ಆಗ ನನಗಿನ್ನೂ ಕೇವಲ 17 ವರ್ಷ... ರಣಧೀರ ವೇಳೆ 'ಅಂಜದ ಗಂಡು' ಮಾಡಿದ ಕೆಲಸ ನೆನೆದ ಖುಷ್ಬೂ...

Actor Kushboo: ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಖುಷ್ಬೂ ತಾವು ಅತ್ಯಂತ ಕಷ್ಟದಲ್ಲಿ ಇದ್ದಾಗ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಯಾವ ರೀತಿ ಸಹಾಯ ಮಾಡಿದರು ಎಂಬುದನ್ನು ಹೇಳಿಕೊಂಡಿದ್ದಾರೆ.

Written by - Yashaswini V | Last Updated : Apr 2, 2025, 10:14 AM IST
  • ರವಿಚಂದ್ರನ್ ಮತ್ತು ಖುಷ್ಬೂ 90ರ ದಶಕದ ಸಖತ್ ಜೋಡಿ. ಅವರ ರಣಧೀರ ಮತ್ತು ಅಂಜದಗಂಡು ಸೂಪರ್ ಹಿಟ್ ಸಿನಿಮಾಗಳು.
  • ರವಿಚಂದ್ರನ್ ಮತ್ತು ಖುಷ್ಬೂ ಸಿನಿಮಾ, ಉದ್ಯಮದಾಚೆಗೂ ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ನೇರವಾದ ಅಪರೂಪದ ಜೋಡಿ
  • ಖುಷ್ಬೂಗೇ ಗೊತ್ತಿಲ್ಲದಂತೆ ಅವರಿಗೆ ಸಹಾಯ ಮಾಡಿದ್ದರಂತೆ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ.
ಆಗ ನನಗಿನ್ನೂ ಕೇವಲ 17 ವರ್ಷ...  ರಣಧೀರ ವೇಳೆ 'ಅಂಜದ ಗಂಡು' ಮಾಡಿದ ಕೆಲಸ ನೆನೆದ ಖುಷ್ಬೂ...

Kushboo V Ravichandran Viral Video: ರವಿಚಂದ್ರನ್ ಮತ್ತು ಖುಷ್ಬೂ 90ರ ದಶಕದ ಸಖತ್ ಜೋಡಿ. ಅವರ ರಣಧೀರ ಮತ್ತು ಅಂಜದಗಂಡು ಸೂಪರ್ ಹಿಟ್ ಸಿನಿಮಾಗಳು. ಇದು ಎಲ್ಲರಿಗೂ ಗೊತ್ತು. ಆದರೆ ರವಿಚಂದ್ರನ್ ಮತ್ತು ಖುಷ್ಬೂ ಎಂಥ ಸ್ನೇಹಿತರು ಎನ್ನುವುದು ಬಹಳ ಜನಕ್ಕೆ ಗೊತ್ತಿಲ್ಲ. ಸಿನಿಮಾ, ಉದ್ಯಮದಾಚೆಗೂ ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಜೊತೆಯಾದ ಅಪರೂಪದ ಜೋಡಿ ಇದು.

Add Zee News as a Preferred Source

ಸದ್ಯ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಖುಷ್ಬೂ ಅವರು ತಾವು ಅತ್ಯಂತ ಕಷ್ಟದಲ್ಲಿ ಇದ್ದಾಗ ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಹೇಗೆ ಸಹಾಯ ಮಾಡಿದರು ಎಂಬುದನ್ನು ಹೇಳಿಕೊಂಡಿದ್ದಾರೆ. ಅಂಥ ಸಹಾಯ ಮಾಡಿದ ರವಿ ಚಂದ್ರನ್ ಮತ್ತು ವೀರಸ್ವಾಮಿ ಅವರನ್ನು ಎಂದಿಗೂ ಮರೆಯಲಾರೆ ಎಂದು ಖುಷ್ಬೂ ಗದ್ಗದಿತರಾಗಿದ್ದಾರೆ. 
 

 
 
 
 

 
 
 
 
 
 
 
 
 
 
 

A post shared by Rekha Menon (@menonre)

ಖುಷ್ಬೂ ಅವರಿಗೆ ಆಗ ಕೇವಲ 17 ವರ್ಷ. ಅವರ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ಖುಷ್ಬೂ ಸಹೋದರ ಕೂಡ ಜೊತೆಗಿರಲಿಲ್ಲ. ಚೆನ್ನೈನಲ್ಲಿ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದ ಖುಷ್ಬೂ ಸಿನಿಮಾ ಶೂಟಿಂಗ್ ಅನ್ನೂ ಮಿಸ್ ಮಾಡುವಂತಿರಲಿಲ್ಲ. ಏಕೆಂದರೆ ಅವರ ಬಳಿ ದುಡ್ಡಿರಲಿಲ್ಲ. ಕುಟುಂಬ ನಿರ್ವಹಣೆ ಮತ್ತು ತಾಯಿಯ ಹಾರೈಕೆಗಾಗಿ ದುಡಿಯಲೇಬೇಕಾಗಿತ್ತು. ಸ್ವಲ್ಪ ದಿನದ ಮೇಲೆ ತಾಯಿ ಹುಷಾರಾದರು ಆದ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬರಲು ಹಣ ಇರಲಿಲ್ಲ. ಅದು ಕೇವಲ 36-37 ಸಾವಿರ ರೂಪಾಯಿ.

