ಅಮೇರಿಕಾದಲ್ಲೂ ಮಾಯಾ ಬಜಾರ್ 2016 ಹವಾ...!

ಅಮೇರಿಕಾ ಮೂಲದ ನೃತ್ಯ ಸಮೂಹ ಮಾಯಾಬಜಾರ್ 2016 ರ ಶೀರ್ಷಿಕೆ ಗೀತೆಗೆ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Last Updated : Mar 1, 2020, 04:24 PM IST
ಅಮೇರಿಕಾದಲ್ಲೂ ಮಾಯಾ ಬಜಾರ್ 2016 ಹವಾ...!  title=
Photo courtesy: Twitter(screen grab)

ಬೆಂಗಳೂರು: ಅಮೇರಿಕಾ ಮೂಲದ ನೃತ್ಯ ಸಮೂಹ ಮಾಯಾಬಜಾರ್ 2016 ರ ಶೀರ್ಷಿಕೆ ಗೀತೆಗೆ ಕುಣಿದು ಕುಪ್ಪಳಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮಾಯಾಬಜಾರ್ 2016 ಈಗಾಗಲೇ ಚಲನಚಿತ್ರ ಪ್ರೇಮಿಗಳಿಂದ ಸಾಕಷ್ಟು ಪ್ರಶಂಸೆಗಳಿಸಿದೆ.ಇನ್ನೊಂದೆಡೆಗೆ ಪುನೀತ್ ಇತ್ತೀಚೆಗೆ ಮಿನ್ನಿಯಾಪೋಲಿಸ್ ಗ್ರೂವಿಂಗ್ ನಿಂದ ಚಿತ್ರದ ಶೀರ್ಷಿಕೆ ಹಾಡಿಗೆ ನೃತ್ಯ ಮಾಡಿರುವ ತಂಡದ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈಗ ಮೋಜಿನ ವಿಡಿಯೋ ವೈರಲ್ ಆಗಿದ್ದು, ಹಾಡಿನಲ್ಲಿ ವಿಭಿನ್ನ ನೃತ್ಯದ ಚಲನೆಯನ್ನು ತೋರಿಸುತ್ತದೆ, ಇನ್ನೊಂದೆಡೆಗೆ ಮಾರ್ಚ್ 6ರಂದು ಮಾಯಾ ಬಜಾರ್ 2016 ಚಿತ್ರ ಯುಎಸ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಪುನೀತ್ ರಾಜಕುಮಾರ್ ಟ್ವೀಟ್ ಮಾಡಿದ್ದಾರೆ.

 

Trending News