)
Kapil Dev and Sarika : ಭಾರತೀಯ ಕ್ರಿಕೆಟಿಗರು ಮತ್ತು ಚಿತ್ರರಂಗದ ನಟಿಯರ ಹೆಸರುಗಳು ಆಗಾಗ ಒಟ್ಟಿಗೆ ಕೇಳಿಬರುತ್ತವೆ. ಅಷ್ಟೇ ಅಲ್ಲ ಈ ಜೋಡಿಗಳಲ್ಲಿ ಕೆಲವರು ಒಟ್ಟಾಗಿ ಜೀವನವನ್ನು ನಡೆಸುತ್ತಿದ್ದಾರೆ. ಅನುಷ್ಕಾ–ವಿರಾಟ್, ಹರ್ಭಜನ್–ಗೀತಾ, ಯುವರಾಜ್–ಹ್ಯಾಜೆಲ್ ಮುಂತಾದ ಜೋಡಿಗಳು ಅದಕ್ಕೆ ಪ್ರತ್ಯಕ್ಷ ಸಾಕ್ಷಿ.
ಆದರೆ, ಕೆಲವೊಂದು ಪ್ರೇಮಕಥೆಗಳು ಹೆಚ್ಚು ಫೇಮಸ್ ಆದರೂ ಕೂಡ ಮದುವೆಯವರೆಗೆ ಸಾಗಲಿಲ್ಲ. ಅಂತಹ ಒಂದು ಸಂಬಂಧವೇ ಕಪಿಲ್ ದೇವ್ ಮತ್ತು ನಟಿ ಸಾರಿಕಾ ಅವರದ್ದು. ಈ ಜೋಡಿ ಪ್ರೀತಿಸುತ್ತಿದ್ದರು ಎಂಬು ಮಾತುಗಳು ಆ ಕಾಲದಲ್ಲಿ ಆಗಾಗ ಕೇಳಿಬರತ್ತಿತ್ತು. ಆದರೆ ಈ ಜೋಡಿ ಪ್ರೀತಿ ಮದುವೆಯ ವರೆಗೂ ತಲುಪಲಿಲ್ಲ.
ವರದಿಗಳ ಪ್ರಕಾರ, ಕಪಿಲ್ ದೇವ್ ಮತ್ತು ಸಾರಿಕಾ ಮೊದಲ ಬಾರಿ ಮನೋಜ್ ಕುಮಾರ್ ಅವರ ಪತ್ನಿಯ ಮೂಲಕ ಭೇಟಿಯಾದರು ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ಇಬ್ಬರೂ ಒಂಟಿಯಾಗಿದ್ದರು. ಅವರ ಸ್ನೇಹ ನಿಧಾನವಾಗಿ ಪ್ರೀತಿಯಾಗಿ ಬೆಳೆಯಿತು. ಆದರೆ ಸ್ವಲ್ಪ ಸಮಯದ ನಂತರ, ಕಪಿಲ್ ದೇವ್ ಈ ಸಂಬಂಧದಿಂದ ಹಿಂದೆ ಸರಿದು, ತಮ್ಮ ಗೆಳತಿ ರೋಮಿ ಭಾಟಿಯಾ ಅವರನ್ನು ಪ್ರೀತಿಸಿ ವಿವಾಹವಾದರು. ಕಪಿಲ್ ದೇವ್ ಅವರೊಂದಿಗೆ ಸಂಬಂಧ ಮುರಿದ ನಂತರ, ಸಾರಿಕಾ ದಕ್ಷಿಣದ ಸೂಪರ್ಸ್ಟಾರ್ ಕಮಲ್ ಹಾಸನ್ ಅವರ ಹತ್ತಿರವಾದರು.
ಆದರೆ, ಆ ಸಮಯದಲ್ಲಿ ಕಮಲ್ ಹಾಸನ್ ಈಗಾಗಲೇ ಮದುವೆಯಾದವರಾಗಿದ್ದರು. ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ವೇಳೆ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ನಂತರ ಕಮಲ್ ಹಾಸನ್ ತಮ್ಮ ಹಿಂದಿನ ಮದುವೆಯಿಂದ ದೂರ ಸರಿದು, ಸಾರಿಕಾ ಅವರನ್ನು ವಿವಾಹ ಮಾಡಿದರು. ನಂತರ ಈ ಜೋಡಿಗೆ ಇಬ್ಬರು ಪುತ್ರಿಯರು ಜನಿಸಿದರು. ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್ ಜನಿಸಿದರು. ಆದರೆ ಈ ದಾಂಪತ್ಯವೂ ದೀರ್ಘವಾಗಲಿಲ್ಲ. 2004ರಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ವಿಚ್ಛೇದನ ಪಡೆದರು.
ತಮ್ಮ ತಂದೆ–ತಾಯಿ ವಿಚ್ಛೇದನದ ಬಗ್ಗೆ ಶ್ರುತಿ ಹಾಸನ್ ಹಲವು ಬಾರಿ ಮಾತನಾಡಿದ್ದಾರೆ. “ನಾವು ಒಟ್ಟಿಗೆ ವಾಸಿಸಲು ಪ್ರಯತ್ನಿಸಿದ್ದೇವೆ, ಆದರೆ ಅದು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ. ಈಗ ಎಲ್ಲರ ಜೀವನವೂ ಸಾಮಾನ್ಯವಾಗಿರುವುದಾಗಿ ಅವರು ಹೇಳಿದ್ದಾರೆ. ಶ್ರುತಿ ಹಾಸನ್ ತಮ್ಮ ಅಭಿನಯ ಬದುಕನ್ನು ತೆಲುಗು ಚಿತ್ರ ‘ಅನಗನಗ ಓ ಧೀರುಡು’ ಮೂಲಕ ಆರಂಭಿಸಿದರು.
ನಂತರ ತಮಿಳಿನಲ್ಲಿ ‘7 ಓಂ ಅರಿವು’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇಂದಿಗೆ ಅವರು ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಯಶಸ್ಸು ಗಳಿಸಿದ್ದಾರೆ. ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿರುವ ಶ್ರುತಿ ಹಾಸನ್ ಪ್ರತಿಯೊಂದು ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರು ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲೂ ಸಹ ಅಭಿನಯಿಸಿದ್ದಾರೆ.