Kishore Kumar lifestory : ನಾವು ಬಾಲಿವುಡ್‌ನ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಬಗ್ಗೆ ಮಾತನಾಡುತ್ತಿದ್ದೇವೆ. ಅವರ ಹಾಡುಗಳು ಇಂದಿಗೂ ಜನರ ಹೃದಯಗಳನ್ನು ಮುಟ್ಟುತ್ತವೆ. ಅವರ ಹಾಡುಗಳು ಭಾರತೀಯ ಸಿನಿಮಾ ಜಗತ್ತಿನಲ್ಲಿ ಅಮರವಾಗಿವೆ. ಆಗಸ್ಟ್ 4, 1929 ರಂದು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಜನಿಸಿದ ಕಿಶೋರ್ ಅವರ ನಿಜವಾದ ಹೆಸರು ಅಭಾಸ್ ಕುಮಾರ್ ಗಂಗೂಲಿ.
ಕಿಶೋರ್ ಕುಮಾರ್ ಅವರ ಅಣ್ಣ ಅಶೋಕ್ ಕುಮಾರ್ ಈಗಾಗಲೇ ಬಾಲಿವುಡ್ ನ ಪ್ರಸಿದ್ಧ ನಟರಾಗಿದ್ದರು. ಇದರಿಂದಾಗಿ ಅವರು ಸಿನಿಮಾದತ್ತ ಆಕರ್ಷಿತರಾದರು. ಅಶೋಕ್ ನಟನೆಗೆ ಹೆಸರುವಾಸಿಯಾಗಿದ್ದರೂ, ಕಿಶೋರ್ ಕುಮಾರ್ ತಮ್ಮ ಹಾಡುಗಳಿಂದ ಜನರನ್ನು ಹುಚ್ಚರನ್ನಾಗಿ ಮಾಡಿದರು.
ಇದನ್ನೂ ಓದಿ:ʼಸಲ್ಮಾನ್ ಖಾನ್ ಎಷ್ಟು ರೊಮ್ಯಾಂಟಿಕ್ ಅಂದ್ರೆ...ʼ ನಟಿ ಐಶ್ವರ್ಯ ರೈ ಶಾಕಿಂಗ್ ಹೇಳಿಕೆ ವೈರಲ್
1946 ರಲ್ಲಿ ಶಿಕಾರಿ ಸಿನಿಮಾದ ಮೂಲಕ ನಟನೆಗೆ ಕಾಲಿಟಿದ್ದರು. ಆದರೆ ಅವರಿಗೆ ನಟಿಸಲು ಇಷ್ಟವಿರಲಿಲ್ಲವಂತೆ. ಅವರು ಕೆ.ಎಲ್. ಸೆಹಗಲ್ ಅವರಂತೆ ಗಾಯಕನಾಗಬೇಕೆಂದು ಬಯಸಿದ್ದರು. 1948 ರಲ್ಲಿ ತೆರೆಕಂಡ ಜಿದ್ದಿ ಸಿನಿಮಾದ ಮೂಲಕ ಗಾಯಕರಾಗಿ ಶೋರ್ ಕುಮಾರ್ ಹೊರಹೊಮ್ಮಿದರು.
ಕಿಶೋರ್ ಕುಮಾರ್ ಅವರ ಧ್ವನಿ ಇಂದಿಗೂ ಚಿತ್ರರಂಗದಲ್ಲಿ ಅಮರ. ಮೇರೆ ಸಪ್ನೋ ಕಿ ರಾಣಿ, ಪಲ್ ಪಲ್ ದಿಲ್ ಕೆ ಪಾಸ್, ಜಿಂದಗಿ ಏಕ್ ಸಫರ್ ಹೈ ಸುಹಾನಾ ಮುಂತಾದ ಪ್ರಸಿದ್ಧ ಹಾಡುಗಳು ಇಂದಿಗೂ ಜನರ ಫೇವರಿಟ್. ಗಾಯಕರಾಗಿ ಅಷ್ಟೇ ಅಲ್ಲ, ನಟ, ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು.
ಇದನ್ನೂ ಓದಿ:ʼಮದುವೆಗೂ ಮುನ್ನ ಅದನ್ನ ಮಾಡ್ಬೇಕೋ ಬೇಡ್ವೋ ಅನ್ನೋದು ನಂಗೆ ಬಿಟ್ಟಿದ್ದುʼ.. ಖ್ಯಾತ ನಟಿಯ ಬಹಿರಂಗ ಹೇಳಿಕೆ!
ಕಿಶೋರ್ ಕುಮಾರ್ ಅವರ ವೈಯಕ್ತಿಕ ಜೀವನವು ಏರಿಳಿತಗಳಿಂದ ತುಂಬಿದೆ. ಅವರು ನಾಲ್ಕು ಬಾರಿ ವಿವಾಹವಾದರು. ಅವರ ಮೊದಲ ಪತ್ನಿ ರುಮಾ ಘೋಷ್, ಎರಡನೇ ಪತ್ನಿ ಮಧುಬಾಲಾ, ಮೂರನೇ ಪತ್ನಿ ಯೋಗಿತಾ ಬಾಲಿ ಮತ್ತು ನಾಲ್ಕನೇ ಪತ್ನಿ ಲೀನಾ ಚಂದಾವರ್ಕರ್. ಕಿಶೋರ್ ಕುಮಾರ್ 13 ಅಕ್ಟೋಬರ್ 1987 ರಂದು ಹೃದಯಾಘಾತದಿಂದ ನಿಧನರಾದರು.









