)
Kantara Chapter 1 Rishab Shetty : ರಿಷಬ್ ಶೆಟ್ಟಿ ಎಂದಾಕ್ಷಣ ಕಾಂತಾರ ಸಿನಿಮಾ ನೆನಪಾಗುತ್ತದೆ. ಅಥವಾ ಕಾಂತಾರ ಎಂದಾಗ ರಿಷಬ್ ಶೆಟ್ಟಿ ನೆನಪಾಗುತ್ತಾರೆ. ಈಗ ಕಾಂತಾರ ಅಧ್ಯಾಯ 1 ಸಿನಿಮಾ ಕೂಡ ಸಿದ್ಧಗೊಂಡಿದ್ದು ಅಕ್ಟೊಬರ್ 2ರಂದು ತೆರೆಕಾಣಲಿದೆ. ಕಾಂತಾರ ಸೂಪರ್ ಡೂಪರ್ ಹಿಟ್ ಆಗಿದ್ದರಿಂದ ಈಗ ಕಾಂತಾರ ಅಧ್ಯಾಯ 1 ಬಗ್ಗೆ ಕೂಡ ಅಷ್ಟೇ ಕುತೂಹಲ ಹುಟ್ಟುಕೊಂಡಿದೆ. ಕಾಂತಾರ ಸಿನಿಮಾದ ರೀತಿಯಲ್ಲೇ ಕಾಂತಾರ ಅಧ್ಯಾಯ 1ರ ವಿಷಯದಲ್ಲೂ ಸಿನಿಮಾ ಬಗ್ಗೆ, ರಿಷಬ್ ಶೆಟ್ಟಿ ನಟನೆ ಬಗ್ಗೆ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಜಾಸ್ತಿಯಾಗಿದೆ.
ಈಗ ರಿಷಬ್ ಶೆಟ್ಟಿ ಕೂಡ ಪ್ಯಾನ್ ಇಂಡಿಯಾ ನಟ. ಕಾಂತಾರ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿಕ್ಕಾಪಟ್ಟೆ ಸಕ್ಸಸ್ ಆಗಿದ್ದ ಸಿನಿಮಾ. ಈಗ ಕಾಂತಾರ ಅಧ್ಯಾಯ 1ಕ್ಕೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹು ನಿರೀಕ್ಷಿತ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಿಂದಲೂ ಭಾರಿ ಬೇಡಿಕೆ ಇದೆ. ಹಾಗಾಗಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸಂಭಾವನೆ ಎಷ್ಟಿರಬಹುದು ಎನ್ನುವ ಇನ್ನೊಂದು ದೊಡ್ಡ ಕುತೂಹಲ ಕೂಡ ಹುಟ್ಟಿಕೊಂಡಿದೆ.
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಜೊತೆಗೆ ಚಿತ್ರಕತೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಹೀಗೆ ಚಿತ್ರದ ಬಹುಪಾಲು ದೊಡ್ಡ ಸವಾಲುಗಳೆಲ್ಲವನ್ನೂ ರಿಷಬ್ ಶೆಟ್ಟಿ ಒಬ್ಬರೇ ನಿರ್ವಹಿಸುತ್ತಿರುವುದರಿಂದ ಅವರ ಸಂಭಾವನೆ ಈ ಬಾರಿ ದುಪ್ಪಟ್ಟಾಗಿರಬಹುದು ಎಂದು ಹೇಳಲಾಗುತ್ತಿದೆ. ಅಥವಾ ಹಿಂದಿಯಲ್ಲಿ ಅಮಿರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತಿತರರು ತಮ್ಮ ಚಿತ್ರಗಳ ಲಾಭ ಗಳಿಕೆಯಲ್ಲಿ ಇಂತಿಷ್ಟು ಎಂದು ಪಾಲು ಪಡೆಯುವಂತೆ ರಿಷಬ್ ಶೆಟ್ಟಿ ಕೂಡ ಚಿತ್ರದ ಒಟ್ಟು ಗಳಿಕೆಯಲ್ಲಿ ಶೇಕಡಾವಾರು ಪಾಲು ಪಡೆಯುತ್ತಿರಬಹುದು ಎಂದು ಹೇಳಲಾಗುತ್ತಿದೆ.
ಕೆಲವೊಮ್ಮೆ ಬಹುನಿರೀಕ್ಷಿತ ಸಿನಿಮಾಗಳು ಕೂಡ ಹೀನಾಯವಾಗಿ ಸೋಲುವುದುಂಟು. ಜೊತೆಗೆ ನಿರ್ಮಾಪಕರಿಗೆ ನಾಯಕ ನಟನ ಸಂಭಾವನೆ ಭರಿಸುವುದೇ ಹೊರೆಯಾಗುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕೆ ಇತ್ತೀಚಿಗೆ ನಿರ್ಮಾಪಕರು ಕೂಡ ಲಾಭಂಶದ ಪಾಲುದಾರಿಕೆಗೆ ಪ್ರಾಶಸ್ಯ ನೀಡುತ್ತಾರೆ. ಕನ್ನಡ ಕೆಲವು ನಟರು ಕೂಡ ಅದೇ ರೀತಿ ಮಾಡುತ್ತಿದ್ದಾರೆ. ರಿಷಬ್ ಕೂಡ ಕಾಂತಾರ ಅಧ್ಯಾಯ 1ರಲ್ಲಿ ಪಾಲುದಾರಿಕೆ ಪಡೆದಿರಬಹುದು. ಚಿತ್ರದ ಗಳಿಕೆಯಲ್ಲಿ ಪಾಲುದಾರಿಕೆ ಇರುವುದರಿಂದ ಕಾಂತಾರ ಅದ್ಯಾಯ 1ಕ್ಕೆ ರಿಷಬ್ ಶೆಟ್ಟಿ ಯಾವುದೇ ರೀತಿಯ ಸಂಭಾವನೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಕಾಂತಾರ ಅಧ್ಯಾಯ 1ರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.