)
Ksenia Alexandrova: ನಾಲ್ಕು ತಿಂಗಳ ಹಿಂದೆ ವಿವಾಹವಾದ ಮಾಜಿ ಮಿಸ್ ಯೂನಿವರ್ಸ್ ಸ್ಪರ್ಧಿ ಮತ್ತು ರೂಪದರ್ಶಿ ಕ್ಸೆನಿಯಾ ಅಲೆಕ್ಸಾಂಡ್ರೊವಾ ಕಾರು ಅಪಘಾತದಲ್ಲಿ ನಿಧನರಾದರು.
ಹೌದು ಜುಲೈ 5 ರಂದು, ರಷ್ಯಾದ ಟ್ವೆರ್ ಒಬ್ಲಾಸ್ಟ್ನಲ್ಲಿ ತನ್ನ ಪತಿಯೊಂದಿಗೆ ಕಾರು ಚಲಾಯಿಸುತ್ತಿದ್ದಾಗ, ಒಂದು ದೊಡ್ಡ ಎಲ್ಕ್ ಇದ್ದಕ್ಕಿದ್ದಂತೆ ರಸ್ತೆಗೆ ಬಂದು ಪೋರ್ಷೆ ಪನಾಮೆರಾ ಕಾರಿನ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ ಕ್ಸೆನಿಯಾ ಅಲೆಕ್ಸಾಂಡ್ರೊವಾ ಅವರಿಗೆಡಿಕ್ಕಿ ಹೊಡೆದಿದೆ.. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಅವರು ಕೋಮಾ ಸ್ಥಿತಿಗೆ ಹೋಗಿ ಕಳೆದ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.. ಆದರೆ ಅವಳ ಪತಿ ಬದುಕುಳಿದರು.
"ಜಿಂಕೆ ಇದ್ದಕ್ಕಿದ್ದಂತೆ ವೇಗವಾಗಿ ಓಡಿ ಬಂದು ಒಂದೇ ಸೆಕೆಂಡ್ ಒಳಗೆ, ಅದು ಕಾರಿಗೆ ಡಿಕ್ಕಿ ಹೊಡೆದಿದೆ. ನನಗೆ ಏನೂ ಮಾಡಲು ಸಮಯವಿರಲಿಲ್ಲ. ಅದು ಕ್ಸೆನಿಯಾಳ ತಲೆಗೆ ನೇರವಾಗಿ ಬಡಿದು, ಅವಳಿಗೆ ಆಘಾತವನ್ನುಂಟು ಮಾಡಿತು ಮತ್ತು ಅವಳು ಪ್ರಜ್ಞಾಹೀನಳಾಗಿದ್ದಳು" ಎಂದು ಆಕೆಯ ಪತಿ ರಷ್ಯಾದ ಮಾಧ್ಯಮಗಳಿಗೆ ತಿಳಿಸಿದರು.
ಮದುವೆಯಾದ ನಾಲ್ಕು ತಿಂಗಳ ದುರಂತ:
ಕ್ಸೆನಿಯಾ ಮಾರ್ಚ್ 22, 2025 ರಂದು ವಿವಾಹವಾದರು. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡ ಅವರು, "ಆ ದಿನದ ಸಂತೋಷ, ಪ್ರೀತಿ ಮತ್ತು ಭಾವನೆಗಳನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ" ಎಂದು ಬರೆದಿದ್ದಾರೆ. ಆದರೆ ಕೇವಲ ನಾಲ್ಕು ತಿಂಗಳ ನಂತರ ಈ ದುರಂತ ಅಪಘಾತ ಸಂಭವಿಸಿದೆ. ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿಗೆ ಶೋಕ ವ್ಯಕ್ತಪಡಿಸುತ್ತಿದ್ದಾರೆ. "ಅವರು ಯಾವಾಗಲೂ ಪ್ರಕಾಶಮಾನವಾದ, ಪ್ರತಿಭಾನ್ವಿತ ಮತ್ತು ಅದ್ಭುತ ವ್ಯಕ್ತಿಯಾಗಿದ್ದರು" ಎಂದು ಅವರ ಮಾಡೆಲಿಂಗ್ ಸಂಸ್ಥೆ ಮಾಡಸ್ ವಿವೆಂಡಿಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರ ಸಾಧನೆಗಳು:
ಕ್ಸೆನಿಯಾ ಲಾಸ್ ವೇಗಾಸ್ನಲ್ಲಿ ನಡೆದ 2017 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರಷ್ಯಾವನ್ನು ಪ್ರತಿನಿಧಿಸಿದರು. ಆ ಸ್ಪರ್ಧೆಯಲ್ಲಿ ಅವರು ವೈಸ್ ಮಿಸ್ ರಷ್ಯಾ ಪ್ರಶಸ್ತಿಯನ್ನು ಸಹ ಗೆದ್ದರು.