿಚಾರಗಳು ಹೊರಗಡೆ ಬರುತ್ತಿದ್ದ, ನಟಿ ರನ್ಯಾ ಗೆಳೆಯ ತರುಣ್ ಕಳ್ಳಾಟಗಳು ಬಯಲಾಗಿವೆ‌. ಮತ್ತೊಂದು ಕಡೆ ರನ್ಯಾಳ ಸಂಸಾರದಲ್ಲಿ ಯಾವುದು ಸರಿ ಇರಲಿಲ್ಲ ಎಂಬುದು ಬಟಾಬಯಲಾಗಿದೆ.ಇನ್ನೂ ರಾನ್ಯ ಮದುವೆಗೆ ಸಿಎಂ, ಹೆಚ್ ಎಂ ತೆರಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

Written by - Krishna N K | Last Updated : Mar 12, 2025, 08:25 PM IST
    • ಏರ್ಪೋರ್ಟ್ ನಲ್ಲಿ ರನ್ಯಾ ನವರಂಗಿ ಆಟ..!
    • ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದವಳನ್ನು ಲಾಕ್ ಮಾಡಿದ್ರು ಅಧಿಕಾರಿಗಳು..!
    • ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ಗಲಾಟೆ..!
ರನ್ಯಾ ರಾವ್ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ನಲ್ಲಿ ಟ್ವಿಸ್ಟ್..! ಸುಂದರಿಯ ಬೆನ್ನಹಿಂದಿದ್ದಾರೆ, ಸಚಿವರು ಸೇರಿ ಈ ವ್ಯಕ್ತಿ..

ಬೆಂಗಳೂರು : ಡಿಆರ್ ಐನಿಂದ ಅರೆಸ್ಟ್ ಆಗಿದ್ದ ನಟಿ ರನ್ಯಾ ರಾವ್ ಅರೆಸ್ಟ್ ಮೆಮೋದ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. 3ನೇ ತಾರೀಖು ಫ್ಲೈಟ್ ನಂಬರ್ EK  566 ನಲ್ಲಿ ದುಬೈನಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ರನ್ಯಾ ಬಂದಿಳಿದಿದ್ಲು. ಗ್ರೀನ್ ಚಾನೆಲ್ ನಲ್ಲಿ ಬರಲು ಮುಂದಾಗಿದ್ದ ರನ್ಯಾಳ ತಡೆದಿದ್ದ ಅಧಿಕಾರಿಗಳು ಅಕೆಯನ್ನ  ನೀವೆನಾದ್ರು ಗೋಲ್ಡ್ , ಗೂಡ್ಸ್ ಅಥವಾ ಬೆಲೆ ಬಾಳುವ ವಸ್ತುಗಳನ್ನ ತಂದಿದ್ದೀರಾ ಎಂದು ಪ್ರಶ್ನಿಸಿದ್ರು. 

Add Zee News as a Preferred Source

ಅದಕ್ಕೆ ನಾನು ಏನನ್ನು ತಂದಿಲ್ಲ ಎಂದು ರನ್ಯಾರಾವ್ ಹೇಳಿ ಏನೇ ಕೇಳಿದ್ರು ಇಲ್ಲ ಎಂದು ಉಲ್ಟಾ ಹೊಡೆದಿದ್ಲಂತೆ. ಮೆಟಲ್ ಡಿಕೆಕ್ಟರ್ ನಲ್ಲಿ ರನ್ಯಾ ಪಾಸಾದಾಗ ಸೈರನ್ ಆಗಿದೆ. ತಂದಿದ್ದ ಟ್ರಾಲಿ ಬ್ಯಾಗ್ ನ್ನ ಸ್ಕ್ಯಾನಿಂಗ್ ಗೆ ಹಾಕ್ತಾರೆ. ಈ ವೇಳೆ ಕ್ಯಾರಿ ಬ್ಯಾಗ್ ನಲ್ಲಿ ಏನು ಪತ್ತೆಯಾಗೊಲ್ಲ. ಇದಾದ ನಂತರ ಪರ್ಸನಲ್ ಆಗಿ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸ್ತಾರೆ.

