Lata Mangeshkar Unheard Love Story: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಗಾಯನ ಕೇಳದವರಾರು ಹೇಳಿ.. ಹಿಂದಿ, ತೆಲುಗು, ಬಂಗಾಳಿ ಕನ್ನಡ ಸೇರಿದಂತೆ ಹೀಗೆ ಅವರು 14 ಭಾಷೆಗಳಲ್ಲಿ 50,000 ಹಾಡುಗಳನ್ನು ಹಾಡಿದ್ದಾರೆ.1942 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 1960 ರ ದಶಕದಲ್ಲಿ 30,000 ಹಾಡುಗಳನ್ನು ಹಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಹೆಗ್ಗಳಿಕೆ ಅವರದ್ದಾಗಿದೆ.
ಲಗ್ ಜಾಗಲೇ, ತೆರೆ ಬಿನಾ ಜಿಂದಗಿ, ವಾದಾ ಕರ್ ಲೇ ಸಜ್ನಾ ಹಾಗೂ ಕನ್ನಡದಲ್ಲಿ ಬೆಳ್ಳನೆ ಬೆಳಗಾಯಿತು ಹೀಗೆ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ ಅವರು ಕೊನೆಯವರೆಗೂ ಮದುವೆಯಾಗದೆ ಉಳಿದದ್ದೇಕೆ? ಎನ್ನುವ ಪ್ರಶ್ನೆ ಇಂದಿಗೂ ಬಹುತೇಕ ಎಲ್ಲರಿಗೂ ಕಾಡುತ್ತದೆ. ಈಗ ನಾವು ಇಂತಹ ಮಹಾನ್ ಗಾಯಕಿ ಕೂಡ ಪ್ರೇಮ ಪಾಶದಲ್ಲಿ ಸಿಲುಕಿ ಕೊನೆವರೆಗೆ ಮದುವೆಯಾಗದೆ ಉಳಿದ ಪ್ರೇಮಕಥನದ ಬಗ್ಗೆ ಹೇಳುತ್ತೇವೆ.
ಲತಾ ಮಂಗೇಶ್ಕರ್ ಲವ್ ಸ್ಟೋರಿ:
ಲತಾ ಮಂಗೇಶ್ಕರ್ ಅವರ ಲವ್ ಸ್ಟೋರಿ ಬಗ್ಗೆ ಬಿಕಾನೆರ್‌ನ ರಾಜಕುಮಾರಿ ರಾಜ್ಯಶ್ರೀ ಕುಮಾರಿ ತಮ್ಮ ಆತ್ಮಚರಿತ್ರೆ 'ಪ್ಯಾಲೇಸ್ ಆಫ್ ಕ್ಲೌಡ್ಸ್: ಎ ಮೆಮೋಯಿರ್' ನಲ್ಲಿ ಉಲ್ಲೇಖಿಸಲಾಗಿದೆ.ರಾಜಮನೆತನಕ್ಕೆ ಸೇರಿದ ಕ್ರಿಕೆಟ್ ಆಟಗಾರ ಡುಂಗರಪುರ್ 1959 ರಲ್ಲಿ ಕಾನೂನು ಪದವಿ ಪಡೆಯಲು ಮುಂಬೈಗೆ ಬಂದಾಗ ಅಲ್ಲಿ ಅವರು ಲತಾ ಅವರ ಸಹೋದರ ಹೃದಯನಾಥ್ ಅವರನ್ನು ಭೇಟಿಯಾದರು. ನಂತರ ಅವರಿಬ್ಬರೂ ಗೆಳೆಯರಾದರು. ಇದರಿಂದಾಗಿ ಲತಾ ಮಂಗೇಶ್ಕರ್ ಅವರ ಮನೆಗೆ ಡುಂಗರಪುರ್ ಆಗಾಗ್ಗೆ ತನ್ನ ಸ್ನೇಹಿತನನ್ನು ಭೇಟಿಯಾಗಲು ಮಂಗೇಶ್ಕರ್ ಮನೆಗೆ ಭೇಟಿ ನೀಡುತ್ತಿದ್ದರು, ಈ ವೇಳೆ ಅವರು ಲತಾ ಅವರನ್ನು ಭೇಟಿಯಾದರು.ಈ ಭೇಟಿ ಮುಂದೆ ಅವರಿಬ್ಬರ ನಡುವೆ ಪ್ರೇಮಾಂಕುರಕ್ಕೆ ಕಾರಣವಾಯಿತು.
