)
Monalisa: ಈ ವರ್ಷ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರಾಷ್ಟ್ರವ್ಯಾಪಿ ಗಮನ ಸೆಳೆದ ಸೋಶಿಯಲ್ ಮೀಡಿಯಾ ಸ್ಟಾರ್ ಮೊನಾಲಿಸಾ, ತನ್ನ ಕಣ್ಸನ್ನೆ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದು ಗೊತ್ತೇ ಇದೆ. ಆಕೆಯ ಒಂದು ವೀಡಿಯೋ ವೈರಲ್ ಆಗಿದ್ದೇ ತಡ, ರಾತ್ರೋ ರಾತ್ರಿ ಫೇಮಸ್ ಆದಳು ಈ ಸರ ಮಾರುವ ಸಾಮಾನ್ಯ ಹುಡುಗಿ. ಕಡಿಮೆ ಸಮಯದಲ್ಲಿ ದೊರೆತ ಈ ಅಪಾರ ಪ್ರಸಿದ್ದಿ ಆಕೆಯನ್ನು ಚಿತ್ರೋದ್ಯಮಕ್ಕೆ ಕರೆತಂದಿತು. ಕೆಲವೇ ಸಮಯದಲ್ಲಿ ಕಣ್ಸನ್ನೆ ಸುಂದರಿ ತನ್ನದೇ ಆದ ಅಭಿಮಾನಿ ಬಳಗವನ್ನೇ ಗಳಿಸಿಕೊಂಡಳು. ಈಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾಳೆ ಈ ಸರಳ ಹುಡುಗಿ. ಇನ್ನು ಈ ಸುದ್ದಿ ಕೇಳಿದ ಕೂಡಲೆ ಯಾವ ಸಿನಿಮಾ..? ಭಾಷೆ..? ಯಾವ ಹೀರೊ..? ಎಂದೆಲ್ಲಾ ಪ್ರಶ್ನೆಗಳು ಓಡುತ್ತವೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಈಗಾಗಲೇ ಒಂದು ಹಿಂದಿ ಸಿನಿಮಾ ಮಾಡಲು ಮುಂದಾಗಿರುವ ಹೊಸ ನಟಿ, ಆಗಲೇ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾಳೆ. ಅದು ಕೂಡ ಮಲಯಾಳಂ ಬಾಷೆಯಲ್ಲಿ.. ಈ ವಿಷಯವನ್ನು ಸ್ವತಃ ತಾನೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಮೊದಲ ಮಲಯಾಳಂ ಚಿತ್ರದ ಪೂಜಾ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೊನಾಲಿಸಾ. 'ನಾಗಮ್ಮ' ಎಂಬ ಶೀರ್ಷಿಕೆಯ ಮುಂಬರುವ ಚಿತ್ರದಲ್ಲಿ ನೀಲತಮಾರ ಚಿತ್ರದ ಪಾತ್ರಕ್ಕೆ ಹೆಸರುವಾಸಿಯಾದ ನಟ ಕೈಲಾಶ್ ನಟಿಸಲಿದ್ದಾರೆ. ಪಿ. ಬಿನು ವರ್ಗೀಸ್ ನಿರ್ದೇಶನದ ಮತ್ತು ಜೀಲಿ ಜಾರ್ಜ್ ನಿರ್ಮಾಣದ ಈ ಯೋಜನೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.
ಇನ್ನೂ ಈ ಸಿನಿಮಾ ಶುಭಾರಂಭ ಕಾರ್ಯಕ್ರಮ ಕೊಚ್ಚಿಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಸಿಬಿ ಮಲಯಿಲ್ ಅವರ ಸಮ್ಮುಖದಲ್ಲಿ ನಡೆದವು. ಹಿರಿಯ ನಟ ಶಂಕರ್ ನಟಿಸಿದ ಹಿಂದಿನ ಚಿತ್ರ ಹಿಮಕ್ರಿ ನಂತರ ಬಿನು ವರ್ಗೀಸ್ ಅವರಿಗೆ ಇದು ಮಹತ್ವದ ಮೈಲಿಗಲ್ಲು ಎಂದು ಹೇಳಲಾಗಿದೆ.
ಇನ್ನು ವೈರಲ್ಬೆಡಗಿಯ ಬಗ್ಗೆ ಹೇಲುವುದಾದರೆ ಈ ವರ್ಷದ ಆರಂಭದಲ್ಲಿ, ಮೊನಾಲಿಸಾ ಕೋಝಿಕ್ಕೋಡ್ನಲ್ಲಿ ಚೆಮ್ಮನೂರು ಜ್ಯುವೆಲ್ಲರ್ಸ್ನ ಹೊಸ ಶೋ ರೂಂ ಅನ್ನು ಉದ್ಘಾಟಿಸುವ ಮೂಲಕ ಕೇರಳದಲ್ಲಿ ಸುದ್ದಿಯಾಗಿದ್ದರು. ಅವರ ಭೇಟಿಗಾಗಿ ದೊಡ್ಡ ಜನಸಮೂಹವೇ ಸೇರಿತ್ತು. ಅವರು ಬಾಬಿ ಚೆಮ್ಮನೂರು ಅವರೊಂದಿಗೆ ನೃತ್ಯ ಸೇರಿದಂತೆ ಉತ್ಸವಗಳಲ್ಲಿ ಭಾಗವಹಿಸಿದರು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.