)
Kichcha Sudeep Politics: ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಹಿಂದಿನ ದಿನ ಪತ್ರಿಕಾಗೋಷ್ಠಿ ನಡೆಸಿ, ಈ ಮೂಲಕ ಸಿನಿಮಾ, ಹುಟ್ಟುಹಬ್ಬ ಆಚರಣೆ ಮತ್ತು ಇತರ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಿಚ್ಚ ಈ ಹಿಂದೆ ಹಲವು ಬಾರಿ ರಾಜಕೀಯ ಪ್ರವೇಶಿಸುವ ಬಗ್ಗೆ ಯೋಚಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ರಾಜಕೀಯ ಪ್ರವೇಶಿಸುವ ಬಗ್ಗೆ ಮಾತನಾಡಿದರು. "ರಾಜಕೀಯ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ" ಎಂದು ಹೇಳುವ ಮೂಲಕವೇ ರಾಜಕೀಯ ಪ್ರವೇಶಿಸುವ ಸೂಚನೆ ನೀಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
"ಸದ್ಯಕ್ಕೆ ನನಗೆ ರಾಜಕೀಯ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ. ಕೆಲವೊಮ್ಮೆ ಕೆಲವರು ನನ್ನನ್ನು ರಾಜಕೀಯದ ಬಗ್ಗೆ ಯೋಚಿಸುವಂತೆ ಮಾಡುತ್ತಾರೆ" ಎಂಬ ಕಿಚ್ಚ ಅವರ ಹೇಳಿಕೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. "ಈಗ ಸಿದ್ದರಾಮಯ್ಯ ಅವರಿಗೆ ಅವರದೇ ಆದ ತಲೆನೋವು ಇದೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಆಲೋಚನೆ ಇರಲ್ಲ. ನನ್ನ ಕೆಲವು ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇನೆ ಅಷ್ಟೇ" ಎಂದು ಹೇಳಿದ್ದಾರೆ.
ಹಾಗೆಯೇ ಹುಟ್ಟುಹಬ್ಬದ ಪಾರ್ಟಿಗೆ ಬರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ವಿಶೇಷ ಮನವಿ ಮಾಡಿದ್ದಾರೆ. ಬರುವವರೆಲ್ಲರೂ ಎಚ್ಚರಿಕೆಯಿಂದ ಬರಬೇಕು" ಎಂದು ಅವರು ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಆರ್ಸಿಬಿ ಆಚರಣೆಯ ಕಾಲ್ತುಳಿತದ ಬಗ್ಗೆಯೂ ಮಾತನಾಡಿದ ಅವರು, "ಅಂತಹ ದುರಂತ ಸಂಭವಿಸಬಾರದಿತ್ತು. ಇಂತಹ ಘಟನೆಗಳು ಸಂಭವಿಸದಂತೆ ಎಲ್ಲರೂ ಜಾಗರೂಕರಾಗಿರಬೇಕು. ಸಾರ್ವಜನಿಕರು ಸಹ ಜಾಗರೂಕರಾಗಿರಬೇಕು. ನಾನು ಸರ್ಕಾರ, ಪೊಲೀಸರು ಅಥವಾ ವ್ಯವಸ್ಥಾಪಕರ ಬಗ್ಗೆ ಮಾತನಾಡುತ್ತಿಲ್ಲ. ಅಂತಹ ಘಟನೆಗಳು ಸಂಭವಿಸಬಾರದು, ಆದರೆ ಸಂಭವಿಸಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಂಡಿದ್ದೇವೆ. ಅದಕ್ಕಿಂತ ಮೀರಿ ಏನಾದರು ನಡೆದರೆ ಅದರಿಂದ ನಾವು ಪಾಠ ಕಲಿಯಬೇಕು" ಎನ್ನುತ್ತಾ, ಡಿಕೆಶಿ ಅವರ ನಟ್ ಬೋಲ್ಟ್ ಹೇಳಿಕೆಯ ಬಗ್ಗೆಯೂ ಮಾತನಾಡಿದರು. "ನಟ್ಟು ಬೋಲ್ಟ್ ಎಂದರೆ ನೆನೆಪಾಗೋದು ಡಿಕೆ ಸಾಹೇಬ್ರೇ" ಎಂದು ಹೇಳಿದರು.