ಡಾ.ವಿಷ್ಣುವರ್ಧನ್‌-ಭಾರತಿಯವರ ದತ್ತು ಪುತ್ರಿ ಕೀರ್ತಿ ರಿಯಲ್‌ ತಂದೆ-ತಾಯಿ ಯಾರು ಗೊತ್ತಾ? ಈ ಕಾರಣಕ್ಕೆ ನನ್ನನ್ನು ದತ್ತು ಪಡೆದ್ರು ಅಂದ ಕೀರ್ತಿ ವಿಷ್ಣುವರ್ಧನ್‌

ಕೀರ್ತಿಯವರನ್ನು ವಿಷ್ಣುವರ್ಧನ್‌ ಮತ್ತು ಭಾರತಿ ದತ್ತು ಪಡೆದಿದ್ದು ಹೇಗೆ? ಅವರ ಸ್ವಂತ ತಂದೆ ತಾಯಿ ಯಾರು? ಎಂಬೆಲ್ಲಾ ವಿಚಾರದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.

Written by - Bhavishya Shetty | Last Updated : Jun 9, 2025, 11:00 PM IST
    • ಡಾ. ವಿಷ್ಣುವರ್ಧನ್ ಮತ್ತು ಭಾರತಿ ಅವರಿಗೆ ಇಬ್ಬರು ಮುದ್ದಾದ ಮಕ್ಕಳು
    • ಕೀರ್ತಿಯವರನ್ನು ವಿಷ್ಣುವರ್ಧನ್‌ ಮತ್ತು ಭಾರತಿ ದತ್ತು ಪಡೆದಿದ್ದು ಹೇಗೆ?
    • ಅವರ ಸ್ವಂತ ತಂದೆ ತಾಯಿ ಯಾರು?
ಡಾ.ವಿಷ್ಣುವರ್ಧನ್‌-ಭಾರತಿಯವರ ದತ್ತು ಪುತ್ರಿ ಕೀರ್ತಿ ರಿಯಲ್‌ ತಂದೆ-ತಾಯಿ ಯಾರು ಗೊತ್ತಾ? ಈ ಕಾರಣಕ್ಕೆ ನನ್ನನ್ನು ದತ್ತು ಪಡೆದ್ರು ಅಂದ ಕೀರ್ತಿ ವಿಷ್ಣುವರ್ಧನ್‌

Keerthy Vishnuvardhan Real Parents: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ಭಾರತಿ ಅವರಿಗೆ ಇಬ್ಬರು ಮುದ್ದಾದ ಮಕ್ಕಳು, ಅವರ ಹೆಸರು ಕೀರ್ತಿ ಮತ್ತು ಚಂದನ. ಇಬ್ಬರನ್ನೂ ದತ್ತು ಪಡೆದಿದ್ದಾರೆ. ಅಂದಹಾಗೆ ಕೀರ್ತಿಯವರನ್ನು ವಿಷ್ಣುವರ್ಧನ್‌ ಮತ್ತು ಭಾರತಿ ದತ್ತು ಪಡೆದಿದ್ದು ಹೇಗೆ? ಅವರ ಸ್ವಂತ ತಂದೆ ತಾಯಿ ಯಾರು? ಎಂಬೆಲ್ಲಾ ವಿಚಾರದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.

Add Zee News as a Preferred Source

ಕೀರ್ತಿ ವಿಷ್ಣುವರ್ಧನ್‌ ಬೇರಾರು ಅಲ್ಲ ಭಾರತಿ ಅವರ ಸಹೋದರಿಯ ಮಗಳು. ಈ ಬಗ್ಗೆ ಮಾತನಾಡಿರುವ ಕೀರ್ತಿ, “ನಾನು ಭಾರತಿ ವಿಷ್ಣುವರ್ಧನ್‌ ಅವರ ಸಹೋದರಿ ಮಗಳು. ಅಪ್ಪ ಮತ್ತು ಅಮ್ಮಗೆ ನನ್ನ ರಿಯಲ್‌ ತಂದೆ-ತಾಯಿ ತುಂಬಾ ಹತ್ತಿರದ ಸಂಬಂಧ. ಅದೇ ಕಾರಣಕ್ಕೆ ನನ್ನನ್ನು ದತ್ತು ತೆಗೆದುಕೊಂಡರು. ನನ್ನ ಅಮ್ಮ ಭಾರತಿ ಮತ್ತು ಅಪ್ಪ ವಿಷ್ಣುವರ್ಧನ್ ಅವರು ನನ್ನ ರಿಯಲ್‌ ತಾಯಿ ಜಯಶ್ರೀ ಅವರ ಬಳಿ, ಅವರು ಮದುವೆಯಾಗುವಾಗಲೇ, ನಿನಗೆ ಯಾವ ಮಗು ಮೊದಲು ಹುಟ್ಟುತ್ತೋ ಅದು ನನಗೆ ಬೇಕುʼ ಎಂದು ಮಾತು ತೆಗೆದುಕೊಂಡಿದ್ದರಂತೆ. ಹೀಗಂತ ಕೀರ್ತಿ ವಿಷ್ಣುವರ್ಧನ್ ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 'ಆ ಟೈಂನಲ್ಲಿ ತುಂಬಾ ಹೊತ್ತು ಮೂತ್ರಕ್ಕೂ ಹೋಗದೆ ತಡೆದಿಟ್ಟುಕೊಳ್ಳಬೇಕು..!" 40ರ ವರ್ಷ ವಯಸ್ಸಿನ ಖ್ಯಾತ ನಟಿಯ ಬೋಲ್ಡ್‌ ಹೇಳಿಕೆ ವೈರಲ್‌

