)
Katrina Kaif Pregnancy News: ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ತಾಯಿಯಾಗುತ್ತಿದ್ದಾರೆ ಎಂಬ ವದಂತಿ ದೀರ್ಘ ಸಮಯದಿಂದ ಹರಿದಾಡುತ್ತಿತ್ತು. ಇದೀಗ, ಇದು ವದಂತಿಯಲ್ಲ ಸತ್ಯ ಎಂದು ತಾರಾ ಜೋಡಿ ದೃಢಪಡಿಸಿದೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಫೋಟೋ ಮೂಲಕ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಕತ್ರಿನಾ ಕೈಫ್ ಬೇಬಿ ಬಂಪ್ ಮೊದಲ ಚಿತ್ರವನ್ನು ಕೂಡ ಹಂಚಿಕೊಳ್ಳಲಾಗಿದ್ದು ಸದ್ಯ ಫೋಟೋ ಸಖತ್ ವೈರಲ್ ಆಗುತ್ತಿದೆ.
ಕತ್ರಿನಾ ಕೈಫ್ ಗರ್ಭಧಾರಣೆ:
ಬಾಲಿವುಡ್ ನಟಿ ಕತ್ರಿನಾಕೈಫ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಿಂದ ತಮ್ಮ ಗರ್ಭಧಾರಣೆಯ ಸುದ್ದಿ ಹಂಚಿಕೊಂಡಿದ್ದು, ಇದರಲ್ಲಿ ಕತ್ರಿನಾ ಕೈಫ್ ಬೇಬಿ ಬಂಪ್ ನ ಸ್ಪಷ್ಟ ಚಿತ್ರಣವನ್ನು ಕಾಣಬಹುದಾಗಿದೆ.
"ನಾವು ನಮ್ಮ ಜೀವನದ ಅತ್ಯಂತ ಸುಂದರವಾದ ಅಧ್ಯಾಯವನ್ನು ಆನಂದಿಸುತ್ತಿದ್ದೇವೆ. ಎಲ್ಲರ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು. ಓಂ" ಎಂದು ಈ ಪೋಸ್ಟ್ ನಲ್ಲಿ ಬರೆಯಲಾಗಿದೆ. ಇದರೊಂದಿಗೆ ಪೋಸ್ಟ್ ನಲ್ಲಿ ಪತಿ-ಪತಿ ಇಬ್ಬರೂ ಬೇಬಿ ಬಂಪ್ ಹಿಡಿದಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.
ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಕತ್ರಿನಾ-ವಿಕ್ಕಿ:
ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ರೆಸಾರ್ಟ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 09, 2021ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕತ್ರಿನಾ ಮತ್ತು ವಿಕ್ಕಿ ಮದುವೆಗೆ ಸಬ್ಯಸಾಚಿ ವಿನ್ಯಾಸಗೊಳಿಸಿದ ಉಡುಪುಗಳನ್ನು ಧರಿಸಿದ್ದರು.