)
Kumbh mela Monalisa :ಮೊನಾಲಿಸಾ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ನ ಈ ಯುವತಿ, ಇದೀಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಲು ಸಿದ್ದಳಾಗಿದ್ದಾರೆ. ಈ ಸಿನಿಮಾದ ಮೂಲಕ ದಕ್ಷಿಣ ಚಿತ್ರರಂಗಕ್ಕೂ ಕುಂಭಮೇಳ ಸುಂದರಿ ಕಾಲಿಟ್ಟಂತಾಗುತ್ತದೆ.
ಹೌದು.. 'ನಾಗಮ್ಮ' ಎಂಬ ಶೀರ್ಷಿಕೆಯ ಮುಂಬರುವ ಚಿತ್ರದಲ್ಲಿ ನೀಲತಮಾರ ಚಿತ್ರದ ಪಾತ್ರಕ್ಕೆ ಹೆಸರುವಾಸಿಯಾದ ನಟ ಕೈಲಾಶ್ ನಟಿಸಲಿದ್ದಾರೆ. ಪಿ. ಬಿನು ವರ್ಗೀಸ್ ನಿರ್ದೇಶನದ ಮತ್ತು ಜೀಲಿ ಜಾರ್ಜ್ ನಿರ್ಮಾಣದ ಈ ಸಿನಿಮಾ ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.
ಈ ವರ್ಷದ ಆರಂಭದಲ್ಲಿ, ಮೊನಾಲಿಸಾ ಕೋಝಿಕ್ಕೋಡ್ನಲ್ಲಿ ಚೆಮ್ಮನೂರು ಜ್ಯುವೆಲ್ಲರ್ಸ್ನ ಹೊಸ ಶೋ ರೂಂ ಅನ್ನು ಉದ್ಘಾಟಿಸುವ ಮೂಲಕ ಕೇರಳದಲ್ಲಿ ಸುದ್ದಿಯಾಗಿದ್ದರು. ಈಕೆಯನ್ನು ನೋಡಲು ದೊಡ್ಡ ಜನಸಮೂಹವೇ ಸೇರಿತ್ತು. ಬಾಬಿ ಚೆಮ್ಮನೂರು ಜೊತೆ ನೃತ್ಯ ಮಾಡಿ ಮೊನಾಲಿಸಾ ಗಮನ ಸೆಳೆದಿದ್ದಳು.
ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ 16 ವರ್ಷದ ಮೊನಾಲಿಸಾ ಭೋಸ್ಲೆ, ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ ತನ್ನ ಸುಂದರ ಕಣ್ಣುಗಳು, ಸೌಂದರ್ಯದ ಮೂಲಕ ಜನರನ್ನು ಆಕರ್ಷಿಸಿದ್ದಳು. ನರ್ಮದಾ ನದಿಯ ಬಳಿಯ ಕಿಲಾ ಘಾಟ್ನಲ್ಲಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಯುವತಿ ಇದೀಗ ಸ್ಟಾರ್ ಆಗಿ ಮಿಂಚುತ್ತಿದ್ದಾಳೆ.
ಮೊನಾಲಿಸಾ ಮುಂಬರುವ ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಚಿತ್ರವನ್ನು 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಗೆ ಹೆಸರುವಾಸಿಯಾದ ಸನೋಜ್ ಮಿಶ್ರಾ ನಿರ್ದೇಶಿಸಿದ್ದಾರೆ. ರಾಜ್ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.