)
Gulshan Devaiah Life Story
: ಮದುವೆಯ ನಂತರ ವಿಚ್ಛೇದನ ಮಾಡಿಕೊಂಡ ಕಿರುತೆರೆಯ ನಟ, ನಟಿಯರು ಇದೀಗ ಮತ್ತೆ ಹೊಸದಾಗಿ ಮಾತು ಕತೆಯ ಮೂಲಕ ಲವ್ಮಾಡಿಕೊಂಡು ಡೇಟಿಂಗ್ನಲಿರುವುದು ಈ ವಿಷಯದ ಕುರಿತು ಇತ್ತೀಚಿಗೆ ಮಾಹಿತಿ ಲಭ್ಯವಾಗಿದೆ. ಕಾಂತಾರ ಅಧ್ಯಯ-1ರ ಕುಲಶೇಕರ ಪಾತ್ರ, ಚಿತ್ರಕ್ಕೆ ಭಾರೀ ತೂಕವನ್ನ ನೀಡಿತ್ತು. ಕನ್ನಡಿಗರಾಗಿರುವ ಗುಲ್ಶನ್ ದೇವಯ್ಯ ಕುಲಶೇಕರನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಮೂಲ ಕನ್ನಡಿಗರಾಗಿರುವ ಗುಲ್ಶನ್ ದೇವಯ್ಯ, ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಗುಲ್ಶನ್ ಡಿವೋರ್ಸ್ ಕೊಟ್ಟು ಬೇರ್ಪಟ್ಟಿದ್ದರು, ಈಗ ಅವರು ಮತ್ತೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಸಿಕ್ಕಾಪಟ್ಟೆ ಥ್ರಿಲ್ ಮೂಡಿಸಿದ ಕಾಂತಾರದ ʻಕುಲಶೇಖರʼನ ಪ್ರೇಮಕಥೆ ವಿಶೇಷ. ಮಾಜಿ ಪತ್ನಿಯ ಮೇಲೆ ಮತ್ತೆ ಲವ್. ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯ ನಂತರ ಸಾಕಷ್ಟು ಜನಮನ್ನಣೆಯನ್ನ ಗಳಿಸಿದೆ. ಈ ಹಿನ್ನಲೆ ಗುಲ್ಶನ್ ದೇವಯ್ಯ ಬಹಳ ಮೆಚ್ಚುಗೆ ಗಳಿಸುತ್ತಿದ್ದಾರೆ. ಮೂಲತಃ ಕೊಡಗಿನವರಾಗಿರುವ ಈ ನಟ ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಆದರೆ ಕನ್ನಡದ ಕಾಂತಾರ ಅಧ್ಯಾಯ ಒಂದರಲ್ಲಿ ನಟಿಸುವ ಮೂಲಕ ಅವರು ಈಗ ಮತ್ತೆ ದಕ್ಷಿಣದಲ್ಲಿ ಸೌಂಡ್ ಮಾಡುತ್ತಿದ್ದಾರೆ.
ಗುಲ್ಶನ್ ದೇವಯ್ಯ ಅವರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಕೆಲವು ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಕೂಡ ಆಗಿದೆ. ವಿಚ್ಛೇದನದ ಬಳಿ ಯಾವುದೇ ಮದುವೆ, ಲವ್ ಇಂತಹ ವಿಷಯಗಳಿಗೆ ತೆಲೆ ಹಾಕದೆ ಸಿನಿ ಇಂಡಸ್ಟ್ರಿ ಬಗ್ಗೆ ಬ್ಯೂಸಿ ಆಗಿದ್ದರು. ಆದರೆ ಇದೀಗ ಅವರು ಮತ್ತೆ ಮಾಜಿ ಪತ್ನಿಯ ಜೊತೆಗೆ ಬದುಕುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮಾಜಿ ಪತ್ನಿಯ ಮೇಲೆ ಅವರಿಗೆ ಮತ್ತೆ ಲವ್ ಆಗಿದೆ ಎಂಬುದು ಇದರಿಂದ ಸಾಬೀತಾಗಿದೆ.
ಮದುವೆಯಲ್ಲಿ ಪ್ರಾಬ್ಲಮ್ ಇದ್ದವು..
"ನಮ್ಮ ಮದುವೆಯಲ್ಲಿ ತುಂಬಾನೆ ಸಮಸ್ಯೆಗಳಿದ್ದವು. ಅದಕ್ಕೆ ಆಗ ಬೇರೆಯಾಗಿದ್ದೇ ಒಳ್ಳೆಯ ನಿರ್ಧಾರ. ಆ ನಂತರ ನಮ್ಮ ನಡುವೆ ಇದ್ದ ಸಂಬಂಧ ಉಳಿಸಿಕೊಳ್ಳಬೇಕು ಎಂದು ಇಬ್ಬರೂ ಪ್ರಯತ್ನ ಮಾಡಿದ್ದೆವು. ಆದ್ರೆ ನಾವು ಯಾವುದಕ್ಕೂ ಟೈಮ್ ಸೆಟ್ ಮಾಡಿರಲಿಲ್ಲ. ಜೀವನ ಮುಂದೆ ನಡೆಯುತ್ತಾ ನಾವು ಜೊತೆಯಾದೆವು. ಎಲ್ಲಾ ರಿಲೇಷನ್ಶಿಪ್ನಲ್ಲೂ ಒಂದು ಆತ್ಮ, ಮನಸ್ಸು ಇರುತ್ತೆ. ಅದನ್ನ ಚೆನ್ನಾಗಿ ಉಳಿಸಿಕೊಂಡರೆ ಎಲ್ಲವೂ ಉಳಿಯುತ್ತೆ" ಎಂದಿದ್ದಾರೆ.