ಇದನ್ನೂ ಓದಿ:ಆ ರಾತ್ರಿ ವಿಚಿತ್ರ ಅನುಭವ, 3 ದಿನ ಸರಿಯಾಗಿ ನಿದ್ರೆ ಮಾಡಲಿಲ್ಲ, ಹೆದರಿಕೆ ಆಯ್ತು..! ಜಾನ್ವಿಗೆ ಆಗಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಾ

ಈ ವೇಳೆ ಗೋಲ್ಡ್ ಬಾರ್ ಗಳನ್ನು ದೇಹದ ಮೇಲಿಟ್ಟು ಟೇಪ್ ಮಾಡಿದ್ದ ರನ್ಯಾ  ಸೊಂಟದ ಸುತ್ತ, ಕಾಲಿನ ಮಂಡಿಯ ಕೆಳಗಡೆ ಚಿನ್ನವನ್ನ ಸುತ್ತಿಕೊಂಡಿದ್ಲಂತೆ. ಶೂ ಒಳಗಡೆ ತುಂಡು ಮಾಡಿದ್ದ ಗೋಲ್ಡ್ ಬಾರ್ ಗಳು ಸಹ ಪತ್ತೆಯಾಗಿವೆ. ಹಾಗೆ ಪಾಕೇಟ್ ನ ಮುಂಭಾಗದಲ್ಲಿ ಗೋಲ್ಡ್ ಬಾರ್ ಗಳು ಪತ್ತೆಯಾಗಿದೆ‌.

ಒಟ್ಟು ಎಲ್ಲಾ 24 ಕ್ಯಾರೆಟ್ ನ 12 ಕೋಟಿ 56 ಲಕ್ಷ ಮೌಲ್ಯದ 14 ಕೆಜಿ 213 ಗ್ರಾಂ ಚಿನ್ನ ಪತ್ತೆಯಾಗಿದೆ. ಇದನ್ನು ಕಂಡ ಅಧಿಕಾರಿಗಳು ಸಹ ಶಾಕ್ ಆಗಿದ್ದಾರೆ. ಇನ್ನೂ ಪ್ರೋಸಿಜರ್ ಆರಂಭಿಸಿದ್ದ  ಡಿಆರ್ ಐ ಅಧಿಕಾರಿಗಳು ಮಹಜರು ಪ್ರಕ್ರಿಯೆ ಮುಗಿಸಿ ರನ್ಯಾಳ ಸ್ವಯಂ ಪ್ರೇರಿತ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದಾದ ಮೇಲೆ  ಅವಳ ಮನೆಯ ವಿಳಾಸ ಹಾಗೂ ಜತಿನ್ ಜೊತೆ ವಿವಾಹದ ಬಗ್ಗೆ ಮಾಹಿತಿ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಒಂದು ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ತಗಲಾಕ್ಕೊಂಡು ನಟಿ ರನ್ಯಾ ವಿಲವಿಲ ಅಂತಾ ಒದ್ದಾಡುತ್ತಿದ್ದಾಳೆ. ಮತ್ತೊಂದು ಕಡೆ ರನ್ಯಾಳ ಸ್ನೇಹಿತ ಉದ್ಯಮಿ ಮೊಮ್ಮಗ ತರುಣ್ ಬಂಧಿಸಿ DRI ಅಧಿಕಾರಿಗಳಿಂದ ಡ್ರಿಲ್ ನಡೆಸಿದ್ದಾರೆ. DRI ತನಿಖೆಯಲ್ಲಿ ಒಂದೊಂದಾಗಿ ಸ್ಫೋಟಕ ಸತ್ಯಗಳು ಹೊರಬೀಳ್ತಿವೆ. ದುಬೈ ಮಹಾನಗರಿಯಲ್ಲಿ ಹಲವರ ಜೊತೆ ಕಾಂಟ್ಯಾಕ್ಟ್ ನ್ನು ತರುಣ್ ಹೊಂದಿದ್ದು,  ಗೋಲ್ಡ್ ಸ್ಮಗ್ಲಿಂಗ್ ನ ಸಾಕಷ್ಟು ಸಿಂಡಿಕೇಟ್ ಸದಸ್ಯರಿಗೆ ಈತನೇ ನೇರ ಕಾಂಟ್ಯಾಕ್ಟ್ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ಇದನ್ನೂ ಓದಿ:ನಟಿ ಸೌಂದರ್ಯ ಕೊಲೆ, ಆಸ್ತಿ ಜಗಳ, ಪತಿಯಿಂದಲೇ ಬಯಲಾಯ್ತು ಭಯಾನಕ ಸತ್ಯ..! ಹಿರಿಯ ನಟನ ಹೆಸರೂ ಉಲ್ಲೇಖ..

