)
Sangeeth Sagar: ಚಿತ್ರದ ಚಿತ್ರೀಕರಣ ಮಧ್ಯೆ ಸಂಭವಿಸಿದ ದುರಂತದಿಂದ ಪಾತ್ರಧಾರಿ ಚಿತ್ರದ ನಿರ್ದೇಶಕ ಸಂಗೀತ್ ಸಾಗರ್ ಅವರು ಸಾವನ್ನಪ್ಪಿದ ಘಟನೆ ಚಿತ್ರರಂಗದಲ್ಲಿ ದುಃಖದ ನೆರಳನ್ನು ಬೀರೀದೆ. ಶಿವಮೊಗ್ಗದಲ್ಲಿ ನಡೆದ ಶೂಟಿಂಗ್ ವೇಳೆ ಅವರು ಆಕಸ್ಮಿಕವಾಗಿ ಕುಸಿದು ಬಿದ್ದ ಕಾರಣ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ್ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರ ಅಂತಿಮ ಕ್ಷಣಗಳಲ್ಲಿ ಜೊತೆಗಿದ್ದ ಪತ್ನಿ ಸುಶ್ಮಿತಾ ಮತ್ತು ಮಗಳು ವಂಧ್ಯಾ ಅತ್ತೆ ಅಳುತ್ತಾ ಮೃತದೇಹದ ಬಳಿ ಕಣ್ಣೀರಿಡುತ್ತಿರುವ ಹೃದಯವಿದ್ರಾವಕ ದೃಶ್ಯ ಆಸ್ಪತ್ರೆಯಲ್ಲಿ ಕಂಡುಬಂದಿದೆ.
ಆಸ್ಪತ್ರೆಯ ಬಿಲ್ ವಿಚಾರ ಈಗ ದೊಡ್ಡ ತೊಂದರೆಯಾಗಿದೆ. ಒಟ್ಟು ₹2.38 ಲಕ್ಷ ರೂ. ಬಿಲ್ ಬಂದಿದ್ದು, ರಿಯಾಯಿತಿ ನೀಡಿ ₹1.5 ಲಕ್ಷ ಪಾವತಿಸಲು ಆಸ್ಪತ್ರೆ ಆಡಳಿತ ಮಂಡಳಿ ಸೂಚಿಸಿದೆ. ಆದರೆ ಚಿತ್ರ ತಂಡ ಮತ್ತು ನಿರ್ಮಾಪಕರು ಸೇರಿ ಅರ್ಧದಷ್ಟು ಅಂದರೇ 50 ಸಾವಿರ ರೂ. ಮಾತ್ರ ಕೊಡಲು ಸಾಧ್ಯ ಎಂದು ಹೇಳುತ್ತಿದ್ದಾರೆ.
ಈ ಬಿಲ್ ವಿಷಯದಲ್ಲಿ ಕುಟುಂಬಸ್ಥರು ಹಾಗೂ ಚಿತ್ರತಂಡ ಆಸ್ಪತ್ರೆ ಆಡಳಿತದ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಹಣಕಾಸಿನ ಒತ್ತಡದಲ್ಲಿ ಚಿತ್ರತಂಡ ಮತ್ತು ಕುಟುಂಬಸ್ಥರು ಆಸ್ಪತ್ರೆಯಲ್ಲೇ ರಾತ್ರಿ ಕಳೆಯುವಂತಾಗಿದೆ.
ಸಂಗೀತ್ ಸಾಗರ್ ಅವರ ಮೃತದೇಹ ನಿನ್ನೆ ರಾತ್ರಿ ಆಸ್ಪತ್ರೆಯ ಶವಾಗಾರದಲ್ಲೇ ಇಡಲಾಗಿದೆ. ಬಿಲ್ ಪ್ರಶ್ನೆ ಬಗೆಹರಿಯದೇ ಇರುವ ಕಾರಣ ಅಂತಿಮ ಕ್ರಿಯೆಗಳನ್ನೂ ಮುಂದೂಡಲಾಗಿದೆ. ಕುಟುಂಬಸ್ಥರ ನೋವು, ಆಸ್ಪತ್ರೆಯ ಬಿಲ್ ಒತ್ತಡ—ಎರಡೂ ಸೇರಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.