)
Actor Rajinikanth: ಸಿನಿರಂಗದಲ್ಲಿ ಆಲ್ಟೈಮ್ ಫೇವರೇಟ್ ಆದಂತಹ ನಟ ರಜನಿಕಾಂತ್ ತೆಲುಗು ಭಾಷೆಯಲ್ಲಿ ಮಾತ್ರವಲ್ಲ ಇಡೀ ಭಾರತದಾತ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಷ್ಟು ವರ್ಷಗಳಾದರೂ ಇವರ ಸಿನಿಮಾಗಳಿಗಿರುವ ಕ್ರೇಜ್ ಕಡಿಮೆಯಾಗಿಲ್ಲ.
ನಟ ರಜನಿಕಾಂತ್ ಸಿನಿಮಾಗಳಲ್ಲಿ ವಿಶಿಷ್ಟವಾದ ಕಥಾಹಂದರ ಮತ್ತು ಪ್ರತಿಭಾನ್ವಿತ ಹೊಸ ಮುಖಗಳ ಪರಿಚಯ ಇರುತ್ತದೆ. ರಜನಿಕಾಂತ್ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಮೂಲಕ ಸಿನಿರಂಗಕ್ಕೆ ಅಗಾಧ ಸೇವೆ ನೀಡುತ್ತಲೇ ಬಂದಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಮೂಲಕ ಕಲಾವಿದರಿಗೆ ಸಿನಿಮಾರಂಗದಲ್ಲಿ ಜೀವನ ಕಟ್ಟಿಕೊಳ್ಳಲು ಸುಪರ್ಸ್ಟಾರ್ ಸಹಾಯ ಮಾಡಿದ್ದಾರೆ. ಆದರೆ ಇಲ್ಲೋಬ್ಬ ನಟಿ ರಜನಿಕಾಂತ್ ಸಿನಿಮಾದಲ್ಲಿ ತಾನು ನಟಿಸಿದ್ದೇ ತಪ್ಪು ಎಂದಿದ್ದಾರೆ..
ಸ್ಟಾರ್ನಟನ ಬಗ್ಗೆ ಈ ರೀತಿ ಶಾಕಿಂಗ್ ಹೇಳಿಕೆ ಕೊಟ್ಟ ಈಕೆ ಬೇರೆ ಯಾರು ಅಲ್ಲ, ಪೇಮಸ್ ತೆಲಗು ಚಿತ್ರ "ಯಮಗೊಂಡ" ಮೂಲಕ ಪರಿಚಯವಾದ ನಟಿ ಮಮತಾ ಮೋಹನದಾಸ್. ಈ ಸಿನಿಮಾ ಹಿಟ್ ಆದರೂ ಕೂಡ ಮಮತಾಗೆ ಅಷ್ಟೇನೂ ಮನ್ನಣೆ ಸಿಗಲಿಲ್ಲ. ಈ ಕಾರಣಕ್ಕೆ ಸಿನಿಮಾ ರಂಗದಿಂದ ಕೆಲವು ಕಾಲ ದೂರವಿದ್ದ ನಟಿ ಇತ್ತೀಚಿಗೆ ಮಹಾರಾಜ ಸಿನಿಮಾ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಂಡರು.
ಸಂದರ್ಶನವೊಂದರಲ್ಲಿ ನಟಿ ತಾನು ನಿರ್ವಹಿಸಿದ ಸಿನಿಮಾಗಳಲ್ಲಿ ಕೆಲವು ಫಿಲ್ಮಗಳಲ್ಲಿ ನಟಿಸಿದ್ದಕ್ಕೆ ಅಸಮಾದಾನ ವ್ಯಕ್ತ ಪಡಿಸಿದರು. ಅಂತಹ ಸಿನಿಮಾಗಳಲ್ಲಿ ರಜನಿಕಾಂತ್ ಅವರ ಕುಸೇಲನ್ ಚಿತ್ರ ಕೂಡ ಒಂದು.
ಮಮತಾ ಈ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಇವರ ಹಾಡನ್ನು ಎರಡು ದಿನ ಶೂಟಿಂಗ್ ಮಾಡಿದ್ದಾರೆ. ಆದರೆ ಈ ಸಿನಿಮಾದ ಎಡಿಟಿಂಗ್ ನಲ್ಲಿ ಅವರ ಪಾತ್ರದ ಸಂಪೂರ್ಣ ಭಾಗವನ್ನು ತೆಗುದುಹಾಕಿ ಕೆಲವು ಸೆಕೆಂಡುಗಳು ಮಾತ್ರ ಹಾಕಲಾಗಿದೆ. ಇದರಿಂದ ನಟಿಗೆ ಬಹಳ ಅಸಮಾದಾನವಾಯಿತು ಎಂದು ಹೇಳಿಕೊಂಡಿದ್ದಾರೆ.