ಜೈಲರ್ 2 ತಂಡ ಸೇರಿದ ಸ್ಯಾಂಡಲ್‌ವುಡ್‌ ಸುಂದರಿ ಮೇಘನಾ ಸರ್ಜಾ! ಮತ್ತಷ್ಟು ಕೂತುಹಲ ಕೆರಳಿಸಿದ ನೆಲ್ಸನ್ ಸಿನಿಮಾ

Jailer 2 latest updates : ಸ್ಯಾಂಡಲ್‌ವುಡ್‌ ಸುಂದರಿ ಮೇಘನಾ ರಾಜ್, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ಮ್ಯಾಟರ್‌ ಇಲ್ಲಿದೆ..

Written by - Krishna N K | Last Updated : Nov 12, 2025, 04:10 PM IST
    • ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ 'ಜೈಲರ್ 2' ಒಂದು
    • ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರತಂಡವನ್ನು ಸೇರಿಕೊಂಡ ಮೇಘನಾ ರಾಜ್‌
    • ಮೇಘನಾ ಕೊನೆಯ ಬಾರಿಗೆ 2012 ರಲ್ಲಿ ತೆರೆಕಂಡ 'ನಂದ ನಂದಿತ' ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಜೈಲರ್ 2 ತಂಡ ಸೇರಿದ ಸ್ಯಾಂಡಲ್‌ವುಡ್‌ ಸುಂದರಿ ಮೇಘನಾ ಸರ್ಜಾ! ಮತ್ತಷ್ಟು ಕೂತುಹಲ ಕೆರಳಿಸಿದ ನೆಲ್ಸನ್ ಸಿನಿಮಾ

Meghana Raj Sarja in Jailer 2 : 2025 ರ ಬ್ಲಾಕ್‌ಬಸ್ಟರ್ ಹಿಟ್‌ "ಜೈಲರ್‌" ಮುಂದುವರಿದ ಭಾಗ 'ಜೈಲರ್ 2'. ಈ ಸಿನಿಮಾದಲ್ಲಿ ಚಂದನವನದ ತಾರೆ ಮೇಘನಾ ರಾಜ್ ಸರ್ಜಾ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ಈ ಚಿತ್ರದ ಮೂಲಕ ನಟಿ ತಮಿಳು ಚಿತ್ರರಂಗಕ್ಕೆ ಮರಳಿದ್ದಾರೆ. 

Add Zee News as a Preferred Source

ನೆಲ್ಸನ್ ನಿರ್ದೇಶನದ ಮತ್ತು ರಜನಿಕಾಂತ್ ನಟಿಸಿದ ಈ ಚಿತ್ರವು ಈಗಾಗಲೇ ಭಾರತೀಯ ಚಲನಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿಸಿ, ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಮೇಘನಾ ಕೊನೆಯ ಬಾರಿಗೆ 2012 ರಲ್ಲಿ ತೆರೆಕೆಂಡ 'ನಂದ ನಂದಿತ' ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದು. ಅಂದಿನಿಂದ ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು..

ಇದನ್ನೂ ಓದಿ:ಬಿಗ್‌ ಬಾಸ್‌ ಮನೆಯಲ್ಲಿ ಭಾರಿ ಅನಾಹುತ! ಟಾಸ್ಕ್‌ ವೇಳೆ ಗಂಭೀರವಾಗಿ ಗಾಯಗೊಂಡ ಟಾಪ್‌ 3 ಸ್ಪರ್ಧಿ, ವಿಡಿಯೋ ವೈರಲ್‌

ವರದಿಗಳ ಪ್ರಕಾರ, ನಟಿ ಪ್ರಸ್ತುತ 'ಜೈಲರ್ 2' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಆದರೆ, ಅವರ ಪಾತ್ರದ ಬಗ್ಗೆ ನಿಖರವಾದ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಮೇಘನಾ ಅವರ ಪಾತ್ರವನ್ನು ಗೌಪ್ಯವಾಗಿಡಲಾಗಿದ್ದು, ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ..

ಅಂದಹಾಗೆ 'ಜೈಲರ್ 2' ಚಿತ್ರವನ್ನು ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದಾರೆ. ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ಶಿವ ರಾಜ್‌ಕುಮಾರ್, ಮೋಹನ್ ಲಾಲ್, ಎಸ್‌ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಮತ್ತು ಸಂತಾನಂ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:ಚಿರಂಜೀವಿ ಮನೆ ಮಗಳ ಮೈ ಮುಟ್ಟಿದ ಹಿರಿಯ ನಿರ್ದೇಶಕ..! ಅಸಭ್ಯ ವರ್ತನೆ ವಿಡಿಯೋ ವೈರಲ್

'ಜೈಲರ್ 2' ಚಿತ್ರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಭಾರತೀಯ ಸಿನಿರಂಗದ ದಿಗ್ಗಜ ನಟರು ಈ ಚಿತ್ರದಲ್ಲಿದ್ದಾರೆ. ಈ ಪೈಕಿ ಮೇಘನಾ ರಾಜ್ ಸರ್ಜಾ ಅವರ ಎಂಟ್ರಿ ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ. ಈ ಸಿನಿಮಾ ಮೂಲಕ ಸ್ಟ್ರಾಂಗ್‌ ಕಮ್‌ ಬ್ಯಾಕ್‌ ಮಾಡಲಿ ಎನ್ನುವುದೇ ಅವರ ಆಶಯ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News