ಮುಗಿಲ ಮಲ್ಲಿಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

Mugila Mallige: ನಾಲ್ಕು ದಶಕಗಳ ಹಿಂದೆ ತೆರೆಕಂಡ ಸೂಪರ್ ಹಿಟ್ ಚಿತ್ರ ಮುಗಿಲ ಮಲ್ಲಿಗೆ. ಇದೀಗ ಅದೇ ಶೀರ್ಷಿಕೆಯಡಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ‌. 

Written by - Chetana Devarmani | Last Updated : Dec 10, 2024, 06:08 PM IST
  • ಮುಗಿಲ ಮಲ್ಲಿಗೆ ಸಿನಿಮಾ
  • ಮೊದಲ ಹಂತದ ಚಿತ್ರೀಕರಣ
  • ತೆರೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದೆ
ಮುಗಿಲ ಮಲ್ಲಿಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ title=
Mugila Mallige

Mugila Mallige: ನಾಲ್ಕು ದಶಕಗಳ ಹಿಂದೆ ತೆರೆಕಂಡ ಸೂಪರ್ ಹಿಟ್ ಚಿತ್ರ ಮುಗಿಲ ಮಲ್ಲಿಗೆ. ಇದೀಗ ಅದೇ ಶೀರ್ಷಿಕೆಯಡಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ‌.  ಎ.ಎನ್ ಆರ್ ಪಿಕ್ಚರ್ಸ್ ಬ್ಯಾನರ್  ಅಡಿಯಲ್ಲಿ ನಾಗರಾಜ್ ರೆಡ್ಡಿ ಅವರು ಈ ಚಿತ್ರವನ್ನು  ನಿರ್ಮಿಸುತ್ತಿದ್ದು, ಈಗಾಗಲೇ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿಂದೆ ತೆಲುಗಿನಲ್ಲಿ ರುದ್ರಾಕ್ಷಪುರಂ ಹಾಗು ಪ್ರೇಮಭಿಕ್ಷ ಸಿನಿಮಾಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ತನ್ನ ತಮ್ಮನ ಸಾವಿಗೆ ಕಾರಣಳಾದ ನಾಯಕಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ  ಖಳ ನಾಯಕನೊಂದಿಗೆ ನಾಯಕ ಹೇಗೆ ಹೋರಾಟ ನಡೆಸಿ, ತನ್ನ ಹುಡುಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದೇ  ಮುಗಿಲ ಮಲ್ಲಿಗೆ ಚಿತ್ರದ ಕಥಾವಸ್ತು. 

ಇದನ್ನೂ ಓದಿ: ಭೀಮ ಚೆಲುವೆ ಪ್ರಕೃತಿ ಸೌಂದರ್ಯಗೆ ಬಿಗ್ ಪ್ರಾಜೆಕ್ಟ್ ನಲ್ಲಿ ಅವಕಾಶ

ಕಮರೊಟ್ಟು ಚೆಕ್ ಪೋಸ್ಟ್, ಒಲವೇ ಮಂದಾರ -2 ಖ್ಯಾತಿಯ ನಟ ಸನತ್ ಹಾಗೂ ಸಹನಾಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಗಿಲ ಮಲ್ಲಿಗೆ ಸಿನಿಮಾಗೆ ಹೊಸಕೊಟೆ ಸುತ್ತ ಮುತ್ತಲಿನ ಗಟ್ಟಿಗನಬ್ಬೆ, ಪೂಜೇನ ಅಗ್ರಹಾರ,  ಕಂಬ್ಳಿಪುರ ಕಾಟೇರಮ್ಮ, ಭಕ್ತರಹಳ್ಳಿ ಮುಂತಾದ ಲೊಕೇಶನ್ ಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದ್ದು, ಸಧ್ಯದಲ್ಲೇ ಎರಡನೇ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದು.

ಈ ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ರಾಜೀವ್ ಕೃಷ್ಣ ಅವರ  ಸಾಹಿತ್ಯ, ವಿನಯ್  ಜಿ. ಆಲೂರು ಅವರ ಸಂಕಲನ, ಥ್ರಿಲ್ಲರ್ ಮಂಜು ಅವರ  ಸಾಹಸ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಈ ಚಿತ್ರದಲ್ಲಿ ಬಲ ರಾಜ್ ವಾಡಿ, ಶಂಕನಾದ ಆಂಜಿನಪ್ಪ , ಅನ್ನಪೂರ್ಣ, ಶಂಕರ್, ಎಂ.ವಿ. ಸಮಯ್, ಮೋನಿಕ,ಚಂದ್ರಕಲ , ರೇಣುಕಾ,ಜಯರಾಂ, ವಸಂತ ನಾಯಕ್, ಪ್ರವೀಣ್, ಧರಣಿ, ಕಿಶೋರ್ ಕುಂಬ್ಳೆ, ಶಿವು ಕಾಸರಗೋಡು, ಬೃಂದ ಹಾರಿಕ, ರಾಜೇಶ್ , ರವಿ, ಧಿನ, ಕಿರಣ್ ಗಟ್ಟಿಗನಬ್ಬೆ ಮುಂತಾದವರು ನಟಿಸುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದೆ.

ಇದನ್ನೂ ಓದಿ: 42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News