ಕೊರೋನಾ ಬಿಕ್ಕಟ್ಟಿನ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸಾಹೋ' ನಿರ್ದೇಶಕ

ಸುಜೀತ್ ಅವರ ವಿವಾಹದ ಹಲವು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  

Updated: Aug 4, 2020 , 12:10 PM IST
ಕೊರೋನಾ ಬಿಕ್ಕಟ್ಟಿನ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸಾಹೋ' ನಿರ್ದೇಶಕ
Image courtesy: DNA

ನವದೆಹಲಿ: 'ಸಾಹೋ' ಚಿತ್ರದ ನಿರ್ದೇಶಕ ಸುಜೀತ್ ಅವರು ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ನಿಶ್ಚಿತ ವರ ಪ್ರವಾಲಿಕಾ ಅವರೊಂದಿಗೆ ಸರಳ ಸಮಾರಂಭದಲ್ಲಿ ವಿವಾಹವಾದರು. ಸುಜಿತ್ ಅವರ ವಿವಾಹದ ಹಲವು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚಿತ್ರಗಳಲ್ಲಿ ಚಲನಚಿತ್ರ ನಿರ್ಮಾಪಕ ಸಾಂಪ್ರದಾಯಿಕ ಧೋತಿ ಕುರ್ತಾ ಧರಿಸಿದ್ದು ಪ್ರವಲಿಕಾ ಗುಲಾಬಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಈ ಜೋಡಿ ಕಳೆದ ತಿಂಗಳು ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈ ಸಂದರ್ಭದಲ್ಲಿ ಅಭಿಮಾನಿಗಳು ಹೊಸದಾಗಿ ಮದುವೆಯಾದ ದಂಪತಿಯನ್ನು ಅಭಿನಂದಿಸಿದರು.

ಪ್ರವಾಲಿಕಾ ವೃತ್ತಿಯಲ್ಲಿ ದಂತವೈದ್ಯರಾಗಿದ್ದು, ಸುಜಿತ್ ಅವರೊಂದಿಗೆ ಹಲವು ವರ್ಷಗಳಿಂದ ಸ್ನೇಹವನ್ನು ಹೊಂದಿದ್ದಾರೆ. ಸುಜಿತ್ ಅವರ ಕೊನೆಯ ಚಿತ್ರ 'ಸಾಹೋ', ಇದರಲ್ಲಿ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿದ್ದರು. ಈಗ ಇಬ್ಬರ ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದು ಈ ಫೋಟೋಗಳನ್ನು ಒಮ್ಮೆ ನೋಡಿ...

 
 
 
 

 
 
 
 
 
 
 
 
 

Sujeeth + Pravallika #wedding #djpixels Pc - @karteeksivagouni

A post shared by Dheeraj Konduru - Photographer (@djpixels) on

 
 
 
 

 
 
 
 
 
 
 
 
 

Sujeeth + Pravallika #wedding #djpixels

A post shared by Dheeraj Konduru - Photographer (@djpixels) on

 
 
 
 

 
 
 
 
 
 
 
 
 

Sujeeth + Pravallika #wedding #djpixels

A post shared by Dheeraj Konduru - Photographer (@djpixels) on

ಈ ಹಿಂದೆ ಸಾಹೋ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ 'ಸ್ಕ್ರಿಪ್ಟ್ ಮುಗಿಸಲು ನನಗೆ ಒಂದು ಅಥವಾ ಎರಡು ತಿಂಗಳು ಬೇಕಾಯಿತು, ಆದರೆ ಕ್ರಿಯೆಯನ್ನು ಸರಿಯಾಗಿ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದಿದ್ದರು.