ಬೆಂಗಳೂರು: ಬಹುಕೋಟಿ ಮೊತ್ತದ ಪಾನ್ ಪಾನ್ ಮಸಾಲಾ ಜಾಹೀರಾತನ್ನು ರಾಕಿಂಗ್ ಸ್ಟಾರ್ ಯಶ್ ನಿರಾಕರಿಸಿದ್ದಾರೆ ಎನ್ನಲಾಗಿದೆ.ಯಶ್‌ ಅವರ ಜಾಹಿರಾತು ಒಪ್ಪಂದಗಳನ್ನು ನಿರ್ವಹಿಸುವ ಸಂಸ್ಥೆಯಾಗಿರುವ ಎಕ್ಸೀಡ್ ಎಂಟರ್‌ಟೈನ್‌ಮೆಂಟ್ ಈ ಸುದ್ದಿಯನ್ನು ಖಚಿತಪಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ರಾಕಿ ಭಾಯ್ ಅಬ್ಬರ


ಈಗ ಈ ಕುರಿತಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ '2020 ರ ಮಾರ್ಚ್‌ನಲ್ಲಿ ಯಶ್ ಮತ್ತು ಅವರ ದೀರ್ಘಕಾಲದ ಸ್ನೇಹಿತ ಮತ್ತು ಸಹವರ್ತಿ ಪ್ರಶಾಂತ್ ಅವರೊಂದಿಗೆ ಸೇರಿ ನಾವು ಆಗ ಅನೌಪಚಾರಿಕ ತಂಡವನ್ನು ರಚಿಸಿ ಅದಕ್ಕೆ ‘Storm is Coming' ಎಂದು ಹೆಸರಿಸಿದೆವು. ಆಗ ಇನ್ನು ಕೆಜಿಎಫ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು, ಆ ಹಂತದಲ್ಲಿ ನಾವು ದೀರ್ಘಾವಧಿ ಪಾಲುದಾರಿಕೆಗಳನ್ನು ಮಾತೃ ಎದುರು ನೋಡುತ್ತಿದ್ದೆವು, ಅದು ಕಾರ್ಯತಂತ್ರದ ಹೂಡಿಕೆಗಳು, ಅನುಮೋದನೆಗಳು ಅಥವಾ ಇನ್ನ್ಯಾವುದೇ ಇಕ್ವಿಟಿ ವ್ಯವಹಾರಗಳ ರೂಪದಲ್ಲಿರಬಹುದು" ಎಂದು ಅವರು ಹೇಳಿದರು.Jacqueline Fernandez: 200 ಕೋಟಿ ವಂಚನೆ ಕೇಸ್‌: ಜಾಕ್ವೆಲಿನ್‌ ಫೆರ್ನಾಂಡಿಸ್‌ ಹೆಸರಿನಲ್ಲಿ 7 ಕೋಟಿ ರೂ. ಡೆಪಾಸಿಟ್‌!


ಇತ್ತೀಚಿಗಷ್ಟೇ ನಾವು ಪಾನ್ ಮಸಾಲಾ ಬ್ರ್ಯಾಂಡ್‌ನಿಂದ ಬಹುಕೋಟಿ ಕೊಡುಗೆಯನ್ನು ನಿರಾಕರಿಸಿದ್ದೇವೆ ಮತ್ತು ನಾವು ಯಾರೊಂದಿಗೆ ಸಹಭಾಗಿತ್ವದಲ್ಲಿದ್ದೇವೆ ಎಂಬುದರ ಕುರಿತು ಹೆಚ್ಚು ಗಮನ ಹರಿಸಲಿದ್ದೇವೆ.ಅವರ ಪ್ಯಾನ್-ಇಂಡಿಯಾ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಸರಿಯಾದ ರೀತಿಯ ಸಂದೇಶವನ್ನು ನೀಡಲು ಸಮಾನ ಮನಸ್ಕ ಮತ್ತು ದೀರ್ಘಕಾಲಿಕ ಬ್ರ್ಯಾಂಡ್‌ಗಳೊಂದಿಗೆ ಹೂಡಿಕೆ ಮಾಡಲು ನಾವು ಈ ಅವಕಾಶವನ್ನು ಬಳಸಲು ಬಯಸುತ್ತೇವೆ" ಎಂದು ಅವರು ಹೇಳಿದರು.


ಇದನ್ನೂ ಓದಿ: 'ಕಿಚ್ಚ ಸುದೀಪ್ ಹೇಳಿದ್ದರಲ್ಲಿ ತಪ್ಪಿಲ್ಲ, ಆದರೆ ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ'


ಮತ್ತೊಂದೆಡೆಗೆ,ಯಶ್ ಅವರ ಕೆಜಿಎಫ್ ೨ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುವ ಮೂಲಕ ಸುದ್ದಿಯಲ್ಲಿದೆ. ಈ ಚಿತ್ರವು ಕೇವಲ16 ದಿನಗಳಲ್ಲಿ, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂ. ಗಳಿಸಿದೆ.ಆ ಮೂಲಕ ಈ ದಂಗಲ್,ಬಾಹುಬಲಿ ೨,ಆರ್ಆರ್ಆರ್ ನಂತರ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.