ಒಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿ ಉತ್ತಮ ಫಾರ್ಮ್‌ನಲ್ಲಿದ್ದ ಅನೇಕ ನಟಿಯರು ಮದುವೆ ನಂತರ ಚಿತ್ರಗಳಿಂದ ದೂರ ಸರಿದರು. ಅವರಲ್ಲಿ ಕೆಲವರು ಮದುವೆಯಾಗಿ ತಮ್ಮ ವೈಯಕ್ತಿಕ ಜೀವನದಲ್ಲಿ ನೆಲೆಯೂರಿದರೆ, ಇನ್ನು ಕೆಲವರು ವ್ಯಾಪಾರ ಜಗತ್ತನ್ನು ಪ್ರವೇಶಿಸಿ ಅಲ್ಲಿಯೇ ಯಶಸ್ವಿಯಾಗಿದ್ದಾರೆ.
ನಾವಿಂದು ಅಂತಹ ಒಬ್ಬ ನಟಿಯ ಬಗ್ಗೆ ಹೇಳಲಿದ್ದೇವೆ. ಮುಂಬೈನಲ್ಲಿ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ ರೀಮಾ ಸೇನ್, 2000 ರಲ್ಲಿ 'ಚಿತ್ರಂ' ಚಿತ್ರದ ಮೂಲಕ ಟಾಲಿವುಡ್‌ಗೆ ಅದ್ದೂರಿಯಾಗಿ ಪ್ರವೇಶ ಮಾಡಿದರು. ಉದಯ್ ಕಿರಣ್ ಜೊತೆ ನಟಿಸಿದ ಈ ಚಿತ್ರದಲ್ಲಿ, ರೀಮಾಳ ಸೌಂದರ್ಯ, ಮುಗ್ಧತೆ ಮತ್ತು ಪರದೆಯ ಮೇಲಿನ ಅಭಿರುಚಿಗೆ ಹುಡುಗರು ಮಾರುಹೋಗಿದ್ದರು.
ಈ ಚಿತ್ರ ಸೂಪರ್ ಹಿಟ್ ಆದ ನಂತರ ರೀಮಾ ರಾತ್ರೋರಾತ್ರಿ ಸ್ಟಾರ್ ಆದರು. ಅದಾದ ನಂತರ, ಅವರು ತಮಿಳಿನಲ್ಲಿ 'ಮಿನ್ನಲೆ' ಮತ್ತು ತೆಲುಗಿನಲ್ಲಿ 'ಬಾವ ನಚಡು' ನಂತಹ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಉದಯ್ ಕಿರಣ್ ಜೊತೆ ಮತ್ತೊಮ್ಮೆ ನಟಿಸಿದ 'ಮನಸಂತ ನುವ್ವೆ' ಚಿತ್ರವೂ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ಇದನ್ನೂ ಓದಿ: ನಾನು ಗರ್ಭಿಣಿಯಾಗಿದ್ದಾಗ ಪತಿಗೆ ಬೇರಾಕೆಯೊಂದಿಗೆ ಅನೈತಿಕ ಸಂಬಂಧ... ಖ್ಯಾತ ನಟನ ಕರಾಳ ಮುಖ ಬಹಿರಂಗ...
ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿರುವ ರೀಮಾ, 2001 ರಲ್ಲಿ ಫರ್ದೀನ್ ಖಾನ್ ಜೊತೆ 'ಹಮ್ ಹೋ ಗಯೇ ಆಪ್ಕೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ತೆಲುಗು, ತಮಿಳು, ಹಿಂದಿ, ಬಂಗಾಳಿ, ಕನ್ನಡ ಹೀಗೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ 'ಗ್ಯಾಂಗ್ಸ್ ಆಫ್ ವಾಸ್ಸೇಪುರ್' ರೀಮಾ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಯಿತು. ಕನ್ನಡದಲ್ಲಿ ನ್ಯೂಸ್ ಮೂವಿಯಲ್ಲಿ ಉಪೇಂದ್ರ ಜೊತೆಗೂ ರೀಮಾ ಸೇನ್ ನಟಿಸಿದ್ದರು.
2012 ರಲ್ಲಿ ರೀಮಾ ಸೇನ್ ತಮ್ಮ 31 ನೇ ವಯಸ್ಸಿನಲ್ಲಿ ಉದ್ಯಮಿ ಶಿವ ಕರಣ್ ಸಿಂಗ್ ಅವರನ್ನು ವಿವಾಹವಾದರು. ಅವರಿಗೆ ರುದ್ರವೀರ್ ಎಂಬ ಮಗನಿದ್ದಾನೆ. ಮದುವೆ ನಂತರ ಅವರು ಕುಟುಂಬ ಜೀವನದತ್ತ ಗಮನ ಹರಿಸಿದರು. ಸಿನಿಮಾಗಳಿಂದ ದೂರ ಉಳಿದರು. ರೀಮಾ ಸೇನ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮದೇ ಆದ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ. ಅದನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: "ಜೀವನ ಸಾಕಾಗಿದೆ, ನನಗೆ ನಿಮ್ಮ ಬೆಂಬಲ ಬೇಕಾಗಿದೆ" ಎಂದು ಕಣ್ಣೀರಿಟ್ಟ ಸಲ್ಮಾನ್ ಖಾನ್! ಅಂಗಲಾಚಲು ಕಾರಣವೇನು?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









