ಅಂದು ಪೆಟ್ರೋಲ್ ಪಂಪ್‌ನಲ್ಲಿ ಕೆಲಸ.. ಇಂದು ಬಾಲಿವುಡ್‌ ಪ್ರಸಿದ್ಧ ನಟಿ! ತನಗಿಂತ 14 ವರ್ಷ ಹಿರಿಯ ನಟನೊಂದಿಗಿನ ಸಂಬಂಧ!

Actress Life Story: ಬಾಲಿವುಡ್‌ನ ಈ ಪ್ರಸಿದ್ಧ ನಟಿ ಅಂದು 100 ರೂ.ಗಾಗಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಸ್ಟಾರ್‌ ಸ್ಥಾನ ಮಾನ ಪಡೆದಿದ್ದಾರೆ. 

Written by - Chetana Devarmani | Last Updated : Mar 2, 2025, 07:31 AM IST
  • ಬಾಲಿವುಡ್‌ನ ಪ್ರಸಿದ್ಧ ನಟಿ ಈಕೆ
  • ಅಂದು ಪೆಟ್ರೋಲ್ ಪಂಪ್‌ನಲ್ಲಿ ಕೆಲಸ
  • ಇಂದು ಸ್ಟಾರ್‌ ಸ್ಥಾನ ಮಾನ ಪಡೆದ ನಟಿ
ಅಂದು ಪೆಟ್ರೋಲ್ ಪಂಪ್‌ನಲ್ಲಿ ಕೆಲಸ.. ಇಂದು ಬಾಲಿವುಡ್‌ ಪ್ರಸಿದ್ಧ ನಟಿ! ತನಗಿಂತ 14 ವರ್ಷ ಹಿರಿಯ ನಟನೊಂದಿಗಿನ ಸಂಬಂಧ!

Actress Life Story: 2000ನೇ ಇಸವಿಯಲ್ಲಿ ಮಧುರ್ ಭಂಡಾರ್ಕರ್ ಅವರು ಫ್ಯಾಷನ್ ಚಿತ್ರ ಬಿಡುಗಡೆ ಆಯಿತು. ಅದರಲ್ಲಿ ಮೂವರು ನಟಿಯರು ನಟಿಸಿದ್ದರು. ಅದರಲ್ಲಿ ಇಬ್ಬರು ಆ ಕಾಲದಲ್ಲಿ ದೊಡ್ಡ ಸ್ಟಾರ್‌ ನಟಿಯರಾಗಿದ್ದರು. ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಣಾವತ್‌ ನೇಮ್‌ ಫೇಮ್‌ ಗಳಿಸಿದ್ದ ನಟಿಯರಾಗಿದ್ದರು. ಇವರ ಜೊತೆ ಮುಗ್ಧಾ ಗೋಡ್ಸೆ ಎಂಬ ಮತ್ತೊಬ್ಬ ನಟಿ ಕೂಡ ಈ ಚಿತ್ರದಲ್ಲಿ ಸೈಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದಾದ ನಂತರ ನಟಿ ಮುಗ್ಧಾ ಗೋಡ್ಸೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ದಕ್ಷಿಣ ಚಿತ್ರಗಳಲ್ಲಿಯೂ ಕೆಲಸ ಮಾಡಿದರು. 

Add Zee News as a Preferred Source

ಮಿಸ್ ಇಂಡಿಯಾದಲ್ಲಿ ಸೆಮಿಫೈನಲಿಸ್ಟ್: 

ಮುಗ್ಧಾ ಗೋಡ್ಸೆ ಒಬ್ಬ ನಟಿ ಮಾತ್ರವಲ್ಲದೆ ಪ್ರಸಿದ್ಧ ಮಾಡೆಲ್ ಕೂಡ ಆಗಿದ್ದಾರೆ. ಅವರು 2004 ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸೆಮಿಫೈನಲಿಸ್ಟ್ ಆಗಿದ್ದರು. ಇದರ ನಂತರ ಅವರು 2008 ರಲ್ಲಿ ಫ್ಯಾಷನ್ ಚಿತ್ರದೊಂದಿಗೆ ಸಿನಿಮಾರಂಗಕ್ಕೆ ಬಂದರು. ಮರಾಠಿ ರಿಯಾಲಿಟಿ ಶೋನ ಜಡ್ಜ್‌ ಕೂಡ ಆಗಿದ್ದಾರೆ. ಇದಲ್ಲದೆ, ಅವರು ತಮಿಳು ಚಿತ್ರ ಥನಿ ಒರುವನ್‌ನಲ್ಲಿಯೂ ಕೆಲಸ ಮಾಡಿದ್ದಾರೆ.

