)
Swaraj Shetty on Ashwini gowda : ಬಿಗ್ ಬಾಸ್ 12 ಪ್ರಾರಂಭವಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿಯಿಂದಾಗಿ ಸ್ಪರ್ಧಿಗಳ ಮಧ್ಯ ತೀವ್ರ ಪೈಪೋಟಿ ನಡೆಯುತ್ತಿದೆ. ಫಿನಾಲೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ನೀಡುತ್ತಿರುವ ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ನುಂಗಲಾರದ ತುತ್ತುಗಳಾಗುತ್ತಿವೆ..
ಇದರ ನಡುವೆ, ಸ್ಪರ್ಧಿಗಳ ಮಧ್ಯ ವಾಗ್ವಾದ ಹೆಚ್ಚಾಗುತ್ತಿದೆ. ಇತ್ತೀಚಿಗೆ ದೊಡ್ಮನೆಯಲ್ಲಿ ರಕ್ಷಿತಾ ಶೆಟ್ಟಿ ಬಟ್ಟೆ ಕುರಿತು ಅಶ್ವಿನಿ ಗೌಡ ವ್ಯಂಗ್ಯವಾಗಿ ಮಾತನಾಡಿದ್ದರು. ಅಲ್ಲದೆ, ಎಸ್ ಕ್ಯಾಟಗರಿ ಅಂತ ಅವಹೇಳನ ಮಾಡಿದ್ದರು. ಈ ವಿಚಾರ ಚರ್ಚೆಗೆ ಕಾರಣವಾಗಿತ್ತು. ಇದೀಗ, ಈ ಬಗ್ಗೆ ಕಾಂತಾರ ಸಿನಿಮಾ ನಟ ರಿಯಾಕ್ಟ್ ಮಾಡಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟ ಸ್ವರಾಜ್ ಶೆಟ್ಟಿ.. ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಶೋ ನಲ್ಲಿ ಉತ್ತಮವಾಗಿ ಆಟವಾಡುತ್ತಿದ್ದಾರೆ. ಈ ಪುಟ್ಟ ಹುಡುಗಿ ತನಗಿಂತ ದೊಡ್ಡವರ ನಡುವೆ ತನ್ನದೆಯಾದ ಶೈಲಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾಳೆ. ಯಾವುದಕ್ಕೂ ಕುಗ್ಗದೆ ಎಲ್ಲರನ್ನೂ ಎದಿರು ಹಾಕಿಕೊಂಡು ಓಪನ್ ಅಪ್ ಆಗಿ ಚೆನ್ನಾಗಿ ಆಟ ಆಡತ್ತಿದ್ದಾಳೆ.
ಬಿಗ್ ಬಾಸ್ ಜರ್ನಿ ತುಂಬಾ ದೊಡ್ಡದು, ದೊಡ್ಡವರ ಜೊತೆ ಮಿಂಗಲ್ ಆಗೋಕೆ ಸ್ವಲ್ಪ ಕಷ್ಟ, ಹಾಗಂತ ಅವಳು ವಯಸ್ಸಲ್ಲಿ ಚಿಕ್ಕವಳಾಗಿದ್ರು ಎಲ್ಲರ ಜೋತೆ ಬೇರೆಯುತ್ತಾಳೆ. ಮಂಗಳೂರಿನವರಾಗಿ ನಾನು ಅವಳಿಗೆ ಆಲ್ ದಿ ಬೇಸ್ಟ್ ಹೇಳುತ್ತೇನೆ ಅಂತ ನಟ ಶುಭ ಹಾರೈಸಿದರು.
ಅಲ್ಲದೆ, ನಾವು ಅವರ ಬಟ್ಟೆಯನ್ನ ಹಿಯಾಳಿಸಿದ್ರೆ, ಕೆಳಮಟ್ಟದವರಾಗುತ್ತೇವೆ. “ಅದೆಲ್ಲಾ ಒಬ್ಬೊಬ್ಬರ ಮನಸ್ಥಿತಿ ಮೇಲೆ ಡಿಪೆಂಡ್ ಆಗುತ್ತೆ. ಅಶ್ವಿನಿ ಗೌಡ ಅವರಿಗೆ ತಾಕತ್ತಿದ್ರೆ ರಕ್ಷಿತಾಗೆ ಡ್ರೆಸ್ ಕೊಡಿಸಲಿ. ನಿಮ್ಮ ಹಣೆಬರಹ, ನೀವು ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದೀರ.. ಪಾಪದವರು ಪಾಪದ ಮನೆಯಲ್ಲಿ ಬಂದಿದ್ದಾರೆ. ನಮ್ಮ ಕಂಫರ್ಟೆಬಲ್ಗೆ ತಕ್ಕ ಬಟ್ಟೆ ನಾವು ಹಾಕೋದು, ಬೇರೆಯವರಿಗೆ ಇಷ್ಟ ಆಗಲಿ ಅಂತಲ್ಲ. ಹರ್ಟ್ ಮಾಡಿದ್ದಕ್ಕೆ, ಸುದೀಪ್ ಸರ್ ಅವರಿಗೆ ಏನು ಮಾತಡಬೇಕೋ ಅದನ್ನ ಮಾತಾಡಿದ್ದಾರೆ. ಇವರಿಗೂ ಇವರ ಸ್ವಂತ ಕಾಲಿನಲ್ಲಿ ನಿಂತು ಬದುಕುವ ಟೈಮ್ ಬರುತ್ತೆ. ಸುದೀಪ್ ಸರ್ ಅವರಿಗೆ ಅರ್ಥ ಮಾಡಿಸಿದ್ದಕ್ಕೆ ನನಗೆ ಖುಷಿ ಅಂತ ಸ್ವರಾಜ್ ಶೆಟ್ಟಿ ಅಭಿಪ್ರಾಯ ತಿಳಿಸಿದರು..