ಹೀಗಾಗಿ ಅಧಿಕಾರಿಗಳು ತರುಣ್ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ವಶಕ್ಕೆ ಪಡೆದು ಎಲ್ಲವನ್ನು FSLಗೆ ಕಳಿಸಿ ರಿಟ್ರೀವ್​ಗೆ ಮುಂದಾಗಿದ್ದಾರೆ. ತನಿಖೆಯ ಮುಂದುವರೆದ ಭಾಗವಾಗಿ DRI, CBI, CID ಅಧಿಕಾರಿಗಳು
ತರುಣ್ ಮನೆ, ಆತ ಸತತವಾಗಿ ಭೇಟಿ ನೀಡ್ತಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ರನ್ಯಾ ಬಿಟ್ಟು ಬೇರೆ ಯಾರನ್ನ ಭೇಟಿಯಾಗ್ತಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. 

Vo-3 ಅಕ್ರಮ ಚಿನ್ನ ಸಾಗಟದಲ್ಲಿ ನಟಿ  ಬಂಧನವಾಗಿರೋ ರನ್ಯಾಳನ್ನ ಜತಿನ್ ಕುಮಾರ್ ಹುಕ್ಕೇರಿ ಮದುವೆ ಅಗಿದ್ದು ಹೇಗೆ, ಎಲ್ಲಿ ಪರಿಚಯ ಅನ್ನೋದು ಸಹ ಎಂಬುದನ್ನು ಕೋರ್ಟ್ ಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಜತಿನ್ ಹೇಳಿಕೊಂಡಿದ್ದಾರೆ.  ಮ್ಯಾಟ್ರಿಮೋನಿ ಬ್ರೋಕರ್ ಮೂಲಕ ಜತಿನ್ ಹಾಗೂ ರನ್ಯಾಗೆ ಪರಿಚಯವಾಗಿತ್ತಂತೆ.

6-10-24 ರಂದು ಇಬ್ಬರು ಮೊದಲು ಬೆಂಗಳೂರಿನಲ್ಲಿರುವ ಬ್ಯಾಸ್ಟೀನ್‌ ರೆಸ್ಟೋರೆಂಟ್ ನಲ್ಲಿ ಭೇಟಿ ಮಾಡಿದ್ದಾರೆ. ನಂತರ  ಪರಸ್ಪರ ಮದುವೆಗೆ ಒಪ್ಪಿಕೊಂಡಿದ್ದಾಗಿ ಜತಿನ್ ಹೇಳಿಕೊಂಡಿದ್ದಾರೆ.
2024ಅಕ್ಟೋಬರ್ 23 ರಂದು ಎಂಗೆಜ್ಮೆಂಟ್, 27 ನವೆಂಬರ್ 2024 ರಲ್ಲಿ ತಾಜ್ ವೆಸ್ಟ್ ಎಂಡ್ ನಲ್ಲಿ ಮದುವೆಯಾಗಿತ್ತು. ನಂತರ ರನ್ಯಾ ಮತ್ತು ಜತಿನ್ ಲ್ಯಾವೆಲ್ಲಿ ರಸ್ತೆಯಲ್ಲಿರುವ ರೆಂಟೆಡ್ ಅಪಾರ್ಟ್ಮೆಂಟ್ ಅಲ್ಲಿ ವಾಸಮಾಡ್ತಿದ್ದಾಗಿ ಜತಿನ್ ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ:ಮಗು ಇದೆ ಪ್ಲೀಸ್‌ ಬೇಡ ಅಂದ್ರೂ.. ಆ ಸ್ಟಾರ್‌ ನಟ ನನ್ನ ಬಿಡಲಿಲ್ಲ..! ನಟಿ ಮೀನಾ ಶಾಕಿಂಗ್‌ ಹೇಳಿಕೆ..

