ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಲ್ಯಾಂಡ್ ಲಾರ್ಡ್ ಸಿನಿಮಾ

ಲ್ಯಾಂಡ್ ಲಾರ್ಡ್ ಸಿನಿಮಾ ಸಾಕಷ್ಟು ಹವಾ ಕ್ರಿಯೇಟ್ ಮಾಡ್ತಾಯಿದೆ. ಸಾಲು ಸಾಲು ಗ್ಲಿಂಪ್ಸ್ ಗಳ ಮೂಲಕ ಒಂದು ರೇಂಜ್‌ಗೆ ಆಡಿಯನ್ಸ್ ನ ಥ್ರಿಲ್ ಮಾಡಿದೆ. ಸರ್ವೈವರ್ ಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಿಬೊಬ್ಬಿರಿದ್ದಾರೆ. ಕೊಡಲಿ ಹಿಡಿದು, ಪಂಚೆಕಟ್ಟಿ, ತಲೆಗೆ ರುಮಾಲು ಕಟ್ಟಿ ಹೊಡ್ದಿರೋ ಡೈಲಾಗ್ ಗೆ ಫ್ಯಾನ್ಸ್ ಶಿಳ್ಳೆ ಹೊಡ್ದು ಹುಚ್ಚೆದ್ದು ಕುಣ್ತಿದ್ದಾರೆ. 

Written by - Bhavishya Shetty | Last Updated : Dec 8, 2025, 07:32 PM IST
    • ಆ ರೂಲರ್ ಯಾರು? ರೂಲರ್ ಹವಾ ಹೇಗಿದೆ?
    • ಲ್ಯಾಂಡ್ ಲಾರ್ಡ್ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ
    • ಲ್ಯಾಂಡ್ ಲಾರ್ಡ್ ಸಿನಿಮಾ ಸಾಕಷ್ಟು ಹವಾ ಕ್ರಿಯೇಟ್ ಮಾಡ್ತಾಯಿದೆ
ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಲ್ಯಾಂಡ್ ಲಾರ್ಡ್ ಸಿನಿಮಾ

ಸದ್ಯಕ್ಕೆ ಲ್ಯಾಂಡ್ ಲಾರ್ಡ್ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ದುನಿಯಾ ವಿಜಯ್ ಅವರು ಸರ್ವೈವರ್ ಆಗಿ ಅಬ್ಬರಿಸೋ ಟೀಸರ್ ರಿಲೀಸ್ ಆಗಿದ್ದು, ಈಗ ʼದಿ ರೂಲರ್ʼ ಎಂಟ್ರಿ ಆಗಿದ್ದಾರೆ. ಆ ರೂಲರ್ ಯಾರು? ರೂಲರ್ ಹವಾ ಹೇಗಿದೆ? ರೂಲರ್ ಹಾಗೂ ಸರ್ವೈವರ್ ನಡುವೆ ನಡೆಯುವ ಕದನ ಹೇಗಿರುತ್ತೆ ಅನ್ನೋದನ್ನ ಹೇಳ್ತೀವಿ ಕೇಳಿ ರೂಲರ್ V/S ಸರ್ವೈವರ್ ಸ್ಟೋರಿಯಲ್ಲಿ!

Add Zee News as a Preferred Source

ಲ್ಯಾಂಡ್ ಲಾರ್ಡ್ ಸಿನಿಮಾ ಸಾಕಷ್ಟು ಹವಾ ಕ್ರಿಯೇಟ್ ಮಾಡ್ತಾಯಿದೆ. ಸಾಲು ಸಾಲು ಗ್ಲಿಂಪ್ಸ್ ಗಳ ಮೂಲಕ ಒಂದು ರೇಂಜ್‌ಗೆ ಆಡಿಯನ್ಸ್ ನ ಥ್ರಿಲ್ ಮಾಡಿದೆ. ಸರ್ವೈವರ್ ಪಾತ್ರದಲ್ಲಿ ದುನಿಯಾ ವಿಜಯ್ ಅಬ್ಬರಿಸಿಬೊಬ್ಬಿರಿದ್ದಾರೆ. ಕೊಡಲಿ ಹಿಡಿದು, ಪಂಚೆಕಟ್ಟಿ, ತಲೆಗೆ ರುಮಾಲು ಕಟ್ಟಿ ಹೊಡ್ದಿರೋ ಡೈಲಾಗ್ ಗೆ ಫ್ಯಾನ್ಸ್ ಶಿಳ್ಳೆ ಹೊಡ್ದು ಹುಚ್ಚೆದ್ದು ಕುಣ್ತಿದ್ದಾರೆ. 

