Actress Manju Malini : ನಟನೆ ಎಂಬುದು ಒಂದು ಕಲೆ ಮಾತ್ರವಲ್ಲ ಅದೊಂದು ವರ. ಎಲ್ಲರಿಗೂ ಈ ವರ ಸಿಗುವಂಥದ್ದಲ್ಲ. ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ ಕೆಲವು ಹಾಸ್ಯ ನಟರ ಬದುಕು ತೆರೆಯ ಹಿಂದೆ ಅಂದುಕೊಂಡಷ್ಟು ಚೆಂದವಾಗಿರಲಿಲ್ಲ. ಎಲ್ಲರ ಮುಖದಲ್ಲೂ ನಗು ಮೂಡಿಸುತ್ತಿದ್ದ ಈ ನಟಿಯ ಬದುಕಿನ ದುರಂತ ಕತೆ ಇಲ್ಲಿದೆ.
ನಟಿ ಮಂಜು ಮಾಲಿನಿ... ತಮ್ಮ ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ನಟನಾ ಶೈಲಿಯಿಂದ ಸಿನಿ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿದ ಸುಂದರಿ. ವಿಭಿನ್ನ ಶೈಲಿಯಲ್ಲಿ ಸಿನಿರಸಿಕರಿಗೆ ಮನೋರಂಜನೆ ನೀಡುತ್ತಿದ್ದ ನಟಿ ಮಂಜು ಮಾಲಿನಿ ನಿಜ ಜೀವನದ ಬಗ್ಗೆ ಕೆಲವೇ ಕೆಲವರಿಗೆ ಮಾತ್ರ ತಿಳಿದಿದೆ.
ಕನ್ನಡದ ಜನಪ್ರಿಯ ಹಾಸ್ಯ ನಟಿ ಮಂಜು ಮಾಲಿನಿ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಸಿನಿಮಾ ರಂಗದಿಂದ ದೂರ ಸರಿದರು. ಎಲ್ಲಾ ಕಲಾವಿದರ ಬದುಕು ಐಷಾರಾಮಿ ಜೀವನದಿಂದ ಕೂಡಿರುವುದಿಲ್ಲ. ಮಂಜು ಮಾಲಿನಿಯವರು ಪ್ರಖ್ಯಾತ ಹಾಸ್ಯ ನಟಿ ಆದರೆ ಜೀವನದಲ್ಲಿ ಹತಾಶೆ, ದುಃಖ, ನೋವನ್ನು ಅನುಭವಿಸಿದ ಜೀವ ಅದು.
ಇದನ್ನೂ ಓದಿ: ಮದುವೆಗೆ ರೆಡಿಯಾದ ಅನುಪಮಾ ಪರಮೇಶ್ವರನ್!? ಪೋಟೋ ಹಂಚಿಕೊಂಡು ಕೊಟ್ಟೆಬಿಟ್ರು ಗುಡ್‌ನ್ಯೂಸ್..
ದೊಡ್ಡ ದೊಡ್ಡ ಸಿನಿಮಾಗಳ ಅವಕಾಶ ನಟಿ ಮಂಜು ಮಾಲಿನಿಯವರನ್ನು ಹುಡುಕಿ ಬರುತ್ತಿದ್ದವು. ಹಾಸ್ಯ ನಟನೆಯನ್ನು ಕರಗತ ಮಾಡಿಕೊಂಡಿದ್ದ ನಟಿ ಮಂಜು ಮಾಲಿನಿಗೆ ಹೇಳಿಕೊಳ್ಳುವಂಥ ಸಂಭಾವನೆ ಸಿಗುತ್ತಿರಲಿಲ್ಲ. ಚಿಕ್ಕಂದಿನಿಂದಲೂ ಕಷ್ಟ ಅನುಭವಿಸಿ ಬೆಳೆದ ಮಂಜು ಮಾಲಿನಿ ಮದುವೆಯಾದ ನಂತರ ನರಕವನ್ನೇ ಅನುಭವಿಸಿದರು. ಆರ್ಥಿಕ ಸಮಸ್ಯೆ ಇವರನ್ನು ಹುರಿದು ಮುಕ್ಕಿತು.
ಕನ್ನಡದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿ ಕಾಣಿಸಿಕೊಂಡ ಮಂಜು ಮಾಲಿನಿ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಮಂಜು ಮಾಲಿನಿ ಹೆಚ್ಚಾಗಿ ಕಾಶೀನಾಥ್ ಹಾಗೂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ತಾಳಿ ಕಟ್ಟುವ ಶುಭ ವೇಳೆ ಸಿನಿಮಾದಲ್ಲಿ ಕೊನೆಯದಾಗಿ ಮಂಜು ಮಾಲಿನಿ ಅಭಿನಯಿಸಿದ್ದರು. ಆ ಬಳಿಕ ಮದುವೆ ಆಯಿತು. ನಂತರ ಸಿನಿಮಾರಂಗದಿಂದ ದೂರ ಸರಿದರು. ಮದುವೆಯಾದ ನಂತರ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಸ್ಥಿತಿಗೆ ಮಂಜು ಮಾಲಿನಿ ತಲುಪಿದರು. ಡಯಾಬಿಟಿಸ್ ಸಮಸ್ಯೆ ಕಾಡಲು ಆರಂಭಿಸಿತು. ಒಂದು ಮಗು ಜನಿಸಿದ ನಂತರ ಭಾರಿ ಕಷ್ಟ ಅನುಭವಿಸಿದ ಮಂಜು ಮಾಲಿನಿ 2006ರಲ್ಲಿ ಆರೋಗ್ಯ ಸಮಸ್ಯೆಗೆ ತುತ್ತಾದರು. ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿದ್ದ ನಟಿ ಮಂಜು ಮಾಲಿನಿ ಕಣ್ಣೀರು ಹಾಕುತ್ತಲೇ ಇಹಲೋಕ ತ್ಯಜಿಸಿದರು.
ಇದನ್ನೂ ಓದಿ: ಇದೇ ತಿಂಗಳ ಅಂತ್ಯದಲ್ಲಿ ತೆರೆ ಕಾಣಲಿದೆ ಕಾಲವೇ ಮೋಸಗಾರ ಸಿನಿಮಾ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









