)
ನಟಿ ನಮ್ರತಾ ಗೌಡ ಕಿರುತೆರೆಯ ಪುಟ್ಟ ಗೌರಿ ಮದುವೆ ಸೀರಿಯಲ್ನಲ್ಲಿ ʻಹಿಮʼ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದರು. ಆ ಬಳಿಕ ಹಲವಾರು ಧಾರಾವಾಹಿಗಳಲ್ಲಿ ನಮ್ರತಾ ನಟಿಸಿದ್ದಾರೆ. ನಮ್ರತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದರು. ತಮ್ಮ ಏರು ಧ್ವನಿ ಮೂಲಕವೇ ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ್ದರು.
ಸಂದರ್ಶನವೊಂದರಲ್ಲಿ ನಮ್ರತಾ ಗೌಡ ತಮ್ಮ ಟಾಕ್ಸಿಕ್ ಲವ್ ರಿಲೇಶನ್ಶಿಪ್ ಬಗ್ಗೆ ಮಾತನಾಡಿದ್ದಾರೆ. ನಾನು ಅವನನ್ನೇ ಮದುವೆ ಆಗಬೇಕು ಅನ್ಕೊಂಡಿದ್ದೆ ಎಂದು ಆ ಹುಡುಗನ ಬಗ್ಗೆ ತಿಳಿಸಿದ್ದಾರೆ.
ನಮ್ರತಾ ಗೌಡ ಪಿಯುಸಿ ಓದುವಾಗ ಒಬ್ಬ ಹುಡುಗನನ್ನು ಪ್ರೀತಿ ಮಾಡಿದ್ದರಂತೆ. ಆತನನ್ನು ನಾನು ತುಂಬಾ ಹಚ್ಚಿಕೊಂಡಿದ್ದೆ. ಅವನನ್ನೇ ಮದುವೆ ಆಗಬೇಕು ಅಂದುಕೊಂಡಿದ್ದೆ. ನನ್ನ ಜೀವನದಲ್ಲಿ ಇದು ಒಂದೇ ರಿಲೇಶನ್ಶಿಪ್ ಎಂದರು.
ಅದು ಪಿಯುಸಿ ಓದುವ ವಯಸ್ಸಾಗಿದ್ದರಿಂದ ಅಷ್ಟೊಂದು ಮೆಚೂರಿಟಿ ಇಬ್ಬರಲ್ಲೂ ಇರಲಿಲ್ಲ. ಆ ಸಂಬಂಧ ಉಳಿಸಿಕೊಳ್ಳಬೇಕು ಅಂತ ನಾನೊಬ್ಬಳೆ ಹೋರಾಡುತ್ತಿದ್ದೆ. ಆದರೆ ಒಂದು ಸಮಯದಲ್ಲಿ ಬೇಡ ಅನಿಸಿ ಬಿಡ್ತು ಅದಕ್ಕೆ ದೂರ ಆದೆ ಎಂದಿದ್ದಾರೆ.
ನಾನು ಪಿಯುಸಿ ಮುಗಿತಿದ್ದಂತೆ ಆಕ್ಟಿಂಗ್ ಕಡೆ ಗಮನ ಕೊಟ್ಟೆ ಆಗ ಸಂಬಂಧ ಹಾಳಾಗೋಕೆ ಶುರು ಆಯ್ತು. ನನಗೆ ಅವನನ್ನೇ ಮದುವೆ ಆಗಬೇಕು ಅಂತ ಇತ್ತು, ಆದರೆ ಅವನಾಗಿಯೇ ಬಂದು ಅವನೇ ಬಿಟ್ಟು ಹೋದ ಎಂದಿದ್ದಾರೆ.
ನಾನು ಡಿಪ್ರೆಷನ್ಗೆ ಹೋಗಿದ್ದೆ. ಅಷ್ಟೊಂದು ಟಾಕ್ಸಿಕ್ ಆಗಿತ್ತು ಆ ಸಂಬಂಧ. ಅತ್ತು, ಕೂಗಿ ಕೂಗಾಡಿದರೂ ಆತ ಕೇಳಲಿಲ್ಲ ಎಂದು ರಾಜೇಶ್ ಗೌಡ ಯೂಟೂಬ್ ಚಾನೆಲ್ ಸಂದರ್ಶನದಲ್ಲಿ ನಮ್ರತಾ ಗೌಡ ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.