ವೈಫ್ ಜೊತೆ ಲವ್ಚಿಡವ್ವಿ
ಮದುವೆ ನಂತರ ಡಿವೋರ್ಸ್ ಆಗಿ ಮತ್ತೆ ಡೇಟಿಂಗ್ ಮಾಡುವಾಗ ಮೊದಲಿನಕ್ಕಿಂತ ಇಬ್ಬರೂ ಮೆಚ್ಯೂರ್ಡ್ ಆಗಿದ್ದೇವೆ. ಜೀವನದಲ್ಲಿ ಗೌರವ ತುಂಬಾ ಮುಖ್ಯ. ನಮಗೆ ಜೀವನದಲ್ಲಿ ಮತ್ತೆ ಹಳೆಯ ತೊಂದರೆ ಬರುತ್ತೋ ಎನ್ನುವ ಭಯ ಕಾಡಿತ್ತು. ಆದರೆ ಇದು ನಮ್ಮ ಎರಡನೇ ಪ್ರಯತ್ನ ಹಾಗಾಗಿ ಒಳ್ಳೆಯದಾಗಿದೆ, ಬೆಟರ್ ಆಗಿದೆ ಎಂದಿದ್ದಾರೆ.
ಒಳ್ಳೆಯತನ ಸಂಬಂಧ ಉಳಿಸುತ್ತದೆ
"ಅವರಿವರ ಲೈಫ್ ತರ ನನ್ನ ಲೈಫ್ ಆಗಬೇಕಿಲ್ಲ. ನಮ್ಮಿಬರ ನಡುವೆ ಫ್ರೆಂಡ್ಶಿಪ್ ಅಥವಾ ರಿಲೇಷನ್ಶಿಪ್ ಇರಬಹುದು. ಒಳ್ಳೆಯ ಬಾಂಧವ್ಯ ಇದ್ರೆ ಅದನ್ನ ಉಳಿಸಿಕೊಳ್ಳಬೇಕು. ಎಲ್ಲಾ ಸಂಬಂಧದಲ್ಲೂ ಒಂದಲ್ಲಾ ಒಂದು ಒಳ್ಳೆಯ ಗುಣ ಇರುತ್ತದೆ. ಅದರಿಂದ ಸಂಬಂಧಗಳು ಸೇರಿಸುತ್ತವೆ".
ಗುಲ್ಶನ್ ಲೈಫ್ ಫಿಲಾಸಫಿ
ಪ್ರತಿಬಾರಿಯೂ ಸರಿಯಾದ ಕೆಲಸ ಮಾಡಲು ಪ್ರಯತ್ನಿಸಿ ಎನ್ನುವುದು ಗುಲ್ಶನ್ ಫಿಲಾಸಫಿ. ಪುಸ್ತಕ ಓದುವುದು, ಅನುಭವಗಳಿಂದ, ಬುದ್ಧಿಜೀವಿಗಳಿಂದ, ದೊಡ್ಡವರಿಂದ ಕೇಳಿಕೊಂಡು ತಿಳಿಯಬೇಕು. ಪ್ರತಿ ಬಾರಿ ಸರಿಯಾದದನ್ನೇ ಮಾಡೋಕೆ ಆಗಲ್ಲ.. ಹಾಗಂತ ತಪ್ಪುಗಳನ್ನ ತಿದ್ದಿಕೊಂಡು ಸರಿಯಾಗಿ ಮಾಡೋದನ್ನ ಕಲಿಬೇಕು ಎಂದಿದ್ದಾರೆ.
ಗುಲ್ಶನ್ ಪತ್ನಿ ಕಾಂತಾರ ನೋಡಿಲ್ವಾ..
ಹೌದು, ಅವರಿನ್ನೂ ಸಿನಿಮಾ ನೋಡಿಲ್ಲ.ನಾನು ಬೇರೂಂದು ಕೆಲಸದಲ್ಲಿ ಬ್ಯೂಸಿ ಇದ್ದೆ. ಹೀಗಾಗಿ ಒಟ್ಟಿಗೆ ಹೋಗಿ ಸಿನಿಮಾ ನೋಡೋ ಅವಕಾಶ ಸಿಗಲಿಲ್ಲ. ಅದಕ್ಕಾಗಿ ಒಟ್ಟಿಗೆ ಹೋಗಿ ಸಿನಿಮಾ ನೋಡೋಣ ಅಂತಾ ಇದ್ದೆ. ಅವರು ಕಾಯ್ತಾ ಇದ್ದಾರೆ, ಸಮಯ ಸಿಕ್ಕಾಗ ಹೋಗುತ್ತೇವೆ. ನಾನು ಯಾವುದೆ ನಿರ್ಧಾರ ತಗೆದುಕೊಂಡರು ನನಗೆ ಸಪೋರ್ಟ್ ಮಾಡ್ತಾರೆ ಎಂದಿದ್ದಾರೆ.
✍?ನೇತ್ರಾ ಯಲಿಶಿರುಂದ