ಮಡೆನೂರು ಮನು ಪ್ರಕರಣದಲ್ಲಿ ಟ್ವಸ್ಟ್‌ ಮೇಲೆ ಟ್ವಿಸ್ಟ್‌..! ಮದ್ಯ ಕುಡಿಸಿ ದೌರ್ಜನ್ಯ, ಖಾಸಗಿ ಸಮಯದ ವಿಡಿಯೋ ರೆಕಾರ್ಡ್‌

Madenur manu news : ಕಾಮಿಡಿ ಕಿಲಾಡಿ ಶೋ ನಂತರ ಆತ ಕಷ್ಟಪಟ್ಟು ಸಿನಿಮಾ ಮಾಡಿದ್ದ.ಇವತ್ತು ಸಿನಿಮಾ ರಿಲೀಸ್ ಕೂಡ ಆಯ್ತು. ಆದ್ರೆ ಸಿನಿಮಾ ರಿಲೀಸ್ ಸೆಲೆಬ್ರೇಷನ್ ನಲ್ಲಿ ಇರ್ಬೇಕಾಗಿದ್ದ ಹೀರೋ ಇರೋದು ಮಾತ್ರ ಕಂಬಿ ಹಿಂದೆ. ಸಹ ನಟಿಯ ಗಂಭೀರ ಆರೋಪ ಕೇಸ್ ಆತನ ಲೈಫ್ ನಲ್ಲಿ ಖುಷಿ ದಿನವನ್ನೆ ಕೆಟ್ಟ ದಿನ ಮಾಡಿದೆ. ಹಾಗಾದ್ರೆ ಅಲ್ಲೇನಾಯ್ತು ಹೇಳ್ತಿವಿ ನೋಡಿ.

Written by - Krishna N K | Last Updated : May 23, 2025, 08:19 PM IST
    • ನಟ ಮಡೆನೂರ್ ಮನು ತೀವ್ರ ವಿಚಾರಣೆ..
    • ಬೆದರಿಕೆ ಹಾಕಿ ವಿಡಿಯೋ, ಆಡಿಯೋ ಮಾಡಿಸಿ ಹರಿಬಿಟ್ಟಿದ್ನಾ ನಟ..?
    • ಮೊಬೈಲ್ ರಿಟ್ರೀವ್ ಗೆ ಅಂತಾ ಎಫ್ಎಸ್ಎಲ್ ರವಾನೆ
ಮಡೆನೂರು ಮನು ಪ್ರಕರಣದಲ್ಲಿ ಟ್ವಸ್ಟ್‌ ಮೇಲೆ ಟ್ವಿಸ್ಟ್‌..! ಮದ್ಯ ಕುಡಿಸಿ ದೌರ್ಜನ್ಯ, ಖಾಸಗಿ ಸಮಯದ ವಿಡಿಯೋ ರೆಕಾರ್ಡ್‌

Madenur Manu case : ಒಂದ್ಕಡೆ ಸಿನಿಮಾ ರಿಲೀಸ್ ಆಗಿದೆ. ಇವತ್ತು ತನ್ನ ಕಟೌಟ್, ಪೋಸ್ಟರ್, ಸಿನಿಮಾ ಥಿಯೇಟರ್ ಮುಂದೆ ಡ್ಯಾನ್ಸ್ ಮಾಡಿ ಸಂಭ್ರಮಿಸಬೇಕಿದ್ದ ನಟ ಮಡೇನೂರ್ ಮನು ನಿನ್ನೆ ಅರೆಸ್ಟ್ ಆಗಿ ಅನ್ನಪೂರ್ಣೇಶ್ವರಿ ನಗರ ಸ್ಟೇಷನ್ ನಲ್ಲಿ ತನಿಖೆ ಎದುರಿಸ್ತಿದ್ದಾನೆ. ನಿನ್ನೆಯಿಂದಲೂ ತೀವ್ರ ವಿಚಾರಣೆ ನಡೆಸಿರೋ ಪೊಲೀಸ್ರು ಆತನ ಮೇಲಿನ ಆರೋಪಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ‌‌.

Add Zee News as a Preferred Source

ಮೊಬೈಲ್ ಪರಿಶೀಲನೆ ಮಾಡಿದ್ದು ಮೊಬೈಲ್ ನಲ್ಲಿ ಸಂತ್ರಸ್ಥೆ ಹಾಗೂ ಮನು ಜೊತೆಗಿರೋ ಫೋಟೋಗಳು ಪತ್ತೆಯಾಗಿವೆ. ಆದ್ರೆ ಯಾವುದೇ ಖಾಸಗಿ ಫೋಟೋಗಳು, ವಿಡಿಯೋಗಳು ಸದ್ಯಕ್ಕೆ ಸಿಕ್ಕಿಲ್ಲ. ವಿಡಿಯೋ ಫೋಟೋ ಡಿಲೀಟ್ ಮಾಡಿರೋ ಅನುಮಾನ ಇದ್ದು ಪೊಲೀಸ್ರು ಆರೋಪಿ ಮನುನನ್ನ ತೀವ್ರ ವಿಚಾರಣೆ ನಡೆಸಿ, ಮೊಬೈಲ್ ರಿಟ್ರೀವ್ ಗೆ ಅಂತಾ ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಖ್ಯಾತ ನಟಿಯನ್ನು ಕಿಡ್ನಾಪ್‌ ಮಾಡುವುದಾಗಿ ಎಚ್ಚರಿಕೆ ನೀಡಿದ ನಟ ವಿಜಯ್ ಸೇತುಪತಿ..!

ಆರೋಪಿ ಮನುನನ್ನ ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಬೆನ್ನಲ್ಲೇ ಮತ್ತೋರ್ವ ಕಾಮಿಡಿ ಕಿಲಾಡಿ ನಟ ಅಪ್ಪಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಸಂತ್ರಸ್ಥೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು ನಟ ಅಪ್ಪಣ್ಣ ನನಗೆ ಕಾರ್ಯಕ್ರಮಗಳಿಗೆ ಕರೀತಾನೆ. ಆದ್ರೆ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಅಂತಾ ಮಾತನಾಡಿರೋ ಆಡಿಯೋ ವೈರಲ್ ಆಗಿದೆ.

ಇನ್ನು ಆಡಿಯೋ ಬಗ್ಗೆ ನಟ ಅಪ್ಪಣ್ಣ ಕ್ಲಾರಿಫಿಕೇಷನ್ ಕೊಟ್ಟಿದ್ದು ನಾನು ಆಕೆ ಹತ್ರ ಕೆಟ್ಟದಾಗಿ ನಡ್ಕೊಂಡಿಲ್ಲ. ಅದು ಸುಳ್ಳು ಆರೋಪ ಅಂತಾ ಹೇಳಿದ್ದಾನೆ.‌ ಇನ್ನು ಈ ಆಡಿಯೋಗಳು, ಮನು ಮೇಲಿನ ಆರೋಪಗಳ ಬಗ್ಗೆ ಮಾಹಿತಿ ಪಡೆಯೋಕೆ ಪೊಲಿಸ್ರು ಸಂತ್ರಸ್ಥೆಗೆ ನೊಟೀಸ್ ಕೊಟ್ಟಿದ್ರು.. ನೊಟೀಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದ ಸಂತ್ರಸ್ಥೆ ನಟಿ ಹೊರಗಡೆ ಬಂದು ನಟ ಮನು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. 

ಇದನ್ನೂ ಓದಿ:ಬಿಕ್ಕಿ ಬಿಕ್ಕಿ ಅಳುತ್ತಲೇ.. ಆ ಹುಡುಗಿಯ ಬಗ್ಗೆ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಬಿಗ್‌ಬಾಸ್‌ ಮೈಕಲ್‌..! ಏನಾಯ್ತು ಗೊತ್ತೆ..?

ಅಪ್ಪಣ್ಣ ಬಗ್ಗೆ ಮನು ಬೆದರಿಕೆ ಹಾಕಿಸಿ ವಿಡಿಯೋ ಮಾಡಿಸಿದ್ದ, ಈ ಬಗ್ಗೆ ನಾನು ಅವತ್ತೇ ಅಪ್ಪಣ್ಣ ಬಳಿ ಕ್ಷಮೆ ಕೇಳಿದೀನಿ ಎಂದಿದ್ದಾಳೆ. ಇನ್ನು ಕಳೆದ ಶನಿವಾರ ಸಂತ್ರಸ್ಥೆ ಮನೆಗೆ ಹೋಗಿದ್ದ ನಟ ಮನು ಒತ್ತಾಯಪೂರ್ವಕವಾಗಿ ಮದ್ಯಪಾನ ಮಾಡಿಸಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಅಲ್ಲದೇ ಖಾಸಗಿ ವಿಡಿಯೋ, ಆಡಿಯೋ ಮಾಡಿಕೊಂಡಿದ್ದಾನೆ. ಅವುಗಳನ್ನ ಇಟ್ಕೊಂಡು ಮನು ಮುಂದಿನ ದಿನದಲ್ಲಿ ಬೆದರಿಕೆ ಹಾಕ್ಬೋದು ಅದಕ್ಕೆ ದೂರು ಕೊಟ್ಟಿದೀನಿ ಅಂತಾ ಸಂತ್ರಸ್ಥೆ ಹೇಳಿದ್ದಾಳೆ..

ಇನ್ನು ಈ ಬಗ್ಗೆ ಮಡೆನೂರ್ ಮನು ಪತ್ನಿ ಕೂಡ ಪ್ರತಿಕ್ರಿಯೆ ನೀಡಿದ್ದು ಇದು ಷಡ್ಯಂತ್ರ. ನನ್ನ ಗಂಡನ ಸಿನಿಮಾ ರಿಲೀಸ್ ಆಗಿದೆ. ಅದನ್ನ ತಡೆಯೋಕೆ ಯಾರೋ ಷಡ್ಯಂತ್ರ ಮಾಡಿದ್ದಾರೆ. ಆಕೆ ಮಾಡಿರೋ ಆರೋಪಗಳು ಸುಳ್ಳು ಎಂದಿದ್ದಾರೆ. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಸಂತ್ರಸ್ಥೆ ಸಿನಿಮಾ ವಿಚಾರಕ್ಕೂ ನನ್ನ ಆರೋಪಕ್ಕೂ ಸಂಬಂಧ ಇಲ್ಲ. ಸಿನಿಮಾ ಚೆನಾಗಿನೇ ಓಡಲಿ ಆದ್ರೆ ಆತ ನನಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾನೆ. ಬೆದರಿಕೆ ಹಾಕಿದ್ದಾನೆ ಹಂಗಾಗಿನೇ ದೂರು ಕೊಟ್ಟೆ ಎಂದಿದ್ದಾಳೆ.

ಇದನ್ನೂ ಓದಿ:ಕೇವಲ ಒಂದು ರಾತ್ರಿಗೆ 35 ಲಕ್ಷ ಡಿಮ್ಯಾಂಡ್‌... ಕನ್ನಡದ ಖ್ಯಾತ ನಟಿಯ ‘ಕತ್ತಲ ವ್ಯವಹಾರ’ ಬಹಿರಂಗ...

ಅತ್ತ ಸಿನಿಮಾ ರಿಲೀಸ್ ಆಗಿದೆ. ಇತ್ತ ನಟ ಮನು ಪೊಲೀಸ್ರ  ವಶದಲ್ಲಿದ್ದಾನೆ.. ಅವ್ರ ಪತ್ನಿ ಇದೆಲ್ಲಾ ಷಡ್ಯಂತ್ರ ಎಂತಿದ್ದಾಳೆ.. ಇತ್ತ ಸಂತ್ರಸ್ಥೆ ಮನು ನನಗೆ ಬೆದರಿಕೆ ಹಾಕಿದಾನೆ.ನನಗೆ ಅನ್ಯಾಯ ಆಗಿದೆ ಅವನಿಗೆ ಶಿಕ್ಷೆ ಆಗಬೇಕು ಅಂತಿದ್ದಾಳೆ. ಸದ್ಯ ಕೇಸ್ ಮಾತ್ರ ಠಾಣೆಯಲ್ಲಿದ್ದು ಯಾವುದು ಸತ್ಯ ಯಾವುದು ಸುಳ್ಳು. ಇದು ನಿಜಕ್ಕೂ ಸಿನಿಮಾ ಪ್ರಚಾರದ ಗಿಮಿಕ್ ಹಾ ಅಥವಾ ನಿಜಕ್ಕೂ ಸಂತ್ರಸ್ಥೆಗೆ ಅನ್ಯಾಯ ಆಗಿದ್ಯಾ ಎಲ್ಲವೂ ತನಿಖೆ ನಂತರವೇ ಗೊತ್ತಾಗಬೇಕು. ಸದ್ಯ ನಟ ಮನು ಅನ್ನು 5 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News