ತಮ್ಮ ಕಾನೂನು ಪದವಿ ಮುಗಿದ ನಂತರ ರಾಜ್ ಸಿಂಗ್ ತಮ್ಮ ರಾಜಭವನಕ್ಕೆ ಮನೆಗೆ ತೆರಳಿ ಲತಾ ಮಂಗೇಶ್ಕರ್ ಅವರನ್ನು ಮದುವೆಯಾಗುವ ಪ್ರಸ್ತಾಪವನ್ನು ಅವರ ಕುಟುಂಬದ ಮುಂದೆ ಇಟ್ಟರು. ಆದರೆ ಮಂಗೇಶ್ಕರ್ ರಾಜಮನೆತನದ ಹಿನ್ನೆಲೆಯಿಂದ ಬಂದವರಲ್ಲದ ಕಾರಣ ಮದುವೆಯ ಪ್ರಸ್ತಾಪವನ್ನು ಅವರ ಮನೆಯವರು ನಿರಾಕರಿಸಿದರು.ಇದಕ್ಕಾಗಿ ಅವರು ಪರಿ ಪರಿಯಾಗಿ ಬೇಡಿಕೊಂಡರು ಸಹಿತ ಇದಕ್ಕೆ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ, ಹಾಗಾಗಿ ನಂತರ ಅವರು ಮದುವೆಯಾಗುವ ಯೋಚನೆಯನ್ನೇ ಕೈ ಬಿಡಬೇಕಾಗಿ ಬಂತು.
ಕೊನೆಗೆ ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಡುಂಗರಪುರ್ ಇಬ್ಬರೂ ಬೇರೆಯವರನ್ನು ಮದುವೆಯಾಗಲು ಆಯ್ಕೆ ಮಾಡಿಕೊಳ್ಳದೆ ಇಡೀ ಜೀವನವನ್ನೇ ಒಬ್ಬಂಟಿಯಾಗಿ ಕಳೆದರು. 2009 ರಲ್ಲಿ ರಾಜ್ ಸಿಂಗ್ ನಿಧನರಾದಾಗ ಲತಾ ಮಂಗೇಶ್ಕರ್ ಡುಂಗರಪುರಕ್ಕೆ ಭೇಟಿ ನೀಡಿದ್ದು ಅವರ ನಡುವಿನ ಶಾಶ್ವತ ಪ್ರೀತಿಗೆ ನಿದರ್ಶನ ಎಂದು ಹೇಳಬಹುದು.
ಯಾರು ಈ ರಾಜ್ ಸಿಂಗ್ ಡುಂಗರಪುರ?
1935 ರಲ್ಲಿ ರಾಜಮನೆತನದಲ್ಲಿ ಜನಿಸಿದ ಕ್ರಿಕೆಟಿಗ ರಾಜ್ ಸಿಂಗ್ ಡುಂಗರಪುರ್, ಡುಂಗರಪುರದ ರಾಜ ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜಿ ಅವರ ಕಿರಿಯ ಮಗ. ಅವರು ರಣಜಿಯಲ್ಲಿ ರಾಜಸ್ಥಾನ ಪರ ಆಡಿದ್ದರು. 1955 ರಿಂದ 1971 ರವರೆಗೆ 80 ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.
ಎರಡು ಅವಧಿಗೆ ರಾಷ್ಟ್ರೀಯ ಆಯ್ಕೆದಾರರಾಗಿ ಕಾರ್ಯನಿವಹಿಸಿದ ನಂತರ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









