ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್, ಕಾಂತಾರ ಸಿಂಗರ್ ಅನನ್ಯ ಭಟ್! ಸುಮಧುರ ಕಂಠಸಿರಿ ಗಾಯಕಿ‌ಯನ್ನ ವರಿಸಿದ ಹುಡ್ಗ ಇವರೇ..

ಈ ಜೋಡಿಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೂರಾರು ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Written by - Puttaraj K Alur | Last Updated : Nov 10, 2025, 07:47 PM IST
  • ಖ್ಯಾತ ಹಿನ್ನೆಲೆ ಗಾಯಕಿ ಅನನ್ಯ ಭಟ್ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ
  • ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಮತ್ತು ಡ್ರಮ್ಮ‌ರ್ ಮಂಜುರೊಂದಿಗೆ ವಿವಾಹ
  • ಆಪ್ತರ ಸಮ್ಮುಖದಲ್ಲಿ ತಿರುಪತಿಯಲ್ಲಿ ನಡೆದ ಅನನ್ಯ ಭಟ್‌ ಮದುವೆ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್, ಕಾಂತಾರ ಸಿಂಗರ್ ಅನನ್ಯ ಭಟ್! ಸುಮಧುರ ಕಂಠಸಿರಿ ಗಾಯಕಿ‌ಯನ್ನ ವರಿಸಿದ ಹುಡ್ಗ ಇವರೇ..

Add Zee News as a Preferred Source

Ananya Bhat Marriage

ಕನ್ನಡ ಸಂಗೀತ ಲೋಕದ ಸುಮಧುರ ಕಂಠಸಿರಿಯ ಹಿನ್ನೆಲೆ ಗಾಯಕಿ ಅನನ್ಯ ಭಟ್ ಹಸೆಮಣೆ ಏರಿದ್ದಾರೆ. ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಮತ್ತು ಡ್ರಮ್ಮ‌ರ್ ಮಂಜುರೊಂದಿಗೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಅನನ್ಯ ಭಟ್‌, ಸೋಜುಗಾದ ಸೂಜುಮಲ್ಲಿಗೆ ಹಾಡಿನ ಮೂಲಕ ಜನಮನ ಗೆದ್ದಿದ್ದಾರೆ.   

ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ತಮ್ಮ ಕಂಚಿನ ಕಂಠದ ಗಾಯನದ ಮೂಲಕ ಅನನ್ಯ ಭಟ್ ಗುರುತಿಸಿಕೊಂಡಿದ್ದಾರೆ. ಇದೀಗ ತಿರುಪತಿಯಲ್ಲಿ ಅವರು ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಇದನ್ನೂ ಓದಿಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸಪ್ತಪದಿ ತುಳಿದ ಅಮೃತವರ್ಷಿಣಿ ಖ್ಯಾತಿಯ ನಟಿ ರಜಿನಿ..!

ಖ್ಯಾತ ಜ್ಯೋತಿಷ್ಯಶಾಸ್ತ್ರದ ಲೇಖಕರು ಪಂಡಿತರು ಆಗಿರುವ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ನವೆಂಬರ್ 9ರಂದು ಸರಳವಾಗಿ ನೆರವೇರಿದ ಈ ಮದುವೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಅನನ್ಯ ಮತ್ತು ಮಂಜು ಇಬ್ಬರೂ ಸಂಗೀತದಲ್ಲಿ ಆಳವಾದ ಒಡನಾಟ ಹೊಂದಿದ್ದಾರೆ. ಇದು ಪರಿಪೂರ್ಣ ಜೋಡಿ ಎಂದು ಅವರ ತಾಯಿ ಹೇಳಿದ್ದಾರೆ.

ಈ ಜೋಡಿಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೂರಾರು ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಹಲವು ಸಮಯದಿಂದ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಒಟ್ಟಿಗೆ ಹಲವಾರು ಕಾರ್ಯಕ್ರಮಗಳನ್ನ ನೀಡಿದ್ದಾರೆ. ಹೀಗಾಗಿ ಇದು ಪ್ರೇಮ ವಿವಾಹ ಎನ್ನಲಾಗುತ್ತಿದೆ. 

ಇದನ್ನೂ ಓದಿ: ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!

ಅನನ್ಯ ಭಟ್ ಅವರು ಕೆಜಿಎಫ್ 1 ಮತ್ತು 2ರ ʼಗರ್ಭದಿʼ, ʼಸಿಡಿಲ ಭರವʼ, ʼಧೀರ ಧೀರʼ, ʼಕೋಟಿ ಕನಸುಗಳʼ, ʼಮೆಹಬೂಬʼ ಹಾಡುಗಳನ್ನ ಅದ್ಭುತವಾಗಿ ಹಾಡಿದ್ದರು. ಅಲ್ಲದೇ ಕಾಂತಾರ ಸಿನಿಮಾದ ʼಸಿಂಗಾರ ಸಿರಿಯೇʼ, ಟಗರು ಸಿನಿಮಾದ ‘ಮೆ ಮೆಂಟಲ್ ಹೋಜಾವಾ’, ಪುಷ್ಪಾ ಸಿನಿಮಾದ ‘ಸಾಮಿ ಸಾಮಿ’ ಹಾಡುಗಳು ಜನಮನಸೂರೆಗೊಂಡಿವೆ. ಅವರ ‘ಸೋಜುಗದ ಸೂಜಿ ಮಲ್ಲಿಗೆ’ ಹಾಡು ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ.  

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News