ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌

Rukmini Vasanth childhood : ಇಂದು ಮಕ್ಕಳ ದಿನಾಚರಣೆ. ನಟ-ನಟಿಯರು ತಮ್ಮ ಬಾಲ್ಯದ ದಿನಗಳ ಬಗ್ಗೆ ಮುಕ್ತವಾಗಿ ಮೆಲುಕು ಹಾಕುತ್ತಿದ್ದಾರೆ. ಅದರಂತೆ ಕಾಂತಾರ ಸುಂದರಿ ರುಕ್ಮಿಣಿ ವಸಂತ್ ತನ್ನ ಸಹೋದರಿಯೊಂದಿಗೆ ಕಳೆದ ಬಾಲ್ಯದ ಪ್ರವಾಸ ದಿನ ಹೇಗೆ ಸ್ಮರಣೀಯ ಮತ್ತು ಭಯಾನಕವಾಯಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.. 

Written by - Krishna N K | Last Updated : Nov 14, 2025, 01:08 PM IST
    • ಫೋಟೋ ಜೊತೆ ಬಾಲ್ಯದ ಸವಿ ನೆನಪನ್ನು ಹಂಚಿಕೊಂಡ ರುಕ್ಮಿಣಿ ವಸಂತ್
    • ಪ್ರವಾಸಕ್ಕೆ ಹೋದಾಗ ಸಂಭವಿಸಿದ ಘಟನೆಯನ್ನು ನೆನಪಿಸಿಕೊಂಡ ಕನಕವತಿ
    • ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..
ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌

Rukmini Vasanth : ಫೋಟೋ ಜೊತೆ ಬಾಲ್ಯದ ಸವಿ ನೆನಪನ್ನು ಹಂಚಿಕೊಂಡಿರುವ ರುಕ್ಮಿಣಿ ವಸಂತ್ ತಮ್ಮ ಸಹೋದರಿಯೊಂದಿಗೆ ಪ್ರವಾಸಕ್ಕೆ ಹೋದಾಗ ಸಂಭವಿಸಿದ ಘಟನೆಯನ್ನು ನೆನಪಿಸಿಕೊಂಡರು. ಇದೀಗ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅಷ್ಟಕ್ಕೂ ಆಗಿದ್ದೇನು..? ಬನ್ನಿ ನೋಡೋಣ..

Add Zee News as a Preferred Source

ಫೋಟೋದ ಹಿಂದಿನ ಕಥೆಯನ್ನು ಹಂಚಿಕೊಳ್ಳುತ್ತಾ ರುಕ್ಮಿಣಿ.. "ನಾನು ಸುಮಾರು 6 ವರ್ಷದವಳಿದ್ದಾಗ ನನ್ನ ತಂದೆ-ತಾಯಿ ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ಚಿಕ್ಕಮ್ಮನ ಮನೆಗೆ ಕಳುಹಿಸಿದರು. ಆ ದಿನ ನಾವು ಸಮುದ್ರದಲ್ಲಿ ಈಜಿ ಎಂಜಾಯ್‌ ಮಾಡಿ.. ನಂತರ, ಚಿತ್ರಾನ್ನ ಮತ್ತು ಮೊಸರನ್ನ ತಿಂದು.."

ಇದನ್ನೂ ಓದಿ:'ಬಾಯಿ ಮುಚ್ಚಿಕೊಂಡು ಇರಿ..', ಪಾಪರಾಜಿಗಳ ಜೊತೆ ಜಯಾ ಬಚ್ಚನ್ ಜಗಳ.. ಕಂಟ್ರೋಲ್‌ ಕಳೆದುಕೊಂಡು ಅಂಥಾ ಮಾತು ಅನ್ನೋದಾ!

ಆದರೆ ಆ ದಿನ ಒಂದು ಘಟನೆ ಶಾಂತವಾಗಿದ್ದ ದನವನ್ನು ಭಯಾನಕಗೊಳಿಸಿತು.. ಆ ದಿನ ನಾನು ನೀರಿನಲ್ಲಿ ಜಾರುವ ಯಾವುದೋ ವಸ್ತುವಿನ ಮೇಲೆ ಕಾಲಿಟ್ಟೆ.. ತುಂಬಾ ಭಯಭೀತಳಾಗಿ ಮತ್ತೆ ನೀರಿನ ಒಳಗೆ ಹೋಗಲು ನಿರಾಕರಿಸಿದೆ ಎಂದು ನನಗೆ ಸ್ಪಷ್ಟವಾಗಿ ನೆನಪಿದೆ.. ಬಹುಶಃ ಅದಕ್ಕಾಗಿಯೇ ನಾನು ನೀರನ್ನು ತ್ಯಜಿಸಿ ಮರವನ್ನು ಹತ್ತಿದೆ," ಅಂತ ಫೋಟೋಗೆ ವಿವರಣೆ ನೀಡಿದರು.

No description available.

ಕೊನೆಯದಾಗಿ ರುಕ್ಮಿಣಿ ವಸಂತ್‌ ಅವರು ರಿಷಬ್‌ ಶೆಟ್ಟಿ  ನಟಿಸಿ ನಿರ್ದೇಶಿಸಿದ ಕಾಂತಾರ ಭಾಗ 1 ರಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರು ಕನಕವತಿ ಪಾತ್ರವನ್ನು ನಿರ್ವಹಿಸಿದ್ದರು. ಕನಕವತಿ ಪಾತ್ರ ಎಷ್ಟು ಪ್ರಭಾವ ಬೀರಿತು ಅಂದ್ರೆ, ರಿಷಬ್‌ ಬಿಟ್ಟು ಈ ಸಿನಿಮಾದ ಕೇಂದ್ರ ಬಿಂದು ಆಗಿದ್ದೇ ರುಕ್ಮಿಣಿ ವಸಂತ್‌..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News