Mallamma Bigg Boss Remuneration : ಕನ್ನಡ ಬಿಗ್ ಬಾಸ್ ಸೀಸನ್ 12 ರ ಸ್ಪರ್ಧಿ ಮಲ್ಲಮ್ಮ ಪಡೆಯುತ್ತಿರುವ ಸಂಭಾವೆ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Who is Mallamma Bigg Boss : ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಮಲ್ಲಮ್ಮ ಎಂಟ್ರಿ ಹಲವರಲ್ಲಿ ಆಶ್ಚರ್ಯ ಮೂಡಿಸಿದೆ. ಉತ್ತರ ಕರ್ನಾಟಕದ ಸಣ್ಣ ಹಳ್ಳಿಯಿಂದ ಬಂದ ಮಲ್ಲಮ್ಮ ಸೋಶಿಯಲ್ ಮೀಡಿಯಾದಲ್ಲಿ ʻರೀಲ್ಸ್ ಸ್ಟಾರ್ʼ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ಗಳಿಂದ ಸಖತ್ ವೈರಲ್ ಆಗಿರುವ ಮಲ್ಲಮ್ಮ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಒಂದು ಸಣ್ಣ ಹಳ್ಳಿಯ ಮಲ್ಲಮ್ಮ ಕೆಲಸನವನ್ನು ಅರಸಿ ಬೆಂಗಳೂರಿಗೆ ಬಂದರು.
ಮಲ್ಲಮ್ಮ ಅವರ ವಿಡಿಯೋಗಳನ್ನ ಮಾಡೋದು ಮತ್ತು ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿರುವುದು ಕಿರುತೆರೆ ನಟ ಮನೋಜ್ ಕುಮಾರ್.
ಬೆಂಗಳೂರಿನಲ್ಲಿ ಒಂದು ಫ್ಯಾಷನ್ ಬೋಟಿಕ್ನಲ್ಲಿ ಮಲ್ಲಮ್ಮ ಕೆಲಸ ಮಾಡುತ್ತಿದ್ದರು. ಕಸ್ಟಮರ್ಗಳೊಂದಿಗೆ ಮಲ್ಲಮ್ಮ ಮಾತಾಡುವ ಸ್ಟೈಲ್, ಪಂಚ್ ಡೈಲಾಗ್ ಮನೋಜ್ ಅವರ ಗಮನ ಸೆಳೆಯಿತು.
ಆ ಬಳಿಕ ಮನೋಜ್ ಅವರು 'ಮಲ್ಲಮ್ಮ ಟಾಕ್ಸ್' ಎಂಬ ಇನ್ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಮಲ್ಲಮ್ಮ ಎರಡು ಗಂಡು ಮಕ್ಕಳ ತಾಯಿ ಆಗಿದ್ದಾರೆ.
ಮಲ್ಲಮ್ಮ ತಮ್ಮದೇ ಆದ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 1.69 ಲಕ್ಷ ಫಾಲೋವರ್ಸ ಇದ್ದಾರೆ. ಯೂಟ್ಯೂಬ್ ನಲ್ಲಿ 16 ಸಾವಿರ ಫಾಲೋವರ್ಸ ಇದ್ದಾರೆ.
ಮಲ್ಲಮ್ಮ ಅವರು ಬಿಗ್ ಬಾಸ್ಗೆ ಬಂದಿದ್ದು, ವಾರಕ್ಕೆ 50000 ರೂಪಾಯಿ ಸಂಭಾವನೆ ಪಡೆಯುತ್ತಿರವಹುದು ಎಂದು ಅಂದಾಜಿಸಲಾಗಿದೆ. ಮಲ್ಲಮ್ಮ ಬಿಗ್ ಬಾಸ್ ಪ್ರೇಕ್ಷಕರ ಮನಗೆಲ್ಲತ್ತಾರಾ? ಎಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಬಹುದು ಕಾದು ನೋಡಬೇಕಿದೆ. (ಇದು ವರದಿಗಳನ್ನು ಮತ್ತು ವೈರಲ್ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ನಿಖರ ಮಾಹಿತಿಯಲ್ಲ.)