“ಇನ್ನು ನಾನು ಹುಟ್ಟಿದ ತಕ್ಷಣವೇ ನನ್ನ ಅಪ್ಪ-ಅಮ್ಮ (ವಿಷ್ಣುವರ್ಧನ್‌ ಹಾಗೂ ಭಾರತಿ) ನನಗೆ ಆ ಮಗು ಬೇಕು ಅಂತ ಕೇಳಿದ್ದರು. ವಿಷ್ಣು ಅಪ್ಪ ಮತ್ತು ಭಾರತಿ ಅಮ್ಮ ಮದುವೆಯಲ್ಲಿ ನಾನು ಅವರ ತೊಡೆ ಮೇಲೆ ಕೂತಿದ್ದೆ. ನಾನು ಹುಟ್ಟಿದಾಗ ಅಪ್ಪ-ಅಮ್ಮ ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ರಿಂದ ಹದಿಮೂರು ವರ್ಷ ಆಗುವವರೆಗೆ ಅಜ್ಜಿ ಜೊತೆ ಇದ್ದೆ. ಆ ನಂತರ ಅಪ್ಪ-ಅಮ್ಮ ಜೊತೆ ಬಂದೆ. ನನ್ನ ರಿಯಲ್‌ ತಂದೆ-ತಾಯಿ ಕೂಡ ಬೆಂಗಳೂರಿನವರೇ” ಎಂದು ʻಕಲಾಮಾಧ್ಯಮʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೀರ್ತಿ ಹೇಳಿದ್ದಾರೆ.

"ಬೇರೆಯವರು ಏನು ಹೇಳ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಮ್ಮ ಸಮಾಜದಲ್ಲಿ ದತ್ತು ಪಡೆಯುವುದನ್ನು ಸ್ವೀಕರಿಸುವುದಿಲ್ಲ. ಆದರೆ ನಾನು ನಿನ್ನನ್ನು ವಿಷ್ಣುವರ್ಧನ್‌ ಆಗಿ ದತ್ತು ತೆಗದುಕೊಂಡಿದ್ದೇನೆ. ನೀನೇ ನಮ್ಮ ಮಗಳು, ಯಾರೇ ಏನಂದ್ರು ಸಹ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಾವು ನಿನ್ನನ್ನು ಪ್ರೀತಿ ಮಾಡ್ತೇವೆ. ನೀನು ನಮ್ಮನ್ನು ಪ್ರೀತಿ ಮಾಡ್ತೀಯಾ ಅಷ್ಟೇ ಅಂತಾ ನಾನು ೧೩ ವರ್ಷದ ಹುಡುಗಿಯಾಗಿದ್ದಾಗ ಅಪ್ಪ ಹೇಳಿದ್ದರು" ಅಂತಾ ಕೀರ್ತಿ ವಿಷ್ಣುವರ್ಧನ್ ಆ ದಿನಗಳನ್ನು ನೆನಪಿಸಿಕೊಂಡರು.

"ನನ್ನ ಹೆಸರು ಕೀರ್ತಿ ವಿಷ್ಣುವರ್ಧನ್‌ ಅಲ್ಲ. ಕೀರ್ತಿ ಸಂಪತ್‌ ಕುಮಾರ್‌... ಇದು ನನ್ನ ಒರಿಜಿನಲ್‌ ಹೆಸರು. ಅಪ್ಪನ ರಿಯಲ್‌ ಹೆಸರು ಸಂಪತ್‌ ಕುಮಾರ್. ಅವರ ಗೆಳೆಯರು ಅವರನ್ನು ಸಂಪತ್ತು ಅಂತ ಕರೀತಾ ಇದ್ರು. ಮನೆಯಲ್ಲಿ ಅಪ್ಪನನ್ನು ಎಲ್ಲರೂ ಕುಮಾರ ಅಂತ ಕರೀತಿದ್ರು. ವಿಷ್ಣುವರ್ಧನ್‌ ಅನ್ನೋದು ಅಭಿಮಾನಿಗಳಿಗಷ್ಟೇ”ಅಂತ ಹೇಳಿದ್ದಾರೆ ಕೀರ್ತಿ.

ಇದನ್ನೂ ಓದಿ: "ಬಾಲ್ಯದಲ್ಲಿ ನನ್ನನ್ನು ಎತ್ತಿ ಮುದ್ದಾಡಿದವನ ಜೊತೆಯೇ ರೊಮ್ಯಾನ್ಸ್‌ ಮಾಡಿದೆ"- ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ ವೈರಲ್‌

ನಟ ಅನಿರುದ್ಧ ಜಟ್ಕರ್‌ ಕೀರ್ತಿ ವಿಷ್ಣುವರ್ಧನ್‌ ವಿವಾಹವಾಗಿದ್ದಾರೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಅವರಿಗೆ ಜ್ಯೇಷ್ಠವರ್ಧನ್‌ ಮತ್ತು ಶ್ಲೋಕ ಎಂದು ಹೆಸರಿಟ್ಟಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News