ಬೆಂಗಳೂರು : ರೈಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಯುವರಾಜ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ 7 ವರ್ಷಗಳಿಂದ ಸಿನಿ ರಂಗದಲ್ಲಿರುವ ಮಂಜು ಅಥರ್ವ(Manju Atharva), ತಮಿಳಿನ ಕದಿರನ್‌ ಜತೆ ಕೆಲಸ ಮಾಡಿದ್ದಾರೆ. ಅಲ್ಲದೆ ಕನ್ನಡದ ಮಾಸ್ಟರ್‌ಪೀಸ್‌, 'ಮಫ್ತಿ' ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿ ಕೆಲಸ ಮಾಡಿದ್ದಾರೆ. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.


ಇದನ್ನೂ ಓದಿ : ಸಂಕ್ರಾಂತಿಗೆ ಶೋಕ್ದಾರ್ ಹೊಸ ಸಿನಿಮಾ ಘೋಷಣೆ...ವಾಮನ್ ಅವತಾರದಲ್ಲಿ ಬಜಾರ್ ಹುಡ್ಗ ಧನ್ವೀರ್


ಮೊದಲ‌ ಹಂತದಲ್ಲಿ 'ರೈಡರ್' ಹೊಸ ಸಿನಿಮಾ!


ನಿಖಿಲ್(Nikhil Kumaraswamy) ಹಾಗೂ ಮಂಜು ಅಥರ್ವ ಕಾಂಬೋದಲ್ಲಿ ಮೂಡಿ ಬತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಅವರ ಭಾಗದ ಶೂಟಿಂಗ್ ನಡೆಯುತ್ತಿದ್ದ, ಈ ಬಗ್ಗೆ ಚಿತ್ರತಂಡ ಅಪ್ ಡೇಟ್ ನೀಡಿದೆ.‌ ಪಕ್ಕ ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾವಾಗಿರುವ ಈ ಚಿತ್ರಕ್ಕೆ ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬರ್ತಿರುವ ಈ ಸಿನಿಮಾಗೆ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.


[[{"fid":"227048","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಅಜನೀಶ್ ಲೋಕನಾಥ್‌(Ajaneesh Loknath) ಸಂಗೀತ ನೀಡುತ್ತಿದ್ದು, ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ನೀಡಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.