ಇನ್ನೂ ಅದಕ್ಕೂ ಮುನ್ನ ಲ್ಯಾಂಡ್ ಲಾರ್ಡ್ ಸಿನಿಮಾದ ಮತ್ತೊಂದು ಪಿಲ್ಲರ್ ಆಂದ್ರೆ ರಚಿತಾ ರಾಮ್. ರಚ್ಚು ಹುಟ್ಟುಹಬ್ಬಕ್ಕೆ  ರಿಲೀಸ್ ಮಾಡಿದ್ದ ಟೀಸರ್ ಕೂಡ ಅಖತ್ ಕಿಕ್ ಕೊಟ್ಟಿದೆ. ನಿಂಗವ್ವ ಪಾತ್ರದಲ್ಲಿ‌ ಎಂಟ್ರಿಕೊಟ್ಟಿರೋ ರಚಿತಾ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಬಾರಿ ಲ್ಯಾಂಡ್ ಲಾರ್ಡ್‌ ಮಾಸ್ ರೂಲರ್ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ ರೂಲರ್ ಆಗಿ‌ ಸಖತ್ ಎಂಟ್ರಿ ಕೊಟ್ಟಿದ್ದಾರೆ.. ದುನಿಯಾ ವಿಜಯ್ ಎದುರು ರಾಜ್ ಬಿ ಶೆಟ್ಟಿ ಖಡಕ್ ಆಗಿ ತೊಡೆತಟ್ಟಿದ್ದಾರೆ. ಪಕ್ಕಾ ಮಾಸ್ ಲುಕ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೋಲಾರ ಭಾಷೆಯಲ್ಲಿ ಹೊಡೆದಿರೋ ಡೈಲಾಗ್ ಕೇಳೊದ್ರೆ ಕಿಕ್ ಕೊಡೋದು ಪಕ್ಕ. ಒಮ್ನೆ ನೀವು ನೋಡಿ. ನಿಮಗೂ ಅಷ್ಟೇ ಕಿಕ್ ಕೊಡುತ್ತೆ. 

ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಕ್ಕುನಗಿಸಿದ್ದ ರಾಜ್ ಬಿ ಶೆಟ್ರು, ಈಗ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಕೆಸರು ಗದ್ದೆಯಲ್ಲಿ ವಿರೋಧಿಗಳನ್ನ ಕೊಚ್ಚಿ‌ ಕೊಲ್ಲೋ ದೃಶ್ಯದ ಟೀಸರ್ ನಲ್ಲಿ ಅಬ್ಬರಿಸಿ ಬೊಬ್ಬಿರಿದ್ದಾರೆ. ಇದೇ ವೇಳೆ ಮಾತ್ನಾಡಿದ ರಾಜ್ ಬಿ ಶೆಟ್ರು ತಮ್ಮ ಪಾತ್ರದ ಬಗ್ಗೆ ತುಂಬಾ ಅದ್ಭುತವಾಗಿ ಮಾತ್ನಾಡಿದ್ರು. ದುನಿಯಾ ವಿಜಯ್ ಅವರ ಸಪೋರ್ಟ್ ನೆನೆದು ಧನ್ಯವಾದ ತಿಳಿಸಿದರು.

ಇನ್ನೂ ಇದೇ ವೇಳೆ ಸಿನಿಮಾದ ಅಸಲಿ ಲ್ಯಾಂಡ್ ಲಾರ್ಡ್ ದುನಿಯಾ ವಿಜಯ್ ಸಿನಿಮಾದ ಬಗ್ಗೆ ಅದ್ಭುತವಾಗಿ ಮಾತ್ನಾಡಿದ್ರು.. ರಾಜ್ ಬಿ ಶೆಟ್ಟಿಯವರ ನಟನೆಗೆ ಹ್ಯಾಟ್ಸಾಪ್ ಹೇಳಿದ್ರು. ಅವರನ್ನು ನನಗಿಂತ ಅದ್ಭುತವಾಗಿ ತೋರಿಸಿದ ನಿರ್ದೇಶಕ ಜಡೇಶ್ ಹಂಪಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ರು.. ಜೊತೆಗೆ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ರು. 

ಇನ್ನೂ ಟೀಸರ್ ಲಾಂಚ್ ಆದ ನಂತ್ರ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಪ್ರೆಶ್ನೋತ್ತರ ಕಾರ್ಯಕ್ರಮಕ್ಕೆ‌‌ ಮುಂದಾದ್ರು.. ಪತ್ರಕರ್ತರು ಕೇಳಿದ ಪ್ರೆಶ್ನೆಗಳಿಗೆ ತುಂಬಾ ಅದ್ಭುತವಾಗಿ ಉತ್ತರಿಸಿದ್ರು.. ಅದರಲ್ಲೂ ರಾಜ್ ಬಿ ಶೆಟ್ರು ಹಾಗೂ ದುನಿಯಾ ವಿಜಯ್ ತುಂಬಾ ಸೂಕ್ಚ್ಮ ವಿಚಾರಗಳನ್ನು ಹಂಚಿಕೊಂಡರು. ಎನಿವೇ. ಮುಂದಿನ‌ ವರ್ಷದ ಜನವರಿ 23ನೇ ತಾರೀಖು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗ್ತಾಯಿದೆ..ಅದಕ್ಕೂ ಮೊದಲು ಇನ್ನೂ ಎರಡು  ಹಾಗೂ ಒಂದು ಭರ್ಜರಿ ಟ್ರೈಲರ್ ಕೂಡ ರಿಲೀಸ್ ಆಗಲಿದೆ.

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News