"ಅಂದು ಆ ವಿಮಾನದ ಒಳಗೆ ನಾನೂ ಇದ್ದೆ..." : ನಟಿ ಮಾಲಾಶ್ರೀ

Malashree plane emergency landing: ಆ ವಿಮಾನದಲ್ಲಿ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ವಿಜಯಶಾಂತಿ, ಬ್ರಹ್ಮಾನಂದಂ ಹಾಗೂ ನಟಿ ಮಾಲಾಶ್ರೀ ಸೇರಿದಂತೆ ಅನೇಕ ಸಿನಿರಂಗದ ಸೆಲಿಬ್ರಿಟಿಗಳು ಪ್ರಯಾಣಿಸುತ್ತಿದ್ದರು.

Written by - Chetana Devarmani | Last Updated : Jun 15, 2025, 04:40 PM IST
  • ಅಹಮದಾಬಾದ್ ವಿಮಾನ ದುರಂತ
  • ಮಾಲಾಶ್ರೀ ವಿಮಾನ ತುರ್ತು ಭೂಸ್ಪರ್ಶ
  • ವಿಮಾನ ತುರ್ತು ಭೂಸ್ಪರ್ಶದ ಬಗ್ಗೆ ಮಾಲಾಶ್ರೀ ಹೇಳಿಕೆ
"ಅಂದು ಆ ವಿಮಾನದ ಒಳಗೆ ನಾನೂ ಇದ್ದೆ..." : ನಟಿ ಮಾಲಾಶ್ರೀ

Malashree plane emergency landing: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ದುರಂತದ ಬಳಿಕ ಅನೇಕ ಜನರು ತಮಗಾದ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. 1993 ರಲ್ಲಿ 260 ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ IC-440, ಏರ್‌ಬಸ್ A300-B2 ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿತ್ತು. ಈ ವಿಮಾನದಲ್ಲಿ ನಟಿ ಮಾಲಾಶ್ರೀ ಸೇರಿದಂತೆ ಚಿತ್ರರಂಗದ ಸೆಲಿಬ್ರಿಟಿಗಳೇ ಇದ್ದರು.

Add Zee News as a Preferred Source

ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿ ಬಹುದೊಡ್ಡ ಅನಾಹುತವೊಂದು ತಪ್ಪಿತ್ತು. ಪೈಲೆಟ್ ಚಾಕಚಕ್ಯತೆಯಿಂದ ಭಾರೀ ದುರಂತದಿಂದ ನೂರಾರು ಜನರ ಪ್ರಾಣ ಉಳಿದಿತ್ತು. ಆ ವಿಮಾನದಲ್ಲಿ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ವಿಜಯಶಾಂತಿ, ಬ್ರಹ್ಮಾನಂದಂ ಹಾಗೂ ನಟಿ ಮಾಲಾಶ್ರೀ ಸೇರಿದಂತೆ ಹಲವರು ಫ್ಯಾಮಿಲಿ ಸಮೇತ ಪ್ರಯಾಣಿಸುತ್ತಿದ್ದರು. ಆ ದುಸ್ವಪ್ನದ ಬಗ್ಗೆ ಖಾಸಗಿ ವಾಹಿನಿ ಜೊತೆ ನಟಿ ಮಾಲಾಶ್ರೀ ಮಾತನಾಡಿದ್ದಾರೆ.

ಅವತ್ತು ಇಡೀ ತೆಲುಗು ಸಿನಿರಂಗವೇ ಆ ಫ್ಲೈಟ್‌ನಲ್ಲಿತ್ತು. ನಾವು ದೀಪಾವಳಿ ಆಚರಿಸಲು ಚೆನ್ನೈಗೆ ಬಂದು ಹೈದರಾಬಾದ್‌ಗೆ ವಾಪಸ್ ಹೊರಟಿದ್ದೆವು. ಚಿರಂಜೀವಿ, ಬಾಲಯ್ಯ, ವಿಜಯಶಾಂತಿ ಎಲ್ಲರೂ ಫ್ಯಾಮಿಲಿ ಸಮೇತ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ಮೊದಲಿಗೆ ಏನು ಹೇಳಲಿಲ್ಲ. ಬಳಿಕ ಹವಮಾನ ಸಮಸ್ಯೆ ಕಾರಣದಿಂದ ಮತ್ತೆ ವಿಮಾನ ಚೆನ್ನೈಗೆ ಹೋಗುತ್ತದೆ ಎಂದು ಅನೌನ್ಸ್ ಮಾಡಿದರು ಎಂದು ಮಾಲಾಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರು ಸ್ಟಾರ್‌ ನಟಿಯರು... ಸಿನಿ ರಂಗದ ಈ ಸೆಲಿಬ್ರಿಟಿಗಳ ದುರಂತ ಅಂತ್ಯ

