ಮದುವೆಗಾಗಿ ಮತಾಂತರವಾದ್ರೂ ತಿಂಗಳಲ್ಲೇ ವಿಚ್ಚೇದನ! ನಿರ್ದೇಶಕರಿಂದ ಗರ್ಭೀಣಿಯಾದ ನತದೃಷ್ಟ ನಟಿ!

Mandana Karimi: ಬಾಲಿವುಡ್‌ನ ಈ ಸುಂದರ ನಟಿ ತನ್ನ ಅದ್ಭುತ ನಟನಾ ಕೌಶಲ್ಯಕ್ಕಿಂತ ಹೆಚ್ಚಾಗಿ ತನ್ನ ವಿವಾದಾತ್ಮಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಈ ನಟಿ ಈಗ ಸಿನಿಮಾಗಳಿಂದ ಸಂಪೂರ್ಣವಾಗಿ ದೂರವಿದ್ದು, ಬೇರೆಯದೇ ಜೀವನ ನಡೆಸುತ್ತಿದ್ದಾರೆ.

Written by - Puttaraj K Alur | Last Updated : Apr 1, 2025, 05:43 PM IST
  • ನಟನಾ ಲೋಕಕ್ಕೆ ವಿದಾಯ ಹೇಳಿರುವ ಇರಾನಿನ ನಟಿ ಮಂದನಾ ಕರಿಮಿ
  • ಮಂದನಾ ಕರಿಮಿ 2017ರಲ್ಲಿ ಉದ್ಯಮಿ ಗೌರವ್ ಗುಪ್ತಾರನ್ನು ವಿವಾಹವಾಗಿದ್ದರು
  • ಈ ನಟಿ ತನ್ನ ಪತಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದರು
ಮದುವೆಗಾಗಿ ಮತಾಂತರವಾದ್ರೂ ತಿಂಗಳಲ್ಲೇ ವಿಚ್ಚೇದನ! ನಿರ್ದೇಶಕರಿಂದ ಗರ್ಭೀಣಿಯಾದ ನತದೃಷ್ಟ ನಟಿ!

Lock Upp Season 1: ಬಾಲಿವುಡ್ ಜಗತ್ತು ಅದ್ಭುತವಾಗಿದ್ದು, ಅನೇಕ ತಾರೆಯರು ಇಲ್ಲಿಗೆ ಬಂದು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಹಲವರು ಯಶಸ್ವಿಯಾಗುತ್ತಾರೆ, ಆದರೆ ಹಲವರು ವಿಫಲರಾಗುತ್ತಾರೆ. ಧರ್ಮದ ತಡೆಗೋಡೆಯನ್ನು ದಾಟಿ ತಮ್ಮ ಮದುವೆಯ ಕನಸನ್ನು ನನಸಾಗಿಸಿಕೊಂಡ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ಜಗತ್ತಿನಲ್ಲಿದ್ದಾರೆ. ಹೇಮಾ ಮಾಲಿನಿಯಿಂದ ಶರ್ಮಿಳಾ ಟ್ಯಾಗೋರ್‌ವರೆಗೆ, ಮದುವೆಗಾಗಿ ತಮ್ಮ ಧರ್ಮವನ್ನು ಬದಲಾಯಿಸಿದ ಅನೇಕ ನಟಿಯರು ಇದ್ದಾರೆ. ಇಂದು ನಾವು ಅಂತಹ ಒಬ್ಬ ನಾಯಕಿಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಈ ನಟಿ ಅವರ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಮದುವೆ, ವಿಚ್ಛೇದನ, ನಂತರ ಗರ್ಭಧಾರಣೆ ಮತ್ತು ಗರ್ಭಪಾತದ ಬಗ್ಗೆ ಹೆಚ್ಚು ಚರ್ಚೆಗೊಳಗಾಗಿದ್ದರು. ಹಲವು ಆರೋಪಗಳನ್ನು ಎದುರಿಸಿದ ನಂತರ ಅವರು ಉದ್ಯಮದಿಂದ ದೂರ ಸರಿದು ಬೇರೆಯದೇ ಲೋಕದಲ್ಲಿ ನೆಲೆಸಿದರು. 

