)
Kantara 2 Advance Booking: ರಿಷಭ್ ಶೆಟ್ಟಿ ಅವರ ಬಹುನಿರೀಕ್ಷಿತ ಚಿತ್ರ ಕಾಂತಾರ: ಎ ಲೆಜೆಂಡ್ ಚಾಪ್ಟರ್ - 1 (ಕಾಂತಾರ 2) ಚಿತ್ರದ ಟಿಕೆಟ್ಗಳ ಮುಂಗಡ ಬುಕಿಂಗ್ ಶುಕ್ರವಾರದಿಂದ ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆರಂಭವಾಗಿದೆ. ಚಿತ್ರದ ಬಗ್ಗೆ ಇರುವ ಬಾರಿ ಕುತೂಹಲದಿಂದಾಗಿ, ಬುಕಿಂಗ್ ಆರಂಭವಾದ ಒಂದು ಗಂಟೆಯೊಳಗೆ ಬುಕ್ಮೈಶೋನಲ್ಲಿ ಶೇಕಡಾ 30ರಷ್ಟು ಟಿಕೆಟ್ಗಳು ಮಾರಾಟವಾಗಿವೆ.
ಬೆಂಗಳೂರಿನಲ್ಲಿ ಮಾತ್ರ ಮೊದಲ ದಿನಕ್ಕೆ 1000ಕ್ಕೂ ಹೆಚ್ಚು ಪ್ರದರ್ಶನಗಳು ಖಾತರಿಯಾಗಿವೆ. ಅಕ್ಟೋಬರ್ 2 ರಿಂದ 5 ರವರೆಗೆ ಸಿಂಗಲ್ ಸ್ಕ್ರೀನ್ಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬುಕಿಂಗ್ ಲಭ್ಯವಿದೆ. ಸಿಂಗಲ್ ಸ್ಕ್ರೀನ್ಗಳಲ್ಲಿ ಮೊದಲ ಪ್ರದರ್ಶನ ಬೆಳಿಗ್ಗೆ 6:30ಕ್ಕೆ ಆರಂಭವಾಗಲಿದ್ದರೆ, ಮಲ್ಟಿಪ್ಲೆಕ್ಸ್ಗಳಲ್ಲಿ ಬೆಳಿಗ್ಗೆ 7 ಗಂಟೆಯ ನಂತರ ಶೋ ಆರಂಭವಾಗಲಿದೆ.
ನಮ್ಮ ಪರಂಪರೆಯ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿ.
The wait is over! Advance Bookings for #KantaraChapter1 are now open across Karnataka. ?
In cinemas #KantaraChapter1onOct2 ✨#Kantara @hombalefilms @KantaraFilm @shetty_rishab @VKiragandur @ChaluveG… pic.twitter.com/P2NxZQyx6s
— Hombale Films (@hombalefilms) September 26, 2025
ಪ್ರದರ್ಶನಗೊಳ್ಳುವ ಚಿತ್ರಮಂದಿರಗಳು:
ಸಿದ್ದೇಶ್ವರ, ಗೋಪಾಲನ್ ಮಿನಿಪ್ಲೆಕ್ಸ್, ರವಿ ಡಿಜಿಟಲ್, ಗೋಪಾಲನ್ ಸಿನಿಮಾಸ್ (ಮೈಸೂರು ರಸ್ತೆ), ಗೋಪಾಲನ್ ಮಾಲ್ (ಸಿರ್ಸಿ ಸರ್ಕಲ್), ಇನಾಕ್ಸ್ (ಮಾಲ್ ಆಫ್ ಏಷಿಯಾ), ಪಿವಿಆರ್ (ಕನಕಪುರ ರಸ್ತೆ), ಪಿವಿಆರ್ ಒರಿಯನ್ ಮಾಲ್, ಬಾಲಾಜಿ ಥಿಯೇಟರ್, ರಾಜಕಮಲ್, ಶ್ರೀನಿವಾಸ್ ಥಿಯೇಟರ್, ಕೆಆರ್ಜಿ ಸೌಂದರ್ಯ ಮಹಲ್, ಶ್ರೀ ರೇಣುಕಾ ಪ್ರಸನ್ನ, ವಿಆರ್ ಸಿನಿಮಾಸ್, ಸ್ವಾಗತ್ ಶಂಕರ್ ನಾಗ್, ವಿಕ್ಟರಿ ಸಿನಿಮಾಸ್, ವೈಷ್ಣವಿ ಮತ್ತು ವೈಭವಿ ಸಿನಿಮಾ, ವೀರೇಶ್ ಸಿನಿಮಾಸ್, ಮನಸ ಥಿಯೇಟರ್ ಮತ್ತು ಶ್ರೀ ವೆಂಕಟೇಶ್ವರ ಥಿಯೇಟರ್ಗಳು ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕಿಂಗ್ ಲಭ್ಯವಿದೆ.
ಕಾಂತಾರ 2 ಚಿತ್ರವು ಅಕ್ಟೋಬರ್ 2 ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ, ಕನ್ನಡವನ್ನು ಹೊರತುಪಡಿಸಿ ಇತರ ಭಾಷೆಗಳ ಟಿಕೆಟ್ ಮುಂಗಡ ಬುಕಿಂಗ್ ಇನ್ನೂ ಆರಂಭವಾಗಿಲ್ಲ.
ಕರ್ನಾಟಕ ಸರ್ಕಾರವು ಇತ್ತೀಚೆಗೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿಗೆ ನಿಗದಿಪಡಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್ನ ಇತ್ತೀಚಿನ ತೀರ್ಪಿನಿಂದ ಈ ನಿರ್ಧಾರಕ್ಕೆ ತಡೆಯಾಜ್ಞೆ ಬಿದ್ದಿದೆ. ಇದರಿಂದಾಗಿ, ಕಾಂತಾರ 2 ಟಿಕೆಟ್ ದರಗಳು ದುಬಾರಿಯಾಗಿದ್ದು, ಸಿಂಗಲ್ ಸ್ಕ್ರೀನ್ಗಳಲ್ಲಿ ಬೆಳಿಗ್ಗೆ 6:30 ಶೋಗೆ ಟಿಕೆಟ್ ದರ 400 ರಿಂದ 700 ರೂಪಾಯಿಗಳವರೆಗೆ ಇದ್ದರೆ, ಕೆಲವು ಚಿತ್ರಮಂದಿರಗಳಲ್ಲಿ 800 ರಿಂದ 1000 ರೂಪಾಯಿಗಳವರೆಗೂ ಏರಿಕೆಯಾಗಿವೆ.
ಚಿತ್ರದ ಬಗ್ಗೆ ಇರುವ ಕುತೂಹಲ ಮತ್ತು ರಿಷಭ್ ಶೆಟ್ಟಿ ಅವರ ಮುಂಚಿನ ಯಶಸ್ಸಿನಿಂದಾಗಿ, ಕಾಂತಾರ 2 ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸುವ ಸಾಧ್ಯತೆಯಿದೆ. ಕರ್ನಾಟಕದಾದ್ಯಂತ ಚಿತ್ರಮಂದಿರಗಳು ಈ ಚಿತ್ರಕ್ಕಾಗಿ ಹೆಚ್ಚಿನ ಸ್ಕ್ರೀನ್ಗಳನ್ನು ಮೀಸಲಿಟ್ಟಿವೆ.