ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ "MIXING ಪ್ರೀತಿ" ಚಿತ್ರ

MIXING Preethi Movie: ಎನ್ ಪಿ ಇಸ್ಮಾಯಿಲ್ ನಿರ್ದೇಶನದ ಪ್ರೇಮ ಕಥಾನಕದಲ್ಲಿ ಸಂಹಿತಾ ವಿನ್ಯಾ, ಪಾವನ ಸೇರಿದಂತೆ ನಾಲ್ವರು ನಾಯಕಿಯರು. ಸಿಂಡೊ ಜೇಕಬ್ ನಾಯಕ.

Written by - YASHODHA POOJARI | Last Updated : Apr 3, 2025, 11:15 AM IST
  • "MIXING ಪ್ರೀತಿ" ಚಿತ್ರದ ಟ್ರೇಲರ್
  • "MIXING ಪ್ರೀತಿ" ಹಾಡುಗಳಿಗೆ ಮನಸೋತ ಸಿನಿಪ್ರಿಯರು
  • ಈ ಚಿತ್ರದ ನಾಯಕನಾಗಿ ಸಿಂಡೊ ಜೇಕಬ್
ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ "MIXING ಪ್ರೀತಿ" ಚಿತ್ರ

ಫ್ರೆಂಡ್ಸ್ ಪಿಕ್ಚರ್ಸ್ ಲಾಂಛನದಲ್ಲಿ ಎನ್ ಪಿ ಇಸ್ಮಾಯಿಲ್ ಅವರು ನರ್ಮಿಸಿ, ನಿರ್ದೇಶಿಸಿರುವ,  ಪೊಲ್ಲಾಚಿ ಮಹಾಲಿಂಗಂ ಮತ್ತು ಕಣ್ಣನ್ ಅವರ ಸಹ ನಿರ್ಮಾಣವಿರುವ "MIXING ಪ್ರೀತಿ" ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ, ಸಿರಿ ಮ್ಯಾಸಿಕ್ ನ ಸುರೇಶ್ ಚಿಕ್ಕಣ್ಣ,‌ ಡಿವೈಎಸ್ಪಿ ರಾಜೇಶ್, ನಿರ್ಮಾಪಕ - ನಿರ್ದೇಶಕ ಡೇವಿಡ್ ಮುಂತಾದ ಗಣ್ಯರು ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಅನ್ನು ಅನಾವರಣ ಮಾಡಿದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು. ಪ್ರೇಮ ಪ್ರಧಾನ ಈ ಚಿತ್ರದ ನಾಯಕನಾಗಿ ಸಿಂಡೊ ಜೇಕಬ್ ನಟಿಸಿದ್ದು, ನಾಯಕಿಯರಾಗಿ ಸಂಹಿತಾ ವಿನ್ಯ, ಪಾವನ, ದಿವ್ಯ ಹಾಗೂ ಪ್ರಿಯಾಂಕ ಅಭಿನಯಿಸಿದ್ದಾರೆ.

Add Zee News as a Preferred Source

ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ನಿರ್ದೇಶಕರು ಟ್ರೇಲರ್ ನಲ್ಲಿ ಕಥೆಯ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿಲ್ಲ. ಹಾಡುಗಳು ಚೆನ್ನಾಗಿದೆ. ಪಕ್ಕದ ರಾಜ್ಯಗಳ ನಿರ್ಮಾಪಕರು ಸೇರಿ ಕನ್ನಡ ಚಿತ್ರ ನಿರ್ಮಿಸಿರುವುದು ಖುಷಿಯಾಗಿದೆ ಎಂದರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ.

ಇದನ್ನೂ ಓದಿ: RCB vs GT: ನಿರಾಸೆ ಮೂಡಿಸಿದ ಕೊಹ್ಲಿ, ಗುಜರಾತ್‌ಗೆ 170 ರನ್‌ಗಳ ಟಾರ್ಗೆಟ್‌ ನೀಡಿದ ಆರ್‌ಸಿಬಿ!!

 ಹಾಡುಗಳು ಹಾಗೂ ಟ್ರೇಲರ್ ಮೂಲಕ ಚಿತ್ರ ಗಮನ‌ ಸೆಳೆಯುತ್ತಿದೆ. ಹಾಡುಗಳು ನಮ್ಮ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ ಎಂದು ಸುರೇಶ್ ಚಿಕ್ಕಣ್ಣ ತಿಳಿಸಿದರು. ಡಿವೈಎಸ್ಪಿ ರಾಜೇಶ್ ಹಾಗೂ ನಿರ್ದೇಶಕ ಡೇವಿಡ್ ಅವರು ಚಿತ್ರಕ್ಕೆ ಶುಭ ಕೋರಿದರು. 

 ನಿರ್ಮಾಪಕ ಹಾಗೂ ನಿರ್ದೇಶಕ ಎನ್ ಪಿ ಇಸ್ಮಾಯಿಲ್ ಅವರು ಮಾತನಾಡಿ "MIXING ಪ್ರೀತಿ" ಲವ್ ಜಾನರ್ ನ‌ ಚಿತ್ರ.  ಹಾಗಾಗಿ ಚಿತ್ರಕ್ಕೆ 100% ಲವ್ ಎಂಬ ಅಡಿಬರಹವಿದೆ. ಲವ್ ಜಾನರ್ ನ ಚಿತ್ರವಾದರೂ ಈ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು.   

ಪ್ರೀತಿಯ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದೇನೆ ಎಂದು ನಾಯಕ ಸಿಂಡೊ ತಿಳಿಸಿದರು.    

ನಿರ್ದೇಶಕ ಇಸ್ಮಾಯಿಲ್ ಅವರ ಕನ್ನಡ ಪ್ರೀತಿಗೆ ಧನ್ಯವಾದ ತಿಳಿಸಿದ ಕನ್ನಡದ ನಾಯಕಿಯರಾದ ಸಂಹಿತ ವಿನ್ಯಾ, ಪಾವನ, ದಿವ್ಯ ಹಾಗೂ ಪ್ರಿಯಾಂಕ ನಿರ್ದೇಶಕರಿಗೆ ವಿಶೇಷ ಉಡುಗೊರೆ ನೀಡಿದರು ಹಾಗೂ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು. 

ಇದನ್ನೂ ಓದಿ: ನನಗೆ ಆಗ 17 ವರ್ಷ ವಯಸ್ಸು.. ಆತ ಹೇಳಿದಂತೆ ಮಾಡಿದೆ, ಅಪ್ಪ ನೋಡಿ ಬೇಸರವಾಗಿದ್ರು: ನಟಿ ಅಮಲಾ ಪೌಲ್

ಸಂಗೀತ ನಿರ್ದೇಶಕರಾದ ರಾಜೇಶ್ ಮೋಹನ್ ಮತ್ತು ಗೋಣೇಶ್ವರನ್, ಗೀತರಚನೆಕಾರ ಹಾಗೂ ಗಾಯಕ ಸಚಿನ್, ಛಾಯಾಗ್ರಾಹಕ ಸಾದಿಕ್ ಕಬೀರ್, ನೃತ್ಯ ನಿರ್ದೇಶಕಿ ಡಯಾನ‌ ಹಾಗೂ ಕಾರ್ಯಕಾರಿ ನಿರ್ಮಾಪಕ - ವಿತರಕ ಮರಿಸ್ವಾಮಿ "MIXING ಪ್ರೀತಿ" ಚಿತ್ರದ ಕುರಿತು ಮಾತನಾಡಿದರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Trending News