Add Zee News as a Preferred Source

36 ವರ್ಷದ ಸುಂದರಿ

ನಾವು ಮಾತನಾಡುತ್ತಿರುವ ಸುಂದರಿ ಬೇರೆ ಯಾರೂ ಅಲ್ಲ, ಕಂಗನಾ ಅವರ 'ಲಾಕ್ ಅಪ್' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಮಂದನಾ ಕರಿಮಿ. ಇರಾನಿನ ನಟಿ ಮಂದನಾ ಕರಿಮಿ ಈಗ ನಟನಾ ಲೋಕಕ್ಕೆ ವಿದಾಯ ಹೇಳಿ ತನ್ನದೇ ಆದ ಲೋಕವನ್ನು ಸ್ಥಾಪಿಸಿಕೊಂಡಿದ್ದಾರೆ. ಅವರು ಮುಂಬೈ ಬಿಟ್ಟು ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆದಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದ ನಂತರ ಅವರು ಈಗ ಫ್ಯಾಷನ್ ಮತ್ತು ಸ್ಟೈಲಿಂಗ್ ಜಗತ್ತಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. 36 ವರ್ಷದ ಮಂದನಾ ಅವರ ಜೀವನವು ಏರಿಳಿತಗಳಿಂದ ತುಂಬಿದೆ. ಒಂದು ಕಾಲದಲ್ಲಿ ಬುರ್ಖಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂದನಾ, ಬಾಲಿವುಡ್‌ನ ಗ್ಲಾಮರಸ್ ನಾಯಕಿಯಾಗಿದ್ದರು. ಆದರೆ ಅವರು ಬಯಸಿದ ರೀತಿಯ ಪಾತ್ರಗಳು ಸಿಗಲಿಲ್ಲ.

ಇದನ್ನೂ ಓದಿ: ಈ ಮೂಲಾಂಕದ ಜನರ ಸಾವು ರಹಸ್ಯಮಯವಾಗಿರುತ್ತೆ… ನಟಿ ಶ್ರೀದೇವಿ ಸಾವಿಗೂ ಇದುವೇ ಕಾರಣ!

ಗಂಡನಿಂದ ವಿಚ್ಛೇದನ

ಮಂದನಾ ಕರಿಮಿ ನಟನಾ ಜಗತ್ತಿನಲ್ಲಿ ಕಡಿಮೆ ಕೆಲಸ ಮಾಡಿರಬಹುದು, ಆದರೆ ಇಂದು ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಮುಸ್ಲಿಂ ಕುಟುಂಬಕ್ಕೆ ಸೇರಿದ ಈ ನಟಿ, ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ 'ಭಾಗ್ ಜಾನಿ' ಚಿತ್ರದಿಂದ ಹೆಸರು ಮಾಡಿದರು. ರಿಯಾಲಿಟಿ ಶೋ ಮೂಲಕ ಅವರು ಪ್ರತಿ ಮನೆಯಲ್ಲೂ ಪ್ರಸಿದ್ಧಳಾದಳು. ಮಂದನಾ ಕರಿಮಿ 2017ರಲ್ಲಿ ಉದ್ಯಮಿ ಗೌರವ್ ಗುಪ್ತಾ ಅವರನ್ನು ವಿವಾಹವಾದರು. 6 ತಿಂಗಳೊಳಗೆ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಹೀಗಾಗಿ ಅವರು ವಿಚ್ಛೇದನ ಪಡೆದರು. ನಟಿ ತನ್ನ ಪತಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈ ನಟಿ ತನ್ನ ಅತ್ತೆ ಮತ್ತು ಮಾವನ ವಿರುದ್ಧವೂ ಹಲವಾರು ಗಂಭೀರ ಆರೋಪಗಳನ್ನು ಮಾಡುವ ಮೂಲಕ ಪ್ರಕರಣವನ್ನೂ ದಾಖಲಿಸಿದ್ದಳು. 