ಮಾಡೆಲಿಂಗ್‌ನಿಂದ ನಟನಾ ಜಗತ್ತಿಗೆ : 

ಮುಗ್ಧಾ ಆರಂಭದಲ್ಲಿ ಅನೇಕ ಜಾಹೀರಾತುಗಳಲ್ಲಿ ನಟಿಸಿದರು. ಐದು ವರ್ಷಗಳ ಕಾಲ ಅವರು ಅನೇಕ ಮ್ಯುಸಿಕ್‌ ವಿಡಿಯೋದಲ್ಲಿ ನಟಿಸಿದರು. ಇದಾದ ನಂತರ ಮಾಡೆಲಿಂಗ್‌ನಿಂದ ನಟನಾ ಜಗತ್ತಿಗೆ ಪ್ರವೇಶಿಸಿದರು. ನಟಿ ಮುಗ್ಧಾ ಗೋಡ್ಸೆ ತಮ್ಮ ಚೊಚ್ಚಲ ಚಿತ್ರ 'ಫ್ಯಾಷನ್' ನಲ್ಲಿ ತಮ್ಮ ನಟನೆಗೆ ಸಾಕಷ್ಟು ಪ್ರಶಂಸೆ ಪಡೆದರು. ಇದಾದ ನಂತರ ಅವರು ಜೈಲ್, ಹೀರೋಯಿನ್, ಆಲ್ ದಿ ಬೆಸ್ಟ್, ಬೆಜುಬಾನ್ ಇಷ್ಕ್ ಮತ್ತು ಹೆಲ್ಪ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು.

ತನಗಿಂತ 14 ವರ್ಷ ಹಿರಿಯ ನಟನೊಂದಿಗಿನ ಸಂಬಂಧ

ರಾಹುಲ್ ದೇವ್ ಮುಗ್ಧಾ ಗೋಡ್ಸೆಯ ಜೀವನದಲ್ಲಿ ಪ್ರವೇಶಿಸಿದರು. ರಾಹುಲ್ ಅನೇಕ ದಕ್ಷಿಣ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಖಳನಾಯಕನಾಗಿಯೂ ಖ್ಯಾತಿಯನ್ನು ಗಳಿಸಿದ್ದಾರೆ. ಇಬ್ಬರೂ ಬಹಳ ಸಮಯದಿಂದ ಲಿವ್-ಇನ್ ಸಂಬಂಧದಲ್ಲಿದ್ದರೆಂಬ ವದಂತಿ ಇತ್ತು. ಈ ಸಂಬಂಧ ಸುಮಾರು 12 ವರ್ಷಗಳಿಂದ ನಡೆಯುತ್ತಿದೆ ಎಂದು ಸಿನಿರಂಗದಲ್ಲಿ ಗಾಸಿಪ್‌ ಇದೆ. ಆದರೆ ಮುಗ್ಧಾ ಗೋಡ್ಸೆ ಜೊತೆ ಅವನಿಗೆ ಮದುವೆಯಾಗಲು ಇಷ್ಟವಿಲ್ಲ. ಇಬ್ಬರು ವ್ಯಕ್ತಿಗಳು ಪರಸ್ಪರ ಸಂತೋಷವಾಗಿದ್ದರೆ ಮದುವೆಯ ಅಗತ್ಯವಿಲ್ಲ ಮತ್ತು ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ರಾಹುಲ್‌ ಹೇಳುತ್ತಾರೆ. ಈ ದಂಪತಿಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ:ಬಿಗ್ ಬಾಸ್ ಮುಂದಿನ ಸೀಸನ್‌ ಹೋಸ್ಟ್ ಈ ಯಂಗ್ ಹೀರೋ.. ರಶ್ಮಿಕಾ ಮಂದಣ್ಣ ಜೊತೆಗಿದೆ ನಂಟು.!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News