close

News WrapGet Handpicked Stories from our editors directly to your mailbox

ತೆಲುಗು ಕಲಿಯುವುದು ತುಂಬಾ ಕಷ್ಟ - ಬಾಲಿವುಡ್ ನಟಿ ಅಲಿಯಾ ಭಟ್

 ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಮೂಲಕ ಇದೆ ಮೊದಲ ಬಾರಿಗೆ ಬಾಲಿವುಡ್ ನಟಿ ಅಲಿಯಾ ಭಟ್ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗ ಜನಪ್ರೀಯ ಮನರಂಜನೆ ಪೋರ್ಟಲ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು  ಹೇಳಿಕೊಂಡಿದ್ದಾರೆ.

Updated: Apr 14, 2019 , 12:39 PM IST
ತೆಲುಗು ಕಲಿಯುವುದು ತುಂಬಾ ಕಷ್ಟ - ಬಾಲಿವುಡ್ ನಟಿ ಅಲಿಯಾ ಭಟ್

ನವದೆಹಲಿ:  ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಮೂಲಕ ಇದೆ ಮೊದಲ ಬಾರಿಗೆ ಬಾಲಿವುಡ್ ನಟಿ ಅಲಿಯಾ ಭಟ್ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗ ಜನಪ್ರೀಯ ಮನರಂಜನೆ ಪೋರ್ಟಲ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು  ಹೇಳಿಕೊಂಡಿದ್ದಾರೆ.

"ನಾನು ಈಗ ನನ್ನ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದೇನೆ ಅದು ನಿಜಕ್ಕೂ ಕಠಿಣವಾಗಿದೆ.ರಾಜಮೌಳಿ ನನ್ನ ಫೆವರೇಟ್ಪಟ್ಟಿಯಲ್ಲಿರುವ ನಿರ್ದೇಶಕರಲ್ಲಿ ಒಬ್ಬರು.ಕೇವಲ ಬಾಹುಬಲಿ ಸಿನಿಮಾದ ಕಾರಣಕ್ಕಾಗಿ ಅಲ್ಲ.ಅವರು ಸೃಜನಶೀಲ ಕಲ್ಪನೆಯನ್ನು ಯಾವಾಗಲೂ ಹೊಂದಿದ್ದಾರೆ.ಅವರ ಮಗಧೀರಾ ಮತ್ತು ಈಗಾ ಸಿನಿಮಾಗಳನ್ನು ನಾನು ನೋಡಿದ್ದೇನೆ.ಅವರ ವಿಚಾರಗಳು ನಿಜಕ್ಕೂ ಮೈಂಡ್ ಬ್ಲೋವಿಂಗ್ " ಎಂದು ಅಲಿಯಾ ಭಟ್  ಹೇಳಿದ್ದಾರೆ.

ಈಗ ಚಿತ್ರದಲ್ಲಿನ ಪಾತ್ರವನ್ನು ಸರಳಗೊಳಿಸಲು ತೆಲುಗು ಭಾಷೆಯನ್ನ ಕಲಿಯುತ್ತಿದ್ದಾರೆ.ಅದಕ್ಕಾಗಿ ಅವರು ಒಬ್ಬ ಟ್ಯೂಟರ್ ನ್ನು ಕೂಡ ನೇಮಕ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲಿಯಾ ನಂತಹ ನಾಯಕಿ ತೆಲುಗು ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಲಿಯುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ . ದುರದೃಷ್ಟವಶಾತ್, ಈಗ ದಶಕಕ್ಕೂ ಹೆಚ್ಚು ಕಾಲ ಉದ್ಯಮದಲ್ಲಿ ಕೆಲವು ನಾಯಕಿಯರಿದ್ದಾರೆ, ಆದರೆ ಇನ್ನೂ ತೆಲುಗಿನಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ.
  
ಜುಲೈ 20, 2020 ರಂದು ಆರ್ ಆರ್ ಆರ್  ಬಿಡುಗಡೆಯಾಗುತ್ತದೆ ಮತ್ತು ಜೂನಿಯರ್ ಎನ್ಟಿಆರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿ.ವಿ.ವಿ ಎಂಟರ್ಟೈನ್ಮೆಂಟ್ನಡಿಯಲ್ಲಿ ಈ ಚಿತ್ರವನ್ನು ಡಿ.ವಿ.ವಿ ದಯಾನಯ ನಿರ್ಮಿಸಿದ್ದಾರೆ.