ದಂಪತಿ ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ಮೆಂಟ್ ನಲ್ಲಿ ಇದ್ದಾಗ ದಂಪತಿ ನಡುವೆ ಸಣ್ಣಪುಟ್ಟ ಮನಸ್ತಾಪ ಉಂಟಾಗಿ ಮದುವೆಯಾದ ಒಂದು ತಿಂಗಳಿಗೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.ರನ್ಯಾ ಹಾಗೂ ನನ್ನ ನಡುವೆ ಟ್ರಾನ್ಸಫರೆನ್ಸಿ ಇರಲಿಲ್ಲ, ನಮ್ಮಿಬ್ಬರ ಸಂಬಂಧಧ ಬಗ್ಗೆ ಸೂಕ್ತವಾದ ಸಂವಹನ ನಡೆಯುತ್ತಿರಲಿಲ್ಲ. ಹೀಗಾಗಿ ನಮ್ಮ ಸಂಬಂಧಿಗಳು ನಮಗೆ ಕೌನ್ಸೆಲಿಂಗ್ ಮಾಡಿಸಲು ಪ್ರಯತ್ನಿಸಿದ್ದರು. ಈ ಮಧ್ಯೆ 3-03-25 ಕ್ಕೆ ಡಿಆರ್ ಐ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆಗೆ ಮುಂದಾಗಿದ್ರು. ಆ ವೇಳೆ ವಿಚಾರಿಸಿದಾಗ ರನ್ಯಾ ಬಂಧನದ ಬಗ್ಗೆ ಮಾಹಿತಿ ಸಿಕ್ಕಿತ್ತು. ಮೊದಲು ಅರೆಸ್ಟ್ ಮಾಡಿದಾಗ ಯಾವುದೇ ಮಾಹಿತಿ ನೀಡಿರಲಿಲ್ಲ.

ರಾತ್ರಿ 8.30 ರಿಂದ 12 ಗಂಟೆವರೆಗೆ ಮನೆಯನ್ನ ಪರಿಶೀಲಿಸಿ ಕೆಲವು ವಸ್ತುಗಳನ್ನ ಸೀಜ್ ಮಾಡಿದ್ರು. 4-03-25 ರಂದು ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದ್ರು. ಕಸ್ಟಮ್ಸ್ ಆಕ್ಟ್ ಸೆಕ್ಷನ್ 108  ಅಡಿಯಲ್ಲಿ ಜತಿನ್ ಹುಕ್ಕೇರಿಗೆ ಸಮನ್ಸ್ ನೀಡಲಾಗಿತ್ತು. 4-03-25 ಬೆಳಗ್ಗೆ 11 ಗಂಟೆಗೆ ವಿಚಾರಣೆ ಹಾಜರಾಗುವಂತೆ ಡಿಆರ್ ಐ ಅಧಿಕಾರಿ ಹರೀಶ್ ರಿಂದ ಸಮನ್ಸ್ ನೀಡಿದ್ದಾಗಿ ಜತಿನ್ ಕೊರ್ಟ್ ನ ತಮ್ಮ ಅಫಿಡೆವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ರನ್ಯಾ, ಜತಿನ್ ಮದುವೆಯಾಗಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಜಿ ಪರಮೇಶ್ವರ್ ಸಹ ತೆರಳಿದ್ರು. ಸದ್ಯ ಈ ವಿಷಯ ಸಹ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದ್ದು, ಮುಂದೆ ಸರ್ಕಾರಕ್ಕೆ ಸಾಕಷ್ಟು ಮುಜುಗರ ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News