 

ಇದನ್ನೂ ಓದಿ- ಹೊಸ ಪ್ರಯಾಣ ಆರಂಭ ಎನ್ನುತ್ತಲೇ ಗುಡ್‌ನ್ಯೂಸ್‌ ಹಂಚಿಕೊಂಡ ಸಮಂತಾ! ಎರಡನೇ ಮದುವೆಗೆ ರೆಡಿಯಾದ್ರಾ?

ಇದೇ ಚಿಂತೆಯಲ್ಲಿ ಖುಷ್ಬೂ ರಣಧೀರ ಸಿನಿಮಾದ ಚಿತ್ರೀಕರಣಕ್ಕೆ ಬಂದಿದ್ದರು. ಸದಾ ನಗುನಗುತ್ತಿದ್ದ ಖುಷ್ಬೂ ಅಂದು ಡಲ್ ಆಗಿದ್ದರು. ಇದನ್ನು ಗಮನಿಸಿದ ರವಿಚಂದ್ರನ್ ಮತ್ತು ವೀರಸ್ವಾಮಿ ಮ್ಯಾನೇಜರ್ ಹತ್ತಿರ ಖುಷ್ಬೂ ಏಕೆ ಡಲ್ ಆಗಿದ್ದಾಳೆ ಎಂದು ಕೇಳಿದರು. ವಿಷಯ ತಿಳಿಯಿತು. ಅದಾದ ಮೇಲೆ ಖುಷ್ಬೂಗೂ ಗೊತ್ತಾಗದಂತೆ ಅವರ ತಾಯಿಯನ್ನು ಡಿಸ್ಚಾರ್ಜ್ ಮಾಡಿಸಿ ತಮ್ಮದೇ ಕಾರಿನಲ್ಲಿ ಮನೆಗೆ ಡ್ರಾಪ್ ಮಾಡಿ ಬಂದಿದ್ದರು. 

ನಂತರ ಶೂಟಿಂಗ್ ಸೆಟ್ ನಲ್ಲಿ ನನ್ನ ಬಳಿ ಬಂದ ರವಿಚಂದ್ರನ್ ಮತ್ತು ವೀರಸ್ವಾಮಿ ನಿಮ್ಮ ತಾಯಿಗೆ ಹುಷಾರಿಲ್ಲದ ವಿಚಾರವನ್ನು ಏಕೆ ತಿಳಿಸಲಿಲ್ಲ ಎಂದು ಬೈದರಂತೆ. ಆಗ ನನಗೆ ಯಾರ ಹತ್ರ ನನ್ನ ಕಷ್ಟ ಹೇಳಿಕೊಳ್ಳಬೇಕು. ಹಣ ಕೇಳುವುದು ಹೇಗೆ ಎಂದೇ ಗೊತ್ತಿರಲಿಲ್ಲ. ಏಕೆಂದರೆ ಆಗ ನಾನು 17 ವರ್ಷದ ಹುಡುಗಿ. ಮಾತು ಬಾರದಿದ್ದ ನನ್ನನ್ನು ಸಂತೈಸಿದರು. ನಾವು ಒಂದು ಕುಟುಂಬದ ರೀತಿ ಕೆಲಸ ಮಾಡುತ್ತಿದ್ದೇವೆ. ಕಷ್ಟ ಸುಖಗಳನ್ನು ಹಂಚಿಕೊಳ್ಳಬೇಕು ಎಂದು ತಿಳಿಹೇಳಿದರಂತೆ. 

ಇದನ್ನೂ ಓದಿ- ನಟ ಯಶ್‌ ಕೆಳಗೆ ಬೀಳಲಿ ಅನ್ನೋದನ್ನೇ ಅವರು ಕಾಯುತ್ತಿರುವುದು: ನಟಿ ಮನ್ವಿತಾ ಕಾಮತ್‌ ಶಾಕಿಂಗ್‌ ಹೇಳಿಕೆ

ಇದಾದ ಕೆಲ ವರ್ಷಗಳಲ್ಲಿ ಸಿನಿಮಾಗಳು ಸತತವಾಗಿ ಸೋತು ರವಿಚಂದ್ರನ್ ತೀವ್ರ ಕಷ್ಟದಲ್ಲಿದ್ದಾಗ ಖುಷ್ಬೂ ಸಹಾಯ ಮಾಡಿದ್ದರಂತೆ. ಇದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಖುಷ್ಬೂ ಹೇಳಿಕೊಂಡಿಲ್ಲ. ಇತ್ತೀಚಿಗೆ ಸ್ವತಃ ರವಿಚಂದ್ರನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News