ಬಲವಂತದಿಂದ ಗರ್ಭಪಾತ!

ಮಂದನಾ ಕರಿಮಿ ಹಿಂದೂ ಪದ್ಧತಿಗಳ ಪ್ರಕಾರ ಪ್ರೇಮ ನಿಮಿತ್ತ ನಟನನ್ನು ವಿವಾಹವಾದರು. ಮದುವೆಯಾದ 7 ತಿಂಗಳ ನಂತರ ತನ್ನ ಅತ್ತೆ-ಮಾವ ತನಗೆ ತುಂಬಾ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿದ್ದಾರೆ. ಗೌರವ್ ಕೂಡ ತನ್ನೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಂಡಿಲ್ಲವೆಂದು ನಟಿ ಬಹಿರಂಗಪಡಿಸಿದ್ದಳು.. ಪತಿ ಗೌರವ್ ತನ್ನ ಧರ್ಮವನ್ನು ಬದಲಾಯಿಸುವಂತೆ ಒತ್ತಡ ಹೇರಿದ್ದರು ಅಂತಾ ನಟಿ ಆರೋಪಿಸಿದ್ದರು. ನಟನೆಯನ್ನು ಬಿಡುವಂತೆ ಅವರ ಮೇಲೆ ಒತ್ತಡವೂ ಬಂದಿತ್ತಂತೆ. ಪತಿಯಿಂದ ವಿಚ್ಛೇದನ ಪಡೆದಾಗ ಮಂದನಾ ದೊಡ್ಡ ಮೊತ್ತದ ಜೀವನಾಂಶ ಕೇಳಿದ್ದರು. ಪತಿಯಿಂದ ಬೇರ್ಪಟ್ಟ ನಂತರ ಈ ನಟಿ ಒಬ್ಬ ನಿರ್ದೇಶಕನನ್ನು ಪ್ರೀತಿಸುತ್ತಿದ್ದರಂತೆ. ಈ ಸಂಬಂಧದಲ್ಲಿ ಆಕೆ ಗರ್ಭಿಣಿಯೂ ಆಗಿದ್ದಳು. ತನ್ನ ಮಗುವಿನೊಂದಿಗೆ ಇನ್ಮುಂದೆ ನಾನು ಹಾಯಾಗಿ ಇರಬಹುದೆಂದು ಕನಸು ಕಾಣುತ್ತಿದ್ದ ನಟಿಗೆ ಶಾಕ್‌ ಉಂಟಾಗಿತ್ತು. ಯಾಕೆಂದರೆ ಮಂದನಾ ಗರ್ಭಿಣಿ ಅನ್ನೋ ವಿಷಯ ತಿಳಿದ ಆ ನಿರ್ದೇಶಕ ಆಕೆಯ ಜೊತೆಗೆ ಸಂಬಂಧ ಕಡಿದುಕೊಂಡಿದ್ದ. ಅಲ್ಲದೇ ಗರ್ಭಪಾತ ಮಾಡಿಸುವಂತೆ ಒತ್ತಡ ಹೇರಿದ್ದರಂತೆ. ಬೇರೆ ದಾರಿ ಇಲ್ಲದ ವಂದನಾ ಗರ್ಭಪಾತಕ್ಕೆ ಒಳಗಾಗಬೇಕಾಯಿತು. ಈ ಎಲ್ಲಾ ವಿಚಾರಗಳನ್ನ ಸ್ವತಃ ನಟಿಯೇ ʼಲಾಕಪ್‌ʼ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಈಗ ಈ ನಟಿ ಇದೆಲ್ಲದರಿಂದಲೂ ದೂರವಾಗಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಟ ಯಶ್‌ ಕೆಳಗೆ ಬೀಳಲಿ ಅನ್ನೋದನ್ನೇ ಅವರು ಕಾಯುತ್ತಿರುವುದು: ನಟಿ ಮನ್ವಿತಾ ಕಾಮತ್‌ ಶಾಕಿಂಗ್‌ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News