ಬಹಳ ಹೊತ್ತು ವಿಮಾನವನ್ನು ಆಗಸದಲ್ಲಿ ಸುತ್ತಾಡಿಸಿದರು. ಏಕಾಏಕಿ ಎಮರ್ಜೆನ್ಸಿ ಲ್ಯಾಂಡಿಂಗ್ ಎಂದು ಹೇಳಿ ಬಿಟ್ಟರು. ಎಲ್ಲರೂ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದರು. ನಾವು ಎಲ್ಲೋ ನೆಲದ ಮೇಲೆ ಇಳಿಸುತ್ತಾರೆ ಎಂದು ತಿಳಿದಿದ್ದೆವು. ಕೊನೆಗೆ ಗದ್ದೆಯ ಮೇಲೆ ನಮ್ಮ ವಿಮಾನವನ್ನು ಇಳಿಸಿದ್ದರು. ಪುಣ್ಯಕ್ಕೆ ಯಾರಿಗೂ ಏನೂ ಆಗಲಿಲ್ಲ. ಇವತ್ತಿಗೂ ಅದಕ್ಕೆ ಕಾರಣ ಏನು ಎಂಬ ಬಗ್ಗೆ ನಾನು ಯಾರನ್ನು ಕೇಳಲಿಲ್ಲ ಎಂದು ಮಾಲಾಶ್ರೀ ಹೇಳಿದ್ದಾರೆ.

ಮತ್ತೆ ವಿಮಾನ ಟೇಕ್‌ ಆಫ್‌ ಆಗಬೇಕಾದರೆ ಭಯವಾಗುತ್ತದೆ ಎಂದು ನಾನು ಆ ಘಟನೆ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಹೆಚ್ಚು ತಿಳಿದುಕೊಳ್ಳಲು ಸಹ ಹೋಗಲಿಲ್ಲ. ಆ ಘಟನೆ ಬಳಿಕ ವಿಮಾನದಲ್ಲಿ ಓಡಾಡಲು ನನಗೆ ತುಂಬಾ ಭಯವಾಗುತ್ತದೆ. ಟೇಕಾಫ್ ಹಾಗೂ ಲ್ಯಾಂಡಿಂಗ್ ವೇಳೆ ಎಲ್ಲಾ ದೇವರನ್ನು ಇಂದಿಗೂ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. 

ಆ ವಿಮಾನದಿಂದ ಇಳಿದು ಹೊರ ಬಂದಾಗ ಜೀವ ಉಳಿಯಿತು ಎಂದು ಕಣ್ಣಲ್ಲಿ ನೀರು ತುಂಬಿತ್ತು. ಕ್ಯಾಪ್ಟನ್ ಭಲ್ಲಾ ಬಹಳ ಶ್ರಮವಹಿಸಿ ನಮ್ಮನ್ನೆಲ್ಲಾ ರಕ್ಷಿಸಿದರು. ಕ್ಯಾಪ್ಟನ್‌ಗೆ ಧನ್ಯವಾದ ಸಲ್ಲಿಸಲು ಒಂದು ಕಾರ್ಯಕ್ರಮ ಆಯೋಜಿಸಿದ್ದೆವು. ವಿಮಾನದಲ್ಲಿದ್ದ ಇಂಧನವನ್ನೆಲ್ಲಾ ಖಾಲಿ ಮಾಡಿ ಬಳಿಕ ಬ್ಲಾಸ್ಟ್ ಆಗದಂತೆ ತುಂಬಾ ಕೇರ್‌ ಫುಲ್‌ ಆಗಿ ಇಳಿಸಿದ್ದರು" ಎಂದು ಮಾಲಾಶ್ರೀ ಆ ಘಟನೆ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್‌ ಎದುರಲ್ಲೇ ಉದುರಿ ಬಿತ್ತು ಬಾಲಯ್ಯನ ಮೀಸೆ..‌ ವಿಡಿಯೋ ವೈರಲ್

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News