Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ದರ್ಶನ್ ಸೇರಿದಂತೆ 7 ಜನ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಬೆಂಗಳೂರು: ದರ್ಶನ್ ಜಾಮೀನು ಪ್ರಶ್ನಿಸಿ ಇದನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ರಾಜ್ಯ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ರಾಜ್ಯ ಪೊಲೀಸರ ಪರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ವಾದ ವಿವಾದದ ಬಳಿಕ ಈಗ ಸುಪ್ರೀಂ ಕೋರ್ಟ್ 7 ಜನರ ಜಾಮೀನು ರದ್ದು ಮಾಡಿ ಮತ್ತೆ ಜೈಲಿಗೆ ಕಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಪರ ವಾದ ಮಂಡಿಸಿ ದರ್ಶನ್ ಜಾಮೀನು ಕ್ಯಾನ್ಸಲ್ ಮಾಡಿಸಿ ಮತ್ತೆ ಕಂಬಿ ಎಣಿಸೋ ಹಾಗೆ ಮಾಡಿದ ವಕೀಲರ ತಂಡದ ಫೋಟೋ ವೈರಲ್ ಆಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.
ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿ ಆದೇಶಿಸಿದೆ. ಜಾಮೀನು ರದ್ದಾದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್ಗೆ ಸರೆಂಡರ್ ಆಗಿದ್ದಾರೆ.
ದರ್ಶನ್ಗೆ ಎಷ್ಟು ತಿಂಗಳು ಜೈಲು?
ಜಾಮೀನು ಪಡೆದು ಹೊರ ಬಂದ ದರ್ಶನ್, ಪವಿತ್ರಾ ಗೌಡ ಹಾಗೂ ಇತರ 5 ಜನ ಇದೀಗ ಮತ್ತೆ ಜೈಲು ಪಾಲಾಗಿದ್ದಾರೆ. ಕನಿಷ್ಠ ಅಂದ್ರೆ 6 ತಿಂಗಳ ಜೈಲಿನಲ್ಲೇ ಕಾಲ ಕಳೆಯಬೇಕಿದೆ ಎನ್ನಲಾಗುತ್ತಿದೆ.
ಸುಪ್ರೀಂ ಆದೇಶವನ್ನ ಪ್ರಶ್ನಿಸಿ ತ್ರಿಸದಸ್ಯ ಪೀಠಕ್ಕೆ ಅರ್ಜಿ ಹಾಕಲು ದರ್ಶನ್ ಪರ ವಕೀಲರಿಗೆ ಅವಕಾಶ ಇದೆ. ಆದರೆ ತ್ರಿಸದಸ್ಯ ಪೀಠಕ್ಕೆ ಅರ್ಜಿ ಅಡ್ಮಿಟ್ ಆಗುವುದೇ ಕಡಿಮೆ ಆದ ಕಾರಣ ಬಹುತೇಕ ಆರು ತಿಂಗಳು ಜೈಲೇ ಗತಿ ಎಂಬ ಸ್ಥಿತಿ ನಿರ್ಮಾಣವಾದಂತಿದೆ.
ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದ ದರ್ಶನ್ ಈಗ ಮತ್ತೆ ಕಂಬಿ ಹಿದೆ ಹೋಗಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ, A6 ಜಗದೀಶ್ ಅಲಿಯಾಸ್ ಜಗ್ಗ, A7 ಅನುಕುಮಾರ್ ಅಲಿಯಾಸ್ ಅನು, A14 ಪ್ರದೂಶ್, A11 ನಾಗರಾಜು ಅಲಿಯಾಸ್ ನಾಗ, A12 , ಲಕ್ಷ್ಮಣ್ ಜಾಮೀನು ಕೂಡ ರದ್ದಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.