Rashmika Mandanna vs Malaika Arora Dance Viral Video: ಬಾಲಿವುಡ್ ನಲ್ಲಿ ಈಗ ರಶ್ಮಿಕಾ ಮಂದಣ್ಣ ಬಲುಬೇಡಿಕೆಯ ನಟಿ. ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಅವರಂಥ ದೊಡ್ಡ ಹೀರೋಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ರಣಬೀರ್ ಕಪೂರ್ ಜೊತೆ ತುಟಿಗೆ ತುಟಿ ಬೆಸೆದಿದ್ದಾರೆ. ಸಿಕಾಪಟ್ಟೆ ಗ್ಲಾಮರ್ರು ಮತ್ತು ನಟನೆಯ ಗ್ರಾಮರ್ರು. ಹಾಗಾಗಿ ರಶ್ಮಿಕಾ ಥಕ ಥೈ ಎಂದು ಕುಣಿದಿರುವ ಥಾಮಾ ಸಿನಿಮಾದ ಪಾಯ್ಸನ್ ಬೇಬಿ ಹಾಡು ಯದ್ವಾತದ್ವಾ ಹಿಟ್ ಆಗಿದೆ ಎಂದುಕೊಂಡರೆ ಅದು ಸುಳ್ಳು.
ಪಾಯ್ಸನ್ ಬೇಬಿ ಹಾಡು ಹಿಟ್ ಹಾಗಿರುವುದು 29 ವರ್ಷದ ರಶ್ಮಿಕಾ ಮಂದಣ್ಣ ಕಾರಣಕ್ಕಲ್ಲ. 51 ವರ್ಷದ ಮಲೈಕಾ ಅರೋರಾ ಮೈಮಾಟಕ್ಕೆ. ಅದಕ್ಕಿಂತಲೂ ಹೆಚ್ಚಾಗಿ ಆಕೆಯ ಸೊಂಟಕ್ಕೆ. ತನ್ನ ನಗು, ನಟನೆಗಳಿಂದ ಬಾಲಿವುಡ್ ಬೆಡಗಿಯರನ್ನೆಲ್ಲಾ ನಿವಾಳಿಸಿ ಬಿಸಾಡಿದ್ದ ರಶ್ಮಿಕಾ ಮಂದಣ್ಣರನ್ನು ಮಲೈಕಾ ಒಂದೇ ಹಾಡಿನಲ್ಲಿ ತಮ್ಮ ತುಂಟ ಸೊಂಟವನ್ನು ಬಳುಕಿಸಿ ಹಿಂದಿಕ್ಕಿಬಿಟ್ಟಿದ್ದಾರೆ.
ಮಲೈಕಾ ಅರೋರಾ ಡ್ಯಾನ್ಸಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ ಎನ್ನುವುದಕ್ಕೆ ಪಾಯ್ಸನ್ ಬೇಬಿ ಹಾಡು ಯೂಟ್ಯೂಬಿನಲ್ಲಿ 13 ಗಂಟೆಗೆ 39 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ ಎನ್ನುವುದೇ ಸಾಕ್ಷಿ. ಜೊತೆಗೆ ಹಾಡು ನೋಡಿದ ಬಹುತೇಕರು ಲೈಕ್ ಒತ್ತಿರುವುದು ಮಲೈಕಾ ಅರೋರಾಗೆ ಅಂತಲೂ ಜಗಜ್ಜಾಹೀರಾಗಿದೆ.
ಮಲೈಕಾ ಮೈಮಾಟ ಪಾಯ್ಸನ್ ಬೇಬಿ ಹಾಡಿನುದ್ದಕ್ಕೂ ನೋಡುಗರ ಪಾಲಿಗೆ ರಸದೂಟ. ಮಲೈಕಾ ಅರೋರಾ ಎದುರು ರಶ್ಮಿಕಾ ಮಂದಣ್ಣ ಸಪ್ಪೆ ಸಪ್ಪೆ ಎನ್ನುತ್ತಾರೆ ನೋಡಿದವರು. ಥಾಮಾ ಡಿಫರೆಂಟ್ ಆದ ಲವ್ ಸ್ಟೋರಿ ಆಧರಿಸಿ ಮಾಡಿರುವ ಸಿನಿಮಾ. ಮಲೈಕಾ ಅರೋರಾ ಡ್ಯಾನ್ಸು ಇನ್ನೂ ಢಿಫರೆಂಟ್. ಅಕ್ಟೋಬರ್ 21ರಂದು ದೀಪಾವಳಿ ವೇಳೆ ಥಾಮಾ ಸಿನಿಮಾ ಬಿಡುಗಡೆಯಾಗಲಿದೆ.
ಅರೋರಾಗೂ ಮುನ್ನ ನೋರಾ…
ಥಾಮಾ ಸಿನಿಮಾದ ಇನ್ನೊಂದು ವಿಶೇಷ ಏನೆಂದರೆ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾದರೂ ಆಕೆಗೆ ಸರಿ ಸಮನಾಗಿ ಇಬ್ಬರು ಡ್ಯಾನ್ಸರ್ ಗಳಿದ್ದಾರೆ. ಒಬ್ಬರು ಇಷ್ಟೊತ್ತು ಹೇಳಿದ ಮಲೈಕಾ ಅರೋರಾ. ಇನ್ನೊಬ್ಬರು ನೋರಾ ಫತೇಹಿ. ನೋರಾ ಕೂಡ ಸೊಂಟ ಬಳುಕಿಸಿದರೆ ಸುಂಟರಗಾಳಿ ಥರ. ನೋಡುಗರು ತೂರಿಕೊಂಡು ಬರುತ್ತಾರೆ. ನೋರಾ ಮಾಡಿದ್ದ ಥಾಮಾ ಸಿನಿಮಾದ ದಿಲ್ಬರ್ ಕಿ ಆಂಖೋಂ ಕಾ ಹಾಡು ಇತ್ತೀಚಿಗೆ ಬಿಡುಗಡೆಯಾಗಿತ್ತು ಮತ್ತು ಸಖತ್ ಸದ್ದು ಮಾಡಿತ್ತು. ನೋರಾ ನಂತರ ಮಲೈಕಾ ಅರೋರಾ ಈಗ ಪಾಯ್ಸನ್ ಬೇಬಿ ಹಾಡಿನ ಮೂಲಕ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾರೆ.
ಇದನ್ನೂ ಓದಿ- ʼಶೋಭಿತಾ ನನ್ನ ಸೊಸೆಯಲ್ಲ..ʼ ಬಹಿರಂಗವಾಗಿಯೇ ಕುಟುಂಬದೊಳಗಿನ ಸತ್ಯ ಬಿಚ್ಚಿಟ್ಟ ನಾಗಾರ್ಜುನ!









