)
Kantara Chapter 1: ʻಕಾಂತಾರ ಚಾಪ್ಟರ್-1ʼ ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನುಮಾ. 25 ದಿನ ಪೂರೈಸಿ 50ನೇ ದಿನದ ಕಡೆ ಕಾಲಿಟ್ಟಿದೆ. ಆದರೆ ಒಟಿಟಿಗೆ ಕಾಂತಾರ ಚಾಪ್ಟರ್-1 ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದರ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾ, 1, ಅಕ್ಟೋಬರ್ 2, 2025 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ವಿಸ್ಮಯ ಮೂಡಿಸಿತ್ತು. ಆದರೆ ಓಟಿಟಿ ರಿಲೀಸ್ ಡೇಟ್ ಅನ್ನೂ ಮುಂದೂಡಿದ್ದರು. ಅದೇ ರೀತಿ ʼಕಾಂತಾರ ಚಾಪ್ಟರ್-1ʼ ಕೂಡಾ ವೀಕ್ಷಕರ ಮನ ಗೆದ್ದಿದೆ. 26ನೇ ದಿನದಂದು 80 ಸಾವಿರಕ್ಕೂ ಅಧಿಕ ಜನರು ಸಿನಿಮಾ ವೀಕ್ಷಣೆ ಮಾಡುವಷ್ಟು ಸಿನಿಮಾ ಕ್ರೇಜ್ ಉಳಿಸಿಕೊಂಡಿದೆ. ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಓಟಿಟಿಗೆ ತರುತ್ತಿರುವುದು ಸರಿಯಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾ ಅಕ್ಟೋಬರ್ 31ರಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತದೆ. 8 ವಾರದ ಬಳಿಕ ಹಿಂದಿಯಲ್ಲಿ, ನವೆಂಬರ್ ಕೊನೆ ವಾರದಲ್ಲಿ ಸ್ಮಾಲ್ ಸ್ಕ್ರೀನ್ಗೆ ಬರಲಿದೆ. ಯಾವ ಕಾರಣಕ್ಕೆ ಇಷ್ಟು ಬೇಗನೆ ಓಟಿಟಿ ರಿಲೀಸ್ ಎನ್ನೂವುದಕ್ಕೆ ಹೊಂಬಾಳೆ ಫಿಲ್ಮ್ಸ್ನ ಸಹ-ಸಂಸ್ಥಾಪಕರಾದ ಚೆಲುವೇಗೌಡ ಅವಾರು ʼಇಂಡಿಯಾ ಟುಡೇ ಪತ್ರಿಕೆಗೆʼ ನೀಡಿದ ಸಂದರ್ಶನ ಒಂದರಲ್ಲಿ ಉತ್ತರಿಸಿ ಮಾತನಾಡಿದ್ದಾರೆ. "3 ವರ್ಷಗಳ ಹಿಂದೆ ಅಮೇಜಾನ್ ಪ್ರೈಂ ಜೊತೆ ಓಟಿಟಿ ರೈಟ್ಸ್ ಒಪ್ಪಂದವಾಗಿತ್ತು, ಆದ್ದರಿಂದ ಅದು ನಮ್ಮ ಬಾಧ್ಯತೆ, ಆದರೆ ಹಿಂದೆ ಈ ರೀತಿ ಇರಲಿಲ್ಲ" ಎಂದು ಚೆಲುವೆ ಗೌಡ ಹೇಳಿದ್ದಾರೆ.
ಇತ್ತೀಚೆನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಕೇವಲ 4 ವಾರಕ್ಕೆ ಓಟಿಟಿ ವೇದಿಕೆಯಲ್ಲಿ ಬರ್ತಿವೆ. "ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ಓಟಿಟಿ ಒಪ್ಪಂದ ಮತ್ತು ಸಮಯವಿರುತ್ತದೆ. ಕೆಲವು ಸಿನಿಮಾಗಳು ಹೆಚ್ಚು ದಿನ ಉತ್ತಮ ಪ್ರದರ್ಶನ ಕಂಡರೆ ಮತ್ತೆ ಕೆಲವು ಚಿತ್ರಗಳು ಮೂರರಿಂದ ನಾಲ್ಕೆ ವಾರಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಅಂತ್ಯಗೊಳ್ಳಿಸುತ್ತವೆ. ಕೋವಿಡ್ಗಿಂತ ಮೊದಲು, ಎಲ್ಲಾ ಸಿನಿಮಾಗಳು 8 ವಾರದ ಬಳಿಕ ಓಟಿಟಿ ಸ್ಟ್ರೀಮಿಂಗ್ ಒಪ್ಪಂದ ಆಗ್ತಿತ್ತು. ಕೋವಿಡ್ ನಂತರ, 'ಕೂಲಿ'ಯಂತಹ ದೊಡ್ಡ ಚಿತ್ರಗಳು ಸಹ ನಾಲ್ಕು ವಾರಗಳ ನಂತರ ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲಿ ಓಟಿಟಿಗೆ ಬರ್ತಿವೆ. ಆದ್ದರಿಂದ ಆಯಾ ಸಮಯಕ್ಕೆ ಯಾವುದು ವರ್ಕ್ ಆಗುತ್ತದೆ ಆ ರೀತಿ ನಿರ್ಧರಿಸಲಾಗುತ್ತದೆ" ಎಂದು ಚೆಲುವೇ ಗೌಡ ಮಾತನಾಡಿದ್ದಾರೆ.
'ಕಾಂತಾರ-1' ಸಿನಿಮಾ ವಿಶ್ವದಾದ್ಯಂತ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾ ಬಾಲಿವುಡ್ 'ಛಾವ' ಚಿತ್ರದ ದಾಖಲೆಯನ್ನೂ ಮುರಿದು ಸದ್ದು ಮಾಡುತ್ತೆದೆ. ಹಾಗೆ ಮೊದಲ ಬಾರಿಗೆ ಕನ್ನಡದ ಚಿತ್ರವೊಂದು ವರ್ಷದ ಅತಿ ದೊಡ್ಡ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ. ಚಿತ್ರ ಓಟಿಟಿಗೆ ಬಂದರೂ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಚೆಲುವೇ ಗೌಡ ಈ ಕುರಿತು ಮಾಹಿತಿಯನ್ನ ನೀಡಿದ್ದಾರೆ.
ಅಕ್ಟೋಬರ್ 2ರಂದು ತೆರೆಗೆ ಬಂದಿದ್ದ 'ಕಾಂತಾರ-1' ಸಿನಿಮಾ ಪ್ರೀಮಿಯರ್ ಶೋಗಳಿಂದಲೇ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ವಿಶ್ವದಾದ್ಯಂತ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಿವುಡ್ 'ಛಾವ' ಚಿತ್ರದ ದಾಖಲೆ ಮುರಿದ ಕಾಂತಾರ ಸಿನಿಮಾ.
ಸದ್ಯಕ್ಕೆ, ಪ್ರೇಕ್ಷಕರು ಕಾಂತಾರ: ಅಧ್ಯಾಯ 1 ಅನ್ನು ಚಿತ್ರಮಂದಿರಗಳಲ್ಲಿ ಮಾತ್ರ ಅನುಭವಿಸಬಹುದು, ಥಿಯೇಟರ್ ಪ್ರದರ್ಶನ ಮುಗಿದ ನಂತರ ಅದರ ಅಂತಿಮ OTT ಬಿಡುಗಡೆಯ ನಿರೀಕ್ಷೆಯನ್ನೂ ಬಯಸುತ